Ad Widget .

ಮಂಗಳೂರು: 10 ದಿನಗಳಲ್ಲಿ 1.46 ಕೋಟಿ ಅಕ್ರಮ ಚಿನ್ನಾಭರಣ ವಶ

ಸಮಗ್ರ ನ್ಯೂಸ್: ಕಳೆದ ಹತ್ತು ದಿನಗಳ ಅವಧಿಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು 1.46 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಂಡು ಹಿಡಿದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget .

ಅಕ್ಟೋಬರ್ 22 ರಿಂದ 31 ರವರೆಗೆ ಆರು ಪ್ರಕರಣಗಳನ್ನು ಕಸ್ಟಮ್ಸ್ ಅಧಿಕಾರಿಗಳು ದಾಖಲಿಸಿದ್ದಾರೆ. ದುಬೈನಿಂದ ಬಂದ ಆರು ಪ್ರಯಾಣಿಕರಲ್ಲಿ 24 ಕ್ಯಾರೆಟ್ ಪರಿಶುದ್ಧತೆಯ 2,870 ಗ್ರಾಂ ತೂಕದ ಚಿನ್ನ ದೊರೆತಿದೆ. ಇದರ ಮೌಲ್ಯ 1,46,87,410 ರೂ. ಎಂದು ಅಂದಾಜಿಸಲಾಗಿದೆ.

Ad Widget . Ad Widget .

ಪ್ರಯಾಣಿಕರು ಜೀನ್ಸ್ ಪ್ಯಾಂಟ್‌ನ ಸೊಂಟದ ಭಾಗ, ಪಾದರಕ್ಷೆ, ಬನಿಯನ್ ಮತ್ತು ಗುದನಾಳದಲ್ಲಿ ಚಿನ್ನವನ್ನು ಅಡಗಿಸಿಟ್ಟುಕೊಂಡು ಸಾಗಾಟ ಮಾಡುವಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

Leave a Comment

Your email address will not be published. Required fields are marked *