ಪುತ್ತೂರು: ‘ರೈಟ್ ಪೋಯಿ’ ಎಂದ ವಿದ್ಯಾರ್ಥಿ|ನಿರ್ವಾಹಕನನ್ನು ಬಿಟ್ಟು ಬಸ್ ಚಲಾಯಿಸಿಕೊಂಡು ಹೋದ ಚಾಲಕ

ಸಮಗ್ರ ನ್ಯೂಸ್: ನಿರ್ವಾಹಕನನ್ನು ನಿಲ್ದಾಣದಲ್ಲಿಯೇ ಬಿಟ್ಟು ಚಾಲಕ ಬಸ್ ಚಲಾಯಿಸಿಕೊಂಡು ಹೋದ ಘಟನೆ ಪುತ್ತೂರಿನಲ್ಲಿ ನ.3ರಂದು ನಡೆದಿದೆ.

Ad Widget ... ..

ಪುತ್ತೂರುನಿಂದ ಮಂಗಳೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕ ನಿರ್ವಾಹಕನನ್ನು ಪುತ್ತೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ನಿಲ್ದಾಣದಿಂದ ಬಸ್ ಹೊರಡುವ ವೇಳೆ ವಿದ್ಯಾರ್ಥಿಯೋರ್ವ ‘ರೈಟ್ ಪೋಯಿ’ ಎಂದು ಹೇಳಿದ್ದ.‌ ನಿರ್ವಾಹಕನೇ ‘ರೈಟ್ ಪೋಯಿ’ ಎಂದು ಹೇಳಿದ್ದಾಗಿ ಭಾವಿಸಿದ ಚಾಲಕ ಬಸ್ ಚಲಾಯಿಸಿದ್ದಾರೆ. ಪುತ್ತೂರು ನಿಲ್ದಾಣದಿಂದ ಹೊರಟ ಬಸ್ ಎಂ.ಟಿ.ರಸ್ತೆಯಾಗಿ ತಾಲೂಕು ಕಛೇರಿ ರಸ್ತೆ ದಾಟಿ ಮುಖ್ಯ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ಚಾಲಕನಿಗೆ ಬಸ್ಸಿನಲ್ಲಿ‌ ನಿರ್ವಾಹಕ ಇಲ್ಲದಿರುವುದು ಗೊತ್ತಾಗಿದೆ.

Ad Widget

ಇದೇ ವೇಳೆ ಬೇರೊಂದು ಕೆ.ಎಸ್.ಆರ್.ಟಿ.ಸಿ. ಬಸ್ ಮೂಲಕ‌ ನಿರ್ವಾಹಕ ಆಗಮಿಸಿ ತನ್ನ ಕರ್ತವ್ಯದ ಬಸ್ ಸೇರಿಕೊಂಡಿದ್ದಾರೆ. ಚಾಲಕ ಮತ್ತು ನಿರ್ವಾಹಕನ‌ ಅಚಾತುರ್ಯದಿಂದಾಗಿ ಸುಮಾರು 15 ನಿಮಿಷ ಸಮಯ ಬಸ್ ಸಂಚಾರ ತಡವಾಗಿದ್ದು ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *