Ad Widget .

ಪಾಕಿಸ್ತಾನಕ್ಕಿಂದು ಮಾಡು ಇಲ್ಲವೇ ಮಡಿ ಪಂದ್ಯ| ಬಾಂಗ್ಲಾವನ್ನು ಅಡಿಲೇಡ್ ನಲ್ಲಿ ಪುಡಿಗಟ್ಟಿದ ಭಾರತ| ಟ 20 ಹೈಲೈಟ್ಸ್ ಇಲ್ಲಿದೆ…

ಸಮಗ್ರ ನ್ಯೂಸ್: ಟಿ20 ವಿಶ್ವಕಪ್ ರೋಚಕ ಘಟ್ಟವನ್ನು ತಲುಪಿದ್ದು ಗುರುವಾರ ನಡೆಯಲಿರುವ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಕದನ ಸಾಕಷ್ಟು ಕುತೂಹಲ ಮೂಡಿಸಿದೆ. ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಪಾಕಿಸ್ತಾನ ತಂಡ ಉಳಿದುಕೊಳ್ಳಬೇಕಾದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾಗಿದೆ. ಸಾಕಷ್ಟು ಉತ್ತಮ ಅಂತರದೊಂದಿಗೆ ಗೆಲುವು ಸಾಧಿಸುವುದು ಪಾಕ್ ಪಾಲಿಗೆ ಅನಿವಾರ್ಯವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

Ad Widget . Ad Widget . Ad Widget .

ದಕ್ಷಿಣ ಆಫ್ರಿಕಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸೋಲು ಅನುಭವಿಸದೆ ಅಜೇಯವಾಗಿರುವ ಏಕೈಕ ತಂಡವಾಗಿದೆ. ಸೂಪರ್ 12 ಹಂತದಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ತಂಡದ ಮೂರು ಪಂದ್ಯಗಳು ಮುಕ್ತಾಯವಾಗಿದ್ದು ಈ ಪೈಕಿ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಒಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಹೀಗಾಗಿ ಮೂರು ಪಂದ್ಯಗಳಲ್ಲಿ 5 ಅಂಕಗಳಿಸಿಕೊಂಡಿದೆ. ಇತ್ತ ಪಾಕಿಸ್ತಾನ ತಂಡ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರವೇ ಸಾಧಿಸಿದ್ದು ಎರಡು ಅಂಕಗಳನ್ನು ಮಾತ್ರವೇ ಖಾತೆಯಲ್ಲಿ ಹೊಂದಿದೆ.

ಅಡಿಲೇಡ್ ಓವಲ್‌ ಮೈದಾನದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ಜೀವಂತವಾಗಿರಿಸಿಕೊಂಡಿದೆ. ಮಳೆಯಿಂದಾಗಿ ಡೆಕ್ವರ್ತ್‌ ನಿಯಮದಡಿಯಲ್ಲಿ ಕಡಿತಗೊಂಡಿದ್ದ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಗೆದ್ದು ಬೀಗಿದೆ.

ಪವರ್‌ ಪ್ಲೇ ಓವರ್‌ಗಳಲ್ಲಿ ಒಂದೂ ವಿಕೆಟ್ ಕಳೆದುಕೊಳ್ಳದೆ ಅಬ್ಬರಿಸಿದ ಬಾಂಗ್ಲಾದೇ ತಂಡುವ 6 ಓವರ್‌ಗಳ ಪವರ್‌ಪ್ಲೇನಲ್ಲಿ ವಿಕೆಟ್ ಕಳೆದುಕೊಳ್ಳದೆ 60ರನ್ ಕಲೆಹಾಕಿತು. ಮಳೆಯಿಂದಾಗಿ ಪಂದ್ಯ ನಿಲ್ಲುವ ಮೊದಲು ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ 7 ಓವರ್‌ಗೆ 66ರನ್ ಕಲೆಹಾಕಿದ್ದು, ಡೆಕ್ವರ್ತ್‌ ಲೂಹಿಸ್ ನಿಯಮದಡಿಯಲ್ಲಿ 17 ರನ್ ಮುನ್ನಡೆ ಸಾಧಿಸಿತ್ತು.

26 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದ್ದ ಲಿಟ್ಟನ್ ದಾಸ್ ಜೊತೆಗೆ ನಜ್ಮುಲ್ ಶಾಂಟೊ 16 ಎಸೆತಗಳಲ್ಲಿ 7ರನ್ ಕಲೆಹಾಕಿದ್ದರು. ಮಳೆಯಿಲ್ಲದೇ ಹೋಗಿದ್ದಲ್ಲಿ ಬಾಂಗ್ಲಾದೇಶ ಅದೆಷ್ಟು ರನ್‌ ಕಲೆಹಾಕಿ ಬಿಡುತ್ತಿತ್ತೂ ಎಂಬುದು ಅರಿವಿಗೆ ಬರದಂತಿತ್ತು.

ಮತ್ತೊಂದು ಪಂದ್ಯದಲ್ಲಿ ಆರಂಭಿಕ ಆಟಗಾರ ಮ್ಯಾಕ್ಸ್ ಒಡೌಡ್‌ (52, 47ಎ, 4X8, 6X1) ಅವರ ಸೊಗಸಾದ ಅರ್ಧಶತಕ ಮತ್ತು ಬೌಲರ್‌ಗಳ ಶ್ರಮದಿಂದ ನೆದರ್ಲೆಂಡ್ಸ್ ತಂಡವು ಈ ಬಾರಿಯ ಟಿ20 ವಿಶ್ವಕಪ್ ಸೂಪರ್ 12 ಹಂತದಲ್ಲಿ ಮೊದಲ ಜಯ ಸಂಪಾದಿಸಿತು. ಬುಧವಾರ ನಡೆದ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಜಿಂಬಾಬ್ವೆ ತಂಡವನ್ನು ಪರಾಭವಗೊಳಿಸಿತು.

ನೆದರ್ಲೆಂಡ್ಸ್ ತಂಡವು ಈಗಾಗಲೇ ಟೂರ್ನಿಯ ಸೆಮಿಫೈನಲ್ ಅರ್ಹತೆಯ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಜಯದೊಂದಿಗೆ ಆ ತಂಡವು ಜಿಂಬಾಬ್ವೆಯನ್ನೂ ಬಹುತೇಕ ಹೊರದಬ್ಬಿತು.

ಟಾಸ್‌ ಗೆದ್ದ ಜಿಂಬಾಬ್ವೆ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪಾಲ್‌ ವ್ಯಾನ್‌ ಮೀಕೆರನ್ (29ಕ್ಕೆ 3) ಅವರನ್ನೊಳಗೊಂಡ ನೆದರ್ಲೆಂಡ್ಸ್ ಬೌಲಿಂಗ್ ಪಡೆಯು ಕ್ರೇಗ್‌ ಇರ್ವಿನ್ ಬಳಗವನ್ನು 19.2 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಮಾಡಿತು.

ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್ ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆಯೇ ಐದು ವಿಕೆಟ್‌ ಕಳೆದುಕೊಂಡು 120 ರನ್‌ ಗಳಿಸಿತು. ಮ್ಯಾಕ್ಸ್ ಒಡೌಡ್‌ ಮತ್ತು ಟಾಪ್‌ ಕೂಪರ್‌ (32) ಗೆಲುವಿನ ರೂವಾರಿಗಳಾದರು.

Leave a Comment

Your email address will not be published. Required fields are marked *