ಭೀಮರಾವ್ ವಾಷ್ಠರ್ ಅವರಿಗೆ ಹಿರಿಯ ಜೇಸಿಗಳ ಸಂಘದಿಂದ ಸನ್ಮಾನ

ಸಮಗ್ರ ನ್ಯೂಸ್: ಸುಳ್ಯದ ಪಯಸ್ವಿನಿ ಹಿರಿಯ ಜೇಸಿಗಳ ಸಂಘದ ವತಿಯಿಂದ ಸುಳ್ಯದ ಸಾಹಿತಿ , ಜ್ಯೋತಿಷಿ ಮತ್ತು ಚಿತ್ರ ನಿರ್ದೇಶಕರಾದ ಹಿರಿಯ ಜೇಸಿ ಎಚ್ .ಭೀಮರಾವ್ ವಾಷ್ಠರ್ ಅವರಿಗೆ ನ.1 ರಂದು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ನಡೆದ ಪಯಸ್ವಿನಿ ಹಿರಿಯ ಜೇಸಿಗಳ ಮಾಸಿಕ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

Ad Widget ... ..

ಸಾಹಿತ್ಯದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಹಿರಿಯ ಜೇಸಿಗಳ ಸಂಘದ ಅಧ್ಯಕ್ಷರಾದ ಜೇಸಿ ಪಿ ಎಸ್ ಗಂಗಾಧರ್ ಮತ್ತು ಜೇಸಿ ಎಂ ಬಿ ಸದಾಶಿವ ರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು . ಈ ಸಂದರ್ಭದಲ್ಲಿ ಜೇಸಿ ಎಸ್ ಆರ್ ಸೂರಯ್ಯ , ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಹಿರಿಯ ಜೇಸಿಗಳಾದ ಜೇಸಿ ಚಂದ್ರಶೇಖರ್ ಪೇರಾಲು , ಜೇಸಿ ಕೆ ಎಮ್ ಮುಸ್ತಫಾ , , ಜೇಸಿ ದಿನೇಶ್ ಮಡಪ್ಪಾಡಿ , ಜೇಸಿ ದಿನೇಶ್ ಅಂಬೆಕಲ್ಲು , ಜೇಸಿ ಕೆ ಟಿ ವಿಶ್ವನಾಥ್ , ಜೇಸಿ ಲೋಕೇಶ್ ಪೆರ್ಲಂಪಾಡಿ ಇನ್ನಿತರರು ಉಪಸ್ಥಿತರಿದ್ದರು . ನಂತರ ಸಾಹಿತಿ ಮತ್ತು ಗಾಯಕ ಭೀಮರಾವ್ ವಾಷ್ಠರ್ ರವರು ಕನ್ನಡ ರಾಜ್ಯೋತ್ಸವದ ಗೀತೆಗಳನ್ನು ಹಾಡಿದರು .

Ad Widget

Leave a Comment

Your email address will not be published. Required fields are marked *