Ad Widget .

“ಸುರತ್ಕಲ್ ಟೋಲ್ ವಿರೋಧಿ ಹೋರಾಟ ಇನ್ನಷ್ಟು ತೀವ್ರ” -ಇನಾಯತ್ ಅಲಿ

ಸುರತ್ಕಲ್: “ಸರಕಾರ ಜನರನ್ನು ಲೂಟಿ ಮಾಡಲು ನಿರ್ಮಾಣ ಮಾಡಿರುವ ಇಲ್ಲಿನ ಟೋಲ್ ಗೇಟ್ ತೆರವುಗೊಳ್ಳುವವರೆಗೆ ರಾತ್ರಿ ಹಗಲು ಧರಣಿ ಕೂರಬೇಕಾದ ಅನಿವಾರ್ಯತೆಯಿದೆ. ಟೋಲ್ ವಿರೋಧಿ ಸಮಿತಿ ಕೈಗೊಂಡಿರುವ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದ್ದು ಮುಂದಿನ ದಿನಗಳಲ್ಲಿ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ” ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹೇಳಿದರು.

Ad Widget . Ad Widget .

Ad Widget . Ad Widget .

ಅವರು ಟೋಲ್ ವಿರೋಧಿ ಹೋರಾಟ ಸಮಿತಿ ಕೈಗೊಂಡಿರುವ ಅಹೋರಾತ್ರಿ ಧರಣಿಯ ಆರನೇ ದಿನವಾದ ಇಂದು ಧರಣಿ ಸ್ಥಳದಲ್ಲಿ ಮಾತಾಡಿದರು.
ಕೇರಳದ ಕೆಪಿಸಿಸಿ ಮುಖಂಡ ರೋಸಿ ಜಾನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಡಿವೈಎಫ್ ಐ ಮುಖಂಡ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *