Ad Widget .

ಮಿಸ್ ಅರ್ಜೆಂಟೀನಾ – ಮಿಸ್ ಪೋರ್ಟೊರಿಕೊ ‘ಸುಂದರಿ’ಯರ ವಿವಾಹ.!

ಅರ್ಜೆಂಟೈನಾ: ’ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಅರ್ಜೆಂಟೈನಾ 2020 ’ ಮರಿಯಾನಾ ವರೆಲಾ ಮತ್ತು ’ಗ್ರ್ಯಾಂಡ್ ಇಂಟರ್ನ್ಯಾಷನಲ್ ಪೋರ್ಟೊ ರಿಕೊ 2020 ’ ಕಿರೀಟವನ್ನು ಅಲಂಕರಿಸಿದ ಫ್ಯಾಬಿಯೊಲಾ ವ್ಯಾಲೆಂಟಿನ್, ಈ ಇಬ್ಬರು ಸುಂದರಿಯರು ಮದುವೆಯಾಗಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿಕೊಂಡಿದ್ದಾರೆ.

Ad Widget . Ad Widget .

ನವವಿವಾಹಿತೆಯರು ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ರಹಸ್ಯವಾಗಿಟ್ಟ ನಂತರ ಅಧಿಕೃತಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

Ad Widget . Ad Widget .

“ನಮ್ಮ ಸಂಬಂಧವನ್ನು ಖಾಸಗಿಯಾಗಿ ಇರಿಸಿಕೊಳ್ಳಲು ನಿರ್ಧರಿಸಿದ ಬಳಿಕ, ನಾವು ಅ.೨೮ ರಂದು ವಿಶೇಷ ದಿನದಂದು ವಿವಾಹವಾಗಿ ಬಹಿರಂಗಪಡಿಸಿದ್ದೇವೆ” ಎಂದು ಶೀರ್ಷಿಕೆ ಬರೆದು ಇನ್ಟ್ರಾ ಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ, ಮರಿಯಾನಾ ವರೆಲಾ ಮತ್ತು ಫ್ಯಾಬಿಯೊಲಾ ವ್ಯಾಲೆಂಟಿನ್ ಜೊತೆಯಾಗಿ ರಜಾದಿನಗಳನ್ನು ಕಳೆದಿರುವುದು ಮತ್ತು ಮದುವೆಯ ಪ್ರಸ್ತಾಪದ ಕೆಲವು ಕ್ಲಿಪಿಂಗ್ಸ್ ಅನ್ನು ಹಂಚಿಕೊಂಡಿದ್ದಾರೆ.

ವರೆಲಾ ಮತ್ತು ವ್ಯಾಲೆಂಟಿನ್ ಇಬ್ಬರು ಸೌಂದರ್ಯ ಸ್ಪರ್ಧೆಯ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2020 ನಲ್ಲಿ ಭೇಟಿಯಾಗಿದ್ದು ಸ್ಪರ್ಧೆಯ ಕೊನೆಯವರೆಗೂ ಸ್ನೇಹಿತರಾಗಿದ್ದರು. ವರೆಲಾ ಮಿಸ್ ಯೂನಿವರ್ಸ್ 2019 ರಲ್ಲಿ ಅರ್ಜೆಂಟೀನಾವನ್ನು ಪ್ರತಿನಿಧಿಸಿದರು ಮತ್ತು ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2020 ರಲ್ಲಿ ಅಗ್ರ 10 ಸ್ಥಾನಗಳಲ್ಲಿ ಪಡೆವರಾಗಿದ್ದರು. ದಂಪತಿಗಳು ಹಲವಾರು ಮಾಡೆಲಿಂಗ್ ಏಜೆನ್ಸಿಗಳೊಂದಿಗೆ ಒಟ್ಟಿಗೆ ಕೆಲಸ ಮಾಡಿದ್ದಾರೆ.

Leave a Comment

Your email address will not be published. Required fields are marked *