Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಪ್ರತಿ ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ.ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು ಹೇಳಲಾಗುತ್ತದೆ. ಈ ವಾರ ನಿಮ್ಮ ರಾಶಿಗಳ ಗೋಚರಫಲ, ಲಾಭ- ನಷ್ಟ, ಪರಿಹಾರ ಕುರಿತಾದ ಸವಿವರ ನೀಡಲಾಗಿದೆ.

Ad Widget . Ad Widget .

ಮೇಷ ರಾಶಿ: ಕಳೆದ 15 ದಿನಗಳ ಹಿಂದೆ ಕಳೆದು ಹೋದ ಸೂರ್ಯಗ್ರಹಣ ಅಲ್ಪ ಕಾಲ ಉಳಿದಿದ್ದರೂ ಪ್ರಪಂಚದ ಮೇಲೆ ಆಗುವ ಪರಿಣಾಮ ಅನೇಕ . ಮೇಷ ರಾಶಿಯಲ್ಲಿ ಚಂದ್ರ ಗ್ರಹಣ ಉಂಟಾಗಿ ರಾಹುವೇ ಚಂದ್ರನನ್ನು ನುಂಗಲು ಹೊರಟಿದ್ದಾನೆ. ಇದನ್ನು ಅರ್ಥೈಸುವುದು ಸರಿಯಾದ ವಿಚಾರವೇ. ಸೂರ್ಯ ಚಂದ್ರ ಗ್ರಹಣಗಳು ಬಂದು ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಮಾನವನು ಮಾಡಿದ ಪಾಪಗಳ ಸಂಕೇತವೇ ಗ್ರಹಣ. ಯಾವ ದಿಕ್ಕನ್ನು ತೋರದೆ ಸಮಸ್ಯೆಯಲ್ಲಿಟ್ಟು ಚಿಂತಿತರನ್ನಾಗಿ ಮಾಡುತ್ತಾನೆ. ಗ್ರಹಣ ಶಾಂತಿ ಮಾಡಿಕೊಳ್ಳಿ. 6 ಮುಖ ಉಳ್ಳ ಷಣ್ಮುಖನನ್ನು ಪೂಜಿಸಿ.

Ad Widget . Ad Widget .

ವೃಷಭ ರಾಶಿ: ಈ ವಾರವು ಶುರುವಾಗುವ ಗ್ರಹ ಸ್ಥಿತಿಯಲ್ಲಿ 6ನೆ ತಾರೀಖು ಉತ್ತಮವಾಗಿದೆ. ಕೆಲಸಗಳು ಕೈ ಸೇರಿ ಸುಖ ಸಂತಸ ನೀಡುತ್ತದೆ. ಗ್ರಹಣ ವೀಕ್ಷಣೆ ಬೇಡ. ಗ್ರಹಣ ಕಾಲದಲ್ಲಿ ಇಷ್ಟ ದೇವರನ್ನು ಪೂಜಿಸಿ. ಈಗಾಗಲೇ ಕಷ್ಟ ಪಡಿತಿರುವಾಗ ಮತ್ತೊಂದು ಕಷ್ಟ ಮೈ ಮೇಲೆ ಎಳೆದುಕೊಳ್ಳಬೇಡಿ. ದುರ್ಗೆಯನ್ನು ಪೂಜಿಸಿ. ಸೂರ್ಯನನ್ನು ಪ್ರಾರ್ಥಿಸಿ.

ಮಿಥುನ ರಾಶಿ: 10ರ ಗುರು,ಏಕದಶಕ್ಕೆ ಬರುವವರೆಗೂ ತಾಳ್ಮೆ ಇರಲಿ. 9ಕ್ಕೆ ಇನ್ನೂ ಉತ್ತಮ ಕಾಲವು ನಿಮ್ಮದಾಗಲಿವೆ. ಅಲ್ಲಿಯವರೆಗೂ ನಿಧಾನವಾಗಿ ಸಾಗಿ. ನಿರ್ಧಾರದಲ್ಲಿ ಆತುರ ಬೇಡ. ರಾಮ ಅಷ್ಟೋತ್ತರ ಪಾರಾಯಣ ಮಾಡಿದರೆ ಅವನೇ ನಿಮ್ಮನ್ನು ಸಂರಕ್ಷಿಸುತ್ತಾನೆ.

ಕಟಕ ರಾಶಿ: ಜಲ ರಾಶಿಯಲ್ಲಿ ಜನಿಸಿದವರಿಗೆ ಗ್ರಹಣ ಕಾಲದ ದೋಷ ಬರುವುದಿಲ್ಲ. 9ರ ಗುರುವು ಆನೆಯ ಬಲ ಕೊಟ್ಟು ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುತ್ತಾನೆ. ಆನೆ ಎಂದರೆ ಗಜ ಮುಖ. ಈ ವಾರ ಇಡೀ ಗಣಪನನ್ನು ಪೂಜಿಸಿ, ಧ್ಯಾನಿಸಿ. ವಿಘ್ನಗಳು ದೂರ ಆಗಿ ಮನಸಂತೋಷ , ಧನ ಲಾಭ ದೊರೆಯುತ್ತದೆ.

ಸಿಂಹ ರಾಶಿ: ಶಷ್ಟ ಶನಿ ಫಲ ಕೊಡುವ ಕಾಲ. ಯಥಾ ಸ್ಥಾನದಲ್ಲಿ ಗುರು ಸ್ವಕ್ಷೇತ್ರದಲ್ಲಿದ್ದು ಕೆಡಕನ್ನು ಮಾಡದೆ ಒಳ್ಳೆಯದನ್ನು ಮಾಡಬೇಕಾದರೆ ನೀವು ಯಾರಿಗಾದರೂ ಸಹಾಯ ಮಾಡಿರಬೇಕು. ಸೂರ್ಯ ಪ್ರಾರ್ಥನೆ ಮಾಡಿ. ಗ್ರಹಣ ಫಲವಾಗಿ ಆಕಸ್ಮಿಕ ಧನ ಯೋಗ ಬರುತ್ತದೆ. ದುರ್ಗೆ ಪೂಜೆ ಅತ್ಯಗತ್ಯ.

ಕನ್ಯಾ ರಾಶಿ: ಪಂಚಮ ಶನಿಯ ಆವೃತ್ತಿ ಇನ್ನೂ ಮುಗಿದಿಲ್ಲ. ಪಾಪದಿಂದ ತಾಪಗಳು, ತಾಪದಿಂದ ಶಾಪಗಳು. ಈ ಸರಣಿಯು ಯಾರನ್ನೂ ಬಿಡುವುದಿಲ್ಲ. ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ದೇವರೇ ಸಂಕಷ್ಟ ತಂದೊಡ್ಡಿ ಕಂಟಕ ಪ್ರಾಯವಾಗುತದೆ. ಸಪ್ತಮದ ಗುರು ಇರುವುದರಿಂದ ದೇವ ಬ್ರಾಹ್ಮಣ ಪೂಜೆಯು ಬೇಕು. ಕೊಟ್ಟವರಿಗೆ ಕೊಟ್ಟದ್ದನ್ನು ಹಿಂದಿರುಗಿಸಿ ಶುಭ ಫಲ ಪಡೆದುಕೊಳ್ಳಿ. ದತ್ತಾತ್ರೇಯ ಅಷ್ಟೋತ್ತರ ಪಾರಾಯಣ ಮಾಡಿ. ದಕ್ಷಿಣಾಮೂರ್ತಿ ಪ್ರಾರ್ಥನೆ ಇರಲಿ.

ತುಲಾ ರಾಶಿ: ಸೂರ್ಯ ಗ್ರಹಣದ ದೋಷಗಳು ಹಿಂದೆ ಸರಿದು ಮೇಷ ರಾಶಿಯಲ್ಲಿ ಚಂದ್ರ ಗ್ರಹಣ ಆಗುವುದರಿಂದ ನಿಮಗೆ ಗ್ರಹಣ ಬಾಧೆಯು ಇರುವುದಿಲ್ಲ. ಆದರೂ ಚತುರ್ಥ ಶನಿ, ಷಷ್ಟದಲ್ಲಿ ಇರುವ ಗುರು ವಿಶೇಷ ಫಲ ಕೊಡದಿದ್ದರೂ ನಿಮ್ಮ ಹಿಂದಿನ ಜನ್ಮದ ಪುಣ್ಯಗಳು ಪ್ರವಾಹದಂತೆ ಉಕ್ಕಿ ನಿಮ್ಮನ್ನು ಕಾಪಾಡುತ್ತದೆ. ಧನ ಲಾಭ ಇದೆ. ಕೆಲಸ ಕಾರ್ಯಗಳನ್ನು ವಿವೇಚನೆಯಿಂದ ಮಾಡಿ. ಲಕ್ಷ್ಮಿ ನರಸಿಂಹ ಪ್ರಾರ್ಥನೆಯಿಂದ ನಿಮಗೆ ಯಾವ ದೋಷವೂ ಬಾರದಿರಲಿ.

ವೃಶ್ಚಿಕ ರಾಶಿ: ಚೇಳು ಕುಟುಕಿ ವಿಷವು ಹತ್ತುತ್ತದೆ. ವಿಷಯವೇ ವಿಷವಾದರೆ ಮಾಡುವುದು ಏನು? ಯಾವುದೇ ವ್ಯಾಪಾರ, ಉದ್ಯೋಗಕ್ಕೆ ಮುಂದೆ ಹೆಜ್ಜೆ ಇಡಬೇಕಿದ್ದರೆ ಸುಧೀರ್ಘ ಆಲೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಈ ಸಮಯದಲ್ಲಿ ಋಣದ ಹೊರ ಇಳಿಯಲಿ, ಅಭಿವೃದ್ಧಿಯಾಗಲಿ ಎಂದು ನೆನೆದು ಕಾಲಭೈರವನನ್ನು ಪೂಜೆ ಮಾಡಿ.

ಧನು ರಾಶಿ: ಶನಿಯು 2ರಲ್ಲಿದ್ದು ಸಂಚಾರ ಮುಗಿಸುವ ಕಾಲ. ಚತುರ್ಥ ಪಂಚಮಕ್ಕೆ ಗುರು ಬಂದು ಯಶಸ್ಸು ಧನ ಕೀರ್ತಿ ಲಾಭ ಕೊಟ್ಟು ಸಂರಕ್ಷಿಸುತ್ತಾನೆ. ನಿತ್ಯ ಗುರು ಚರಿತ್ರೆ ಪಾರಾಯಣ ಬಿಡಬೇಡಿ. ಏನೇ ಮಾಡಬೇಕಾದರೂ ನಿಮಗೆ ಒಳ್ಳೆಯ ಕಾಲವು ಸನಿಹದಲ್ಲಿದ್ದು ಒಳ್ಳೆಯ ಸಮಯಕ್ಕಾಗಿ ಕಾಯಿರಿ. ನೀವು ರಾಶ್ಯಾಧಿಪತಿ ಗುರುವಿಗೂ ಪ್ರಾರ್ಥನೆ ಮಾಡಿ, ಶ್ರೀನಿವಾಸ ಕಲ್ಯಾಣ ಪಾರಾಯಣ ಮಾಡಿದರೆ ಒಳ್ಳೆಯದಾಗುತ್ತದೆ.

ಮಕರ ರಾಶಿ: ಜನ್ಮ ಶನಿಯು ಬಿಟ್ಟು, ದ್ವಿತೀಯಕ್ಕೆ ಬರುತ್ತಾನೆ. ಗುರುವು 2ರಲ್ಲಿ ಇದ್ದು, ನಿಮ್ಮ ಜೀವನವು ಬದಲಾವಣೆಯನ್ನು ಹೊಂದುವ ಸಮಯ. ಕಲಿತ ಪಾಠ, ವಿದ್ಯೆಯನ್ನು ಕೊಟ್ಟ ಗುರುವನ್ನು ಮರೆಯಬಾರದು. ಶನಿಯು ಎಚ್ಚರಿಕೆ ಪಾಠ ಹಾಕಿ ಕೊಟ್ಟಿದ್ದಾನೆ. ಅದರಂತೆ ನಡೆದರೆ ದೈವ ರಕ್ಷಣೆ ಸಿಗುತ್ತದೆ. ಶಿವನಿಗೆ ಕಲ್ಪೋಕ್ತ ಪೂಜೆ ಮಾಡಿ ಸಹಸ್ರನಾಮ ಪಾರಾಯಣ ಮಾಡಿ ಪೂಜಿಸಿ.

ಕುಂಭ ರಾಶಿ: 12ರ ಶನಿ ಜನ್ಮಕ್ಕೆ ಬಂದರೂ ಗುರು ದ್ವಿತೀಯದಲ್ಲಿ ಇರುವುದರಿಂದ ಯಾವ ಕೆಡಕನ್ನು ಮಾಡುವುದಿಲ್ಲ. ಶನಿಯು ಧರ್ಮಕ್ಕೆ ಕೈ ಹಾಕಿದವರನ್ನು, ದೈವದಲ್ಲಿ ನಂಬಿಕೆ ಇಲ್ಲದವರನ್ನು ಶಿಕ್ಷಿಸುತ್ತಾನೆ. ಆದರೆ, ಏಪ್ರಿಲ್ 21, 2023ರಿಂದ ಗುರು ರಕ್ಷಣೆ ಇದ್ದು ಯಾವ ಗ್ರಹಗಳು ನಿಮ್ಮನ್ನು ಕಾಡುವುದು ಇಲ್ಲ. ಕೆಡಿಸುವುದು ಇಲ್ಲ. ಪಾರಿಜಾತ ಪುಷ್ಪದಿಂದ ಕೃಷ್ಣನನ್ನು ಪೂಜಿಸಿದರೆ ನಿಮ್ಮ ವೃಥಾ ಕೋಪವು ಕಡಿಮೆಯಾಗಿ ಜ್ಞಾನದಿಂದ ಕೆಲಸ ಮಾಡಿ ನಿಮಗೆ ಹೊಸ ಆಯಾಸ ಕೊಡದೆ ಆನಂದ ಉಂಟು ಮಾಡಿಕೊಳ್ಳಲು ದತ್ತಾತ್ರೇಯ 11ನೇ ಅಧ್ಯಾಯ ಪಾರಾಯಣ ಮಾಡಿ.

ಮೀನ ರಾಶಿ: ದೈವ ಸೃಷ್ಟಿಯಲ್ಲಿ ಎಲ್ಲವೂ ಜಲ ಸ್ವರೂಪವೇ. ಆನಂತರದಲ್ಲಿ ಭೂಮಿ, ವಾಯು, ಅಗ್ನಿ, ಆಕಾಶವನ್ನು ನಿರ್ವಿುಸಿದವರು ಮಹಾದೇವ. 11ರ ಶನಿ ಲಗ್ನದಲ್ಲಿ ಗುರು ಇದ್ದು ಚಿಂತಿಸುವ ಕಾಲ ಅಲ್ಲ. ಭಗವದ್ ಚಿಂತನೆಯಿಂದ ಆತಂಕ ದೂರವಾಗುತ್ತದೆ.

Leave a Comment

Your email address will not be published. Required fields are marked *