Ad Widget .

ಸುಳ್ಯ: ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ|ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರಪಣೆಗೆ ವಿಕಲಚೇತನ ಹೆಸರಿನಲ್ಲಿ ಬಂದಿರುವ ಅನುದಾನ ದುರುಪಯೋಗ,ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ.

Ad Widget . Ad Widget .

ಅರಂತೋಡು ಗ್ರಾಮದ ಬೆದ್ರಪಣೆ ವಿಕಲಚೇತನ ನಿವಾಸಿಯಾದ ಹೊನ್ನಪ್ಪ .ಬಿ.ಬಿನ್ ಸುಬ್ಬಯ್ಯ ಗೌಡ ಎಂಬವರಿಗೆ ಅರಂತೋಡು ಗ್ರಾಮ ಪಂಚಾಯತ್ ಕ್ರಿಯ ಯೋಜನೆ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಬಂದಿರುವ ಕಾಂಕ್ರೀಟ್ರಿಕರಣವನ್ನು ಸುಬ್ಬಯ್ಯ ಗೌಡರ ಮನೆಯಿಂದ ಒಂದುವರೆ ಕಿಲೋಮೀಟರ್ ದೂರದಲ್ಲಿರುವಂತ ಮೇಲಡ್ತಲೆ ವೆಂಕಪ್ಪ ಗೌಡರ ಮನೆಯ ಬಳಿ ಕಾಂಕ್ರೀಟ್ರಿಕರಣ ಮಾಡಿದ್ದಾರೆ.

Ad Widget . Ad Widget .

ವಿಕಲಚೇತನದವರಿಗೆ ಸರಕಾರದಿಂದ ಬರುವಂತ ಸವಲತ್ತುಗಳನ್ನು ಈ ರೀತಿಯಾಗಿ ದುರುಪಯೋಗ ಮಾಡಿದ ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನನ್ನ ಹೆಸರಲ್ಲಿ ಬಂದಂತ ಕಾಂಕ್ರೀಟಿಕರಣವನು ನನ್ನ ಮನೆ ಹತ್ತಿರ ಅಂಬೇಡ್ಕರ್ ರಕ್ಷಣಾ ವೇದಿಕೆಯ ಹೋರಾಟದ ಮೂಲಕ ಹಾಕಿಸಿಕೊಡಬೇಕು. ಇದಕ್ಕೆ ಯಾರೆಲ್ಲ ಕಾರಣ ಆಗಿರುವಂತ ಅಧಿಕಾರಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿಲ್ಲ ಬೇಕು ಇನ್ನು ಮುಂದೆ ಯಾವ ವಿಕಲಚೇತನರಿಗೂ ಈ ರೀತಿಯ ಅನ್ಯಾಯವಾಗಬಾರದು ಎಂದು ಹೊನ್ನಪ್ಪ ಗೌಡ ಎಂಬವರು ನನಗೆ ನ್ಯಾಯ ಕೊಡಿಸಿ ಎಂದು ಸಂಘಟನೆಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಘಟಕದ ಅಧ್ಯಕ್ಷರ ತೇಜಕುಮಾರ್ ಕಾರ್ಯದರ್ಶಿ ನವೀನ ಇವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *