Ad Widget .

‘ಮೈಸೂರಲ್ಲ ಇದು ಕರ್ನಾಟಕ’ | ರಾಜ್ಯೋತ್ಸವದ ಇತಿಹಾಸ ನಮ್ಮ ಹೆಮ್ಮೆ

ಸಮಗ್ರ ನ್ಯೂಸ್: ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ಕನ್ನಡವಾಗಿರು… ಕುವೆಂಪುರವರ ಈ ಸಾಲುಗಳನ್ನು ಪ್ರತಿಯೊಬ್ಬ ಕನ್ನಡಿಗ ಜಗತ್ತಿನ ಯಾವುದೇ ಮೂಲೆಯಲ್ಲಿ ಇರಲಿ ಖಂಡಿತ ಮರೆಯಲ್ಲ, ನಮ್ಮ ಕನ್ನಡ ನಾಡು, ಇಲ್ಲಿಯ ಭಾಷೆ, ಇಲ್ಲಿಯ ಸಂಸ್ಕೃತಿ, ಪರಂಪರೆ, ಅಚಾರ-ವಿಚಾರ, ವನ್ಯ ಸಂಪತ್ತು ಇವುಗಳಿಂದ ಶ್ರೀಮಂತವಾಗಿರುವ ನಾಡಾಗಿದೆ.

Ad Widget . Ad Widget .

ಈ ನಮ್ಮ ಕನ್ನಡ ನಾಡು, ಈ ಭಾಷೆಯನ್ನು ಕೊಂಡಾಡುತ್ತಾ ಸಂಭ್ರಮದಿಂದ ಆಚರಿಸುವ ದಿನವೇ ನವೆಂಬರ್ 1. ವಿವಿಧ ಭಾಗಗಳಾಗಿ ಹರಡಿ ಹೋಗಿದ್ದ ಕನ್ನಡಿಗರನ್ನು ಒಂದಾಗಿಸಿದ ದಿನವನ್ನು ನಾವೆಲ್ಲಾ ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ.

Ad Widget . Ad Widget .

ಕರುನಾಡು ಅಂದರೆ ಕಪ್ಪು ಮಣ್ಣಿನ ನಾಡು, ಹಾಗಾಗಿ ಇದಕ್ಕೆ ಕರ್ನಾಟಕ ಎಂದು ಕರೆಯಲಾಗಿದೆ. ಭಾರತದಲ್ಲಿ ಕರ್ನಾಟಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 6ನೇ ದೊಡ್ಡ ರಾಜ್ಯವಾಗಿದೆ.

ಕರ್ನಾಟಕಕ್ಕೆ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ಕನ್ನಡ ಹೋರಾಟಗಾರರಾದ ರಾಮಮೂರ್ತಿಯವರು ಕನ್ನಡ ಬಾವುಟ ಸಿದ್ಧಪಡಿಸಿದರು. ಹಳದಿ ಬಣ್ಣ ಸೌಹಾರ್ದತೆಯ ಸಂಕೇತ ಕೆಂಪು ಕ್ರಾಂತಿಯ ಸಂಕೇತ. ನಾವು ಕನ್ನಡಿಗರು ಕ್ರಾಂತಿಗೂ ಸೈ, ಶಾಂತಿಗೂ ಸೈ ಎಂಬ ಸಂದೇಶ ಸೂಚಿಸುತ್ತದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಕರ್ನಾಟಕದ ಏಕೀಕರಣವಾಗಿರಲಿಲ್ಲ. 1956ರ ರಾಜ್ಯ ಪುನರ್ವಿಗಂಡನಾ ಕಾಯ್ದೆ ಜಾರಿಯಾದ ಬಳಿಕ ಕೂರ್ಗ್(ಕೊಡಗು), ಮದರಾಸು. ಹೈದರಾಬಾದ್, ಬಾಂಬೆ ಸಂಸ್ತಾನವನ್ನು ಮೈಸೂರಿಗೆ ಸೇರಿಸಲಾಯಿತು. 1956 ನವೆಂಬರ್‌ 1ರಂದು ಮೈಸೂರು ರಾಜ್ಯವನ್ನು ಭಾಷೆಗಳ ಅಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಲಾಯಿತು, ಆದರೆ ಉತ್ತರ ಕರ್ನಾಟಕದ ಜನರಿಗೆ ಮೈಸೂರು ಹೆಸರನ್ನು ಉಳಿಸಿಕೊಳ್ಳಲು ಯಾವುದೇ ಒಲವು ಇರಲಿಲ್ಲ, ಹೀಗಾಗಿ 1873 ನವೆಂಬರ್‌ 1ರಂದು ಮೈಸಊರು ರಾಜ್ಯ ಅಂತ ಇದ್ದಿದ್ದನ್ನು ಕರ್ನಾಟಕವೆಂದು ಮರುನಾಮಕರಣ ಮಾಡಲಾಯಿತು. ಅಗ ದೇವರಾಜ್ ಅರಸು ಮುಖ್ಯಮಂತ್ರಿಯಾಗಿದ್ದರು.

ಸದ್ಯ ಕರ್ನಾಟಕ ಎಲ್ಲಾ ‌ಸ್ತರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿದೆ. ದೇಶಕ್ಕೆ ಅತೀ ಹೆಚ್ಚು ತೆರಿಗೆ ನೀಡುವ, ಅತ್ಯಂತ ಸಂಪದ್ಭರಿತ ನಾಡು ನಮ್ಮ ಕರ್ನಾಟಕ. ಹೆಮ್ಮೆಯ ಕನ್ನಡಿಗರು ದೇಶ- ವಿದೇಶಗಳಲ್ಲಿ ಸಾಧನೆ ತೋರಿದ್ದಾರೆ. ಕಳೆದ ಅರುವತ್ತೇಳು ವರ್ಷಗಳಲ್ಲಿ ನಾಡು‌ ಕಂಡ ಬೆಳವಣಿಯ ಅಧ್ಬುತ. ಇಂತಹ ‌ನಾಡಲ್ಲಿ ಹುಟ್ಟಿದ, ಬೇರೆ ಕಡೆಯಿಂದ ಬಂದು ಕನ್ನಡದ ಕಂದರೆನಿಸಿದ ಇಲ್ಲಿಂದ ಬೇರೆಡೆ ಹೋಗಿ ಕನ್ನಡದ ಕಂಪು ಸೂಸುವ ಎಲ್ಲಾ ಕರ್ನಾಟಕದ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಸಿರಿಗನ್ನಡಂ‌ ಗೆಲ್ಗೆ; ಜೈ ಕರ್ನಾಟಕ ಮಾತೆ

Leave a Comment

Your email address will not be published. Required fields are marked *