ಕಿನ್ನಿಗೋಳಿ: ಅತಿವೇಗದ ಕಾರ್ ಡಿಕ್ಕಿ, ಮಹಿಳೆ ಗಂಭೀರ

ಸಮಗ್ರ ನ್ಯೂಸ್: ಪಾದಚಾರಿ ಮಹಿಳೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಿಸಿದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರ ಗಾಯಗೊಂಡ ಘಟನೆ ಕಿನ್ನಿಗೋಳಿಯ ಮುಖ್ಯರಸ್ತೆಯಲ್ಲಿ ಸಂಭವಿಸಿದೆ.

Ad Widget ... ..

ಗಾಯಾಳುವನ್ನು ಕೆಮ್ರಾಲ್ ಮನೋಲಿ ಬಲ್ಲೆ ನಿವಾಸಿ ಜಯಂತಿ ಶೆಟ್ಟಿ ಎಂದು ಗುರುತಿಸಲಾಗಿದೆ. ಜಯಂತಿ ಅವರು ಕಿನ್ನಿಗೋಳಿ ಚರ್ಚ್ ಕಡೆಯಿಂದ ತರಕಾರಿ ಹಿಡಿದುಕೊಂಡು ನಡೆದುಕೊಂಡು ಬರುತ್ತಿದ್ದ ಸಂದರ್ಭ ಕಿನ್ನಿಗೋಳಿ ಕಡೆಯಿಂದ ಮೂರುಕಾವೇರಿ ಕಡೆಗೆ ಸಂಚರಿಸುತ್ತಿದ್ದ ಬ್ರೀಜಾ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ದೂರಕ್ಕೆ ಹಾರಿದ್ದು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಇದ್ದು ಕಾರಿನಲ್ಲಿದ್ದವರೂ ಗಾಯಗೊಂಡಿದ್ದಾರೆ.
ಜನನಿಬಿಡ ಪ್ರದೇಶ ಕಾರಣವಾಗಿದ್ದು, ದೊಡ್ಡ ಅನಾಹುತ ತಪ್ಪದಂತಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯ ಅಂಗಡಿ ಮಾಲಿಕರಾದ ಅಲ್ವಿನ್, ಸ್ಯಾನೀ ಪಿಂಟೋ, ಶೈಲಾ ಸಿಕ್ವೇರಾ ಸಹಕರಿಸಿದ್ದಾರೆ.

Ad Widget

Leave a Comment

Your email address will not be published. Required fields are marked *