October 2022

ಶಿವಮೊಗ್ಗ ಗಲಭೆ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಶಿವಮೊಗ್ಗದ ಸೀಗೆಹಟ್ಟಿ ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ ಗಲಭೆ ಪ್ರಕರಣ ಸಂಬಂಧ ಪೊಲೀಸರು ಅಲರ್ಟ್ ಆಗಿದ್ದಾರೆ. ಸೋಮವಾರ ಗಲಾಟೆ ಮಾಡಿದ್ದ ಮೂವರನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು 22 ವರ್ಷದ ಮಾರ್ಕೆಟ್ ಫೌಜಾನ್, 21 ವರ್ಷದ ಅಜ್ಹರ್ ಅಲಿಯಾಸ್ ಅಜ್ಜು, ಫರಾಜ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 2 ಬೈಕ್​ಗಳಲ್ಲಿ ಬಂದು ದಾಂಧಲೆ ಮಾಡಿದ್ದರು ಎನ್ನಲಾಗಿದೆ. ಈ ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲು ಆಗಿದ್ದವು. ಗಲಾಟೆಯಿಂದ ಶಿವಮೊಗ್ಗ ನಗರ ಬೂದಿ […]

ಶಿವಮೊಗ್ಗ ಗಲಭೆ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು Read More »

ಯಾತ್ರಾರ್ಥಿಗಳ ಮೇಲೆ ಉಗ್ರರ ದಾಳಿ| 15ಕ್ಕೂ ಹೆಚ್ಚು ಮಂದಿಯ ನರಮೇಧ

ಸಮಗ್ರ ನ್ಯೂಸ್: ಯಾತ್ರಾಸ್ಥಳದಲ್ಲಿ ಆರಾಧಕರ ಮೇಲೆ ಭಯೋತ್ಪಾದಕರಿಂದ ಗುಂಡಿನ ಸುರಿಮಳೆಯನ್ನೇ ಗೈಯ್ಯಲಾದ ಘಟನೆ ಇರಾಕ್ ನ ಶಿರಾಜ್ ನಗರದ ಶಿಯಾದಲ್ಲಿ ನಡೆದಿದೆ. ಈ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಈ ಕುರಿತಂತೆ ಸರ್ಕಾರಿ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಆಲ್ ಅರೇಬಿಯಾ ವರದಿ ಮಾಡಿದ್ದು, ಇರಾನ್ ನ ಶಿರಾಜ್ ನಗರದ ಶಿಯಾ ಯಾತ್ರಾಸ್ಥಳದಲ್ಲಿ ಬಂದೂಕುಧಾರಿಗಳು ಆರಾಧಕರ ಮೇಲೆ ನಡೆಸಿದ ‘ಭಯೋತ್ಪಾದಕ ದಾಳಿ’ಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಭಯೋತ್ಪಾದಕರ

ಯಾತ್ರಾರ್ಥಿಗಳ ಮೇಲೆ ಉಗ್ರರ ದಾಳಿ| 15ಕ್ಕೂ ಹೆಚ್ಚು ಮಂದಿಯ ನರಮೇಧ Read More »

ಮಂಗಳೂರು: ಹೆಸರು‌ಬೇಳೆ, ಐಸ್ ಕ್ರೀಂ ತಿಂದು‌ ಫುಡ್ ಪಾಯ್ಸನ್| ನಾಲ್ವರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಹೆಸರುಬೇಳೆ ಮತ್ತು ಐಸ್ ಕ್ರೀಂ ಸೇವಿಸಿ ಫುಡ್​ ಪಾಯ್ಸನ್ ಗೊಳಗಾದ ನಾಲ್ವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಪ್ಪು ಬಪ್ಪಾಲ್‌ನ ನಿವಾಸಿಗಳಾದ ಅರವಿಂದ ರಾವ್ (52), ಪತ್ನಿ ಪ್ರಭಾವತಿ (45) ಮತ್ತು ಮಕ್ಕಳಾದ ಸೌರಭ್ (20) ಪ್ರತೀಕ್ (18) ಅನಾರೋಗ್ಯ ಹೊಂದಿದ್ದಾರೆ. ಫುಡ್​ ಪಾಯಿಸನ್​ ಆಗಿ ಅಸ್ವಸ್ಥಗೊಂಡವರುಇವರು ನಿನ್ನೆ ರಾತ್ರಿ ಮಲಗುವ ಮೊದಲು ಹೆಸರುಬೇಳೆ ಮತ್ತು ಐಸ್ ಕ್ರೀಂ ತಿಂದಿದ್ದರು. ಆ ಬಳಿಕ ವಾಂತಿ ಶುರುವಾಗಿದೆ. ಇಂದು ಬೆಳಿಗ್ಗೆ ಮನೆ ಬಾಗಿಲನ್ನು ತೆರೆಯದಿರುವುದನ್ನು ಗಮನಿಸಿದ ಸಂಬಂಧಿಕರು

ಮಂಗಳೂರು: ಹೆಸರು‌ಬೇಳೆ, ಐಸ್ ಕ್ರೀಂ ತಿಂದು‌ ಫುಡ್ ಪಾಯ್ಸನ್| ನಾಲ್ವರು ಆಸ್ಪತ್ರೆಗೆ ದಾಖಲು Read More »

ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಅಫ್ ಹೇಳಿದ ಸೂಪರ್ ಸ್ಟಾರ್ ರಜನಿಕಾಂತ್….!!

ಬೆಂಗಳೂರು: ಕಾಂತಾರ ಸಿನೆಮಾ ಮೋಡಿ ಮತ್ತೆ ಮುಂದುವರೆದಿದ್ದು, ಪ್ರಖ್ಯಾತ ನಟ ನಟಿಯರು ಸಿನೆಮಾ ನೋಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಕಾಂತಾರ ಸಿನೆಮಾವನ್ನು ನೋಡಿ ಟ್ವೀಟರ್ ನಲ್ಲಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಗೊತ್ತಿರುವುದಕ್ಕಿಂತ ಗೊತ್ತಿರದ ವಿಷಯಗಳೇ ಜಾಸ್ತಿ ಆದರೆ ಕಾಂತಾರ ಸಿನೆಮಾದಲ್ಲಿ ಹೇಳಿರುವ ವಿಷಯಗಳನ್ನು ಮತ್ತೆ ಯಾರೂ ಈ ರೀತಿಯಾಗಿ ಯಾರೂ ಹೇಳುವುದಿಲ್ಲ ಎಂದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಡಿ ಮೂಡಿಬಂದ ಕಾಂತಾರ ಚಿತ್ರ ನೋಡಿ ನನ್ನ ಮೈನವಿರೇಳಿತು ಎಂದ ಅವರು ಬರಹಗಾರನಾಗಿ ನಿರ್ದೇಶಕನಾಗಿ

ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಅಫ್ ಹೇಳಿದ ಸೂಪರ್ ಸ್ಟಾರ್ ರಜನಿಕಾಂತ್….!! Read More »

ಮಂಗಳೂರು: ಕುಡಿದ ಅಮಲಿನಲ್ಲಿ ರಂಗೋಲಿ ಮೆಟ್ಟಿ ವಿರೂಪಗೊಳಿಸಿದ ವಿದ್ಯಾರ್ಥಿಗಳು

ಸಮಗ್ರ ನ್ಯೂಸ್: ಅಪಾರ್ಟ್‌ಮೆಂಟ್‌ವೊಂದರಲ್ಲಿ ಕುಡಿದ ಅಮಲಿನಲ್ಲಿದ್ದ ವಿದ್ಯಾರ್ಥಿಗಳು ರಂಗೋಲಿಯನ್ನು ವಿರೂಪಗೊಳಿಸಿದ ಘಟನೆ ನಗರದ ಬಿಜೈನಲ್ಲಿ ನಡೆದಿದೆ. ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿ ಅಪಾರ್ಟ್‌ಮೆಂಟ್ ನಿವಾಸಿಗಳು ರಂಗೋಲಿ ಹಾಕಿದ್ದರು. ಆದರೆ ಕೇರಳ ಮೂಲದವರೆನ್ನಲಾದ ಕೆಲವು ವಿದ್ಯಾರ್ಥಿಗಳು ಈ ರಂಗೋಲಿಯನ್ನು ಮೆಟ್ಟಿ ಅದನ್ನು ವಿರೂಪಗೊಳಿಸಿ ದುರ್ವರ್ತನೆ ತೋರಿದ್ದಾರೆ. ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಒಬ್ಬ ವಿದ್ಯಾರ್ಥಿ ರಂಗೋಲಿ ಬಳಿ ನಿಂತಿದ್ದು, ಇನ್ನೊಬ್ಬ ರಂಗೋಲಿಯನ್ನು ಮೆಟ್ಟುತ್ತಿದ್ದಾನೆ. ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ

ಮಂಗಳೂರು: ಕುಡಿದ ಅಮಲಿನಲ್ಲಿ ರಂಗೋಲಿ ಮೆಟ್ಟಿ ವಿರೂಪಗೊಳಿಸಿದ ವಿದ್ಯಾರ್ಥಿಗಳು Read More »

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ| ಸಿಎಂ ಬೊಮ್ಮಾಯಿಗೆ ಸವಿವರ ಪತ್ರ ಬರೆದ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ| ಖಾವಂದರ ಪತ್ರದ ಒಕ್ಕಣೆ ಏನ್ಗೊತ್ತಾ?

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಟ್ಟಗಳ ರಸ್ತೆಯಲ್ಲಿ ಸುಗಮ ಸಾರಿಗೆ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಸುವ ಕುರಿತಂತೆ ಸಿಎಂ ಬೊಮ್ಮಾಯಿಗೆ ರಾಜ್ಯ ಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಶಿರಾಡಿ ಘಾಟ್ ಕುರಿತಂತೆ ಸವಿವರವಾದ ಪತ್ರ ಬರೆದು ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಪೂಜ್ಯ ಖಾವಂದರ ಪತ್ರದಲ್ಲೇನಿದೆ? ಓದಿ… “ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ಈ ದಿನ ದಕ್ಷಿಣಕನ್ನಡ ಟ್ರಕ್ ಮಾಲೀಕರ ಅಸೋಸಿಯೇಶನ್(ರಿ)ನಿಂದ ಒಂದು

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ| ಸಿಎಂ ಬೊಮ್ಮಾಯಿಗೆ ಸವಿವರ ಪತ್ರ ಬರೆದ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ| ಖಾವಂದರ ಪತ್ರದ ಒಕ್ಕಣೆ ಏನ್ಗೊತ್ತಾ? Read More »

ಗೋಪೂಜೆ ದಿನವೇ ಅಕ್ರಮ ಗೋಮಾಂಸ ಸಾಗಾಣಿಕೆಗೆ ಯತ್ನ| ಇಬ್ಬರು ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ದೀಪಾವಳಿಯ ಗೋ ಪೂಜಾ ದಿನವೇ ಅಕ್ರಮವಾಗಿ ಗೋ ಮಾಂಸ ಸಾಗಾಣಿಕೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಪೋಲಿಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ತಾಲೂಕಿನ ಹಾಲೇಬೇಲೂರು ಕೊಪ್ಪಲು ಕಣಗಲ್ ಮನೆ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು ಗೋ ಮಾಂಸ ಮಾರಾಟ ಆರೋಪದ ಮೇಲೆ ಗ್ರಾಮಾಂತರ ಠಾಣೆ ಪೋಲಿಸರು ಚಂದ್ರು ಮತ್ತು ಲೋಕೇಶ್ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಸುಮಾರು 100 ಕೆ.ಜಿ ಗೂ ಹೆಚ್ಚು ಗೋಮಾಂಸ ವಶ ಪಡೆದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ

ಗೋಪೂಜೆ ದಿನವೇ ಅಕ್ರಮ ಗೋಮಾಂಸ ಸಾಗಾಣಿಕೆಗೆ ಯತ್ನ| ಇಬ್ಬರು ಆರೋಪಿಗಳು ಅರೆಸ್ಟ್ Read More »

ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಕನ್ನಡಿಗ ʻಮಲ್ಲಿಕಾರ್ಜುನ ಖರ್ಗೆʼ ಅವರು ಇಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸಮಾರಂಭದಲ್ಲಿ ಸೋನಿಯಾ ಗಾಂಧಿ ಅವರು ಚುನಾವಣಾ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. 24 ವರ್ಷಗಳ ನಂತರ ಮೊದಲ ಬಾರಿಗೆ ಗಾಂಧಿಯೇತರರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿ ಗಾಂಧಿ ಕುಟುಂಬದವರು ಅಧ್ಯಕ್ಷ ಸ್ಥಾನಕ್ಕೆ

ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ Read More »

ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ವಿಧಿವಶ| ಯಾಕೆ ಇವರು ಹೀಗೆ?

ಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ. 94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ ನ ದಕ್ಷಿಣ ಪ್ರಾಂತ್ಯದ ದೇಜ್ ಗೆ ಗ್ರಾಮದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಫಾರ್ಸ್​ನ ದಕ್ಷಿಣ ಪ್ರಾಂತ್ಯದ ದೇಜ್​ಗ ಗ್ರಾಮದಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೆಲ ತಿಂಗಳ ಹಿಂದೆ ಗ್ರಾಮಸ್ಥರು ಸ್ನಾನಗೃಹಕ್ಕೆ ಕರೆದೊಯ್ದು ಸ್ನಾನನ ಮಾಡಿಸಿದ್ದರು ಎಂದು ಇರ್ನಾ(ಐಆರ್​ಎನ್​ಎ)ಯಲ್ಲಿ ವರದಿಯಾಗಿತ್ತು. ಹಾಜಿಯ ಕುರಿತಾಗಿ

ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ವಿಧಿವಶ| ಯಾಕೆ ಇವರು ಹೀಗೆ? Read More »

ವಿಜಯಪುರ :‌ಗ್ರಹಣ ಕಾಲದಲ್ಲಿ ನಡೆಯಿತು ವಿಸ್ಮಯ| ನೀರು ತುಂಬಿದ ತಟ್ಟೆಯಲ್ಲಿ ಆಧಾರವಿಲ್ಲದೆ‌ ನಿಂತ ಒನಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಬಸವೇಶ್ವರ ನಗರದಲ್ಲಿ ಮಂಗಳವಾರ ಸಂಭವಿಸಿದ ಗ್ರಹಣ ಕಾಲದಲ್ಲಿ ವಿಸ್ಮಯ ನಡೆದಿದೆ. ಶಂಕಪ್ಪ ಮನ್ಮಥನಾಥ ಎಂಬುವವರ ಮನೆಯಲ್ಲಿ ಗ್ರಹಣ ವೇಳೆಯಲ್ಲಿ ನೀರು ತುಂಬಿದ್ದ ತಟ್ಟೆಯಲ್ಲಿ ಯಾವುದೇ ಆಧಾರವಿಲ್ಲದೆ ಒನಕೆ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು. ಈ ವಿಸ್ಮಯ ನೋಡಲು ಬಸವೇಶ್ವರ ನಗರದ ನಿವಾಸಿಗಳು ಆಗಮಿಸಿದ್ದರು. ಹಿಂದಿಕಾಲದಲ್ಲಿ ಗ್ರಹಣ ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ ಎಂದು ತಿಳಿಯಲು ತಲತಲಾಂತರದಿಂದ ಈ ಪದ್ದತಿಯನ್ನು ಅನುಸರಿಸಲಾಗುತ್ತಿದೆ ಎಂದು ಮನೆಯವರು ತಿಳಿಸಿದ್ದಾರೆ. ಇನ್ನೂ ಕೆಲವೆಡೆ , ದೇವಸ್ಥಾನದ

ವಿಜಯಪುರ :‌ಗ್ರಹಣ ಕಾಲದಲ್ಲಿ ನಡೆಯಿತು ವಿಸ್ಮಯ| ನೀರು ತುಂಬಿದ ತಟ್ಟೆಯಲ್ಲಿ ಆಧಾರವಿಲ್ಲದೆ‌ ನಿಂತ ಒನಕೆ Read More »