October 2022

ಎಚ್ ಭೀಮರಾವ್ ವಾಷ್ಠರ್ ರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆ

ಸಮಗ್ರ ನ್ಯೂಸ್: ಸುಳ್ಯದ ಖ್ಯಾತ ಜ್ಯೋತಿಷಿ , ಸಾಹಿತಿ , ಚಿತ್ರನಿರ್ದೇಶಕ , ಗಾಯಕ , ಚಿತ್ರನಟ , ಸಂಘಟಕರಾದ ಎಚ್ .ಭೀಮರಾವ್ ವಾಷ್ಠರ್ ಕೋಡಿಹಾಳರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಅ.6ರಂದು ರಾಯಚೂರು ಜಿಲ್ಲೆಯ ನಾಗರಹಾಳ ಹಜರತ್ ದಾವಲಮಲಿಕ್ ಉರುಸ್ ಜಾತ್ರೆಯ ಪ್ರಯುಕ್ತ ನಡೆಯುವ ಸರ್ವಧರ್ಮ ಭಾವೈಕ್ಯ ಮಹಾ ಸಮ್ಮೇಳನದಲ್ಲಿ ಶಾಸಕರ , ಶಿವಶರಣರ , ಮಠಾಧಿಪತಿಗಳ ಗಣ್ಯ ಸಮಕ್ಷಮದಲ್ಲಿ ಭೀಮರಾವ್ ವಾಷ್ಠರ್ ಅವರಿಗೆ ರಾಜ್ಯಪ್ರಶಸ್ತಿ ನೀಡಿ ಗೌರವಿಸಲಾಗುವದು. ಎಂದು ಸರ್ವಧರ್ಮ ಭಾವೈಕ್ಯ […]

ಎಚ್ ಭೀಮರಾವ್ ವಾಷ್ಠರ್ ರವರು ಅಮರ ಜ್ಞಾನ ಪಂಡಿತಶ್ರೀ ರಾಜ್ಯ ಪ್ರಶಸ್ತಿಗೆ ಆಯ್ಕೆ Read More »

ಸುಳ್ಯ: ಅಂಬೇಡ್ಕರ್ ಧ್ವಜ ತೆರವುಗೊಳಿಸಿದ ಪಿಡಿಒ/ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ

ಸಮಗ್ರ ನ್ಯೂಸ್: ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಧ್ವಜವನ್ನು ಪಿಡಿಒ ತೆರವುಗೊಳಿಸಿದ್ದು ಹಾಗಾಗಿ ಇದನ್ನು ತಕ್ಷಣ ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ. ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಲಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚಿಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯವರು ಕಾರ್ಯಕ್ರಮಯೊಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜವನ್ನು ಆ ಸಮುದಾಯ ಕಟ್ಟಡದಲ್ಲಿ ಅಳವಡಿಸಿದ್ದರು. ಹೀಗೆ ಅಳವಡಿಸಿದಂತ ಧ್ವಜವನ್ನು ಏಕಾಏಕಿ ಅಜ್ಜಾವಾರ ಗ್ರಾಮ ಪಂಚಾಯತ್ ನ ಪಿಡಿಒ ತೆರವುಗೊಳಿಸಿದರೆ ಎಂದು ಆರೋಪ

ಸುಳ್ಯ: ಅಂಬೇಡ್ಕರ್ ಧ್ವಜ ತೆರವುಗೊಳಿಸಿದ ಪಿಡಿಒ/ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ Read More »

ಮಾಂಸಾಹಾರ ಸೇವಿಸುವವರಿಗೆ RSS ಮುಖ್ಯಸ್ಥ ಭಾಗವತ್ ಸಲಹೆ!

ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​ ಅವರು ‘ಮಾಂಸಾಹಾರ’ ತಿನ್ನುವವರಿಗೆ ಒಂದು ಸಲಹೆ ನೀಡಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋಹನ್ ಭಾಗವತ್​, ‘ನಾವು ತಿನ್ನುವ ಆಹಾರ ನಮ್ಮ ಮನಸಿನ ಮೇಲೆ ಪ್ರಭಾವ ಬೀರುತ್ತದೆ. ನೀವು ಆಹಾರ ಕ್ರಮದಲ್ಲಿ ತಪ್ಪಿದರೆ, ಜೀವನದಲ್ಲೂ ತಪ್ಪು ದಾರಿಯಲ್ಲೇ ಸಾಗುತ್ತೀರಿ. ಅತ್ಯಂತ ಹೆಚ್ಚಾಗಿ ಮಾಂಸಾಹಾರವನ್ನೇ ಒಳಗೊಂಡಿರುವ ತಾಮಸ ಆಹಾರಗಳನ್ನು ಆದಷ್ಟು ಕಡಿಮೆ ತಿನ್ನಬೇಕು. ತ್ಯಜಿಸಿದರೂ ತೊಂದರೆಯಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಜನರು ಮಾಂಸಾಹಾರ ತಿನ್ನುವಂತೆ ನಮ್ಮ ದೇಶದಲ್ಲಿಯೂ ಮಾಂಸ

ಮಾಂಸಾಹಾರ ಸೇವಿಸುವವರಿಗೆ RSS ಮುಖ್ಯಸ್ಥ ಭಾಗವತ್ ಸಲಹೆ! Read More »

ಮಿಥುನ್ ರೈ ಚಿಲ್ಲರೆ ಮನುಷ್ಯ; ಅವನ ಮಾತಿಗೆ ಬೆಲೆ ಕೊಡಲ್ಲ| ಸೆಲ್ಫಿ ಹೇಳಿಕೆಗೆ ಶೋಭಾ ಕರಂದ್ಲಾಜೆ ಗರಂ

ಸಮಗ್ರ ನ್ಯೂಸ್: ಇತ್ತೀಚೆಗೆ ರಸ್ತೆ ಅವ್ಯವಸ್ಥೆ ವಿರುದ್ದ ವಿನೂತನ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಯುವ ನಾಯಕ ಮಿಥುನ್ ರೈ ಅವರು ಸಚಿವೆ ಶೋಭಾ ಕರಂದ್ಲಾಜೆ ಕಂಡರೆ ಪೋಟೋ ತೆಗೆದು ಕಳುಹಿಸಿ ಎಂದು ಹೇಳಿದ್ದರು. ಇದಕ್ಕೆ ಈಗ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ‘ಮಿಥುನ್ ರೈ ಎಲ್ಲಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ’ ಎಂದು ಸವಾಲೆಸೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ ತೆಗೆಯಿರಿ. ಅವ ಎಲ್ಲಿ ಮಿಥುನ್ ರೈ ಅವನು

ಮಿಥುನ್ ರೈ ಚಿಲ್ಲರೆ ಮನುಷ್ಯ; ಅವನ ಮಾತಿಗೆ ಬೆಲೆ ಕೊಡಲ್ಲ| ಸೆಲ್ಫಿ ಹೇಳಿಕೆಗೆ ಶೋಭಾ ಕರಂದ್ಲಾಜೆ ಗರಂ Read More »

“ಅಯ್ಯೋ ಅದೆಲ್ಲಾ ಸುಳ್ಳು’, ವಿಜಯ್ ಮತ್ತು ನನ್ನ ನಡುವೆ ನಡೆದದ್ದು ಇಷ್ಟು‌ ಮಾತ್ರ”| ಸತ್ಯ‌ಬಿಚ್ಚಿಟ್ಟ‌ ರಶ್ಮಿಕಾ ಮಂದಣ್ಣ

ಸಮಗ್ರ ನ್ಯೂಸ್: 2018 ರಿಂದಲೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವಿನ ಗಾಸಿಪ್‌ಗಳು ಹರಿದಾಡುತ್ತಲೇ ಇವೆ. ಅದಕ್ಕೆ ತಕ್ಕಂತೆ ಆಗಾಗ್ಗೆ ಅವರು ಹೈದರಾಬಾದ್, ಮುಂಬೈ ನಗರಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಪರಸ್ಪರರ ಮನೆಗಳಿಗೆ ಭೇಟಿ ಸಹ ನೀಡುತ್ತಿರುತ್ತಾರೆ. ಆದರೆ ಇದೀಗ ಮೊದಲ ಬಾರಿಗೆ ತಮ್ಮ ಹಾಗೂ ವಿಜಯ್ ದೇವರಕೊಂಡ ನಡುವಿನ ಸಂಬಂಧದ ಬಗ್ಗೆ, ತಮ್ಮಿಬ್ಬರ ಬಗ್ಗೆ ಹಬ್ಬಿರುವ ಸುದ್ದಿಗಳ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯ್ ಜೊತೆಗಿನ ಡೇಟಿಂಗ್ ಸುದ್ದಿಗಳ ಬಗ್ಗೆ ಕೇಳಿದಾಗ ಮಾತನಾಡಿರುವ ರಶ್ಮಿಕಾ,

“ಅಯ್ಯೋ ಅದೆಲ್ಲಾ ಸುಳ್ಳು’, ವಿಜಯ್ ಮತ್ತು ನನ್ನ ನಡುವೆ ನಡೆದದ್ದು ಇಷ್ಟು‌ ಮಾತ್ರ”| ಸತ್ಯ‌ಬಿಚ್ಚಿಟ್ಟ‌ ರಶ್ಮಿಕಾ ಮಂದಣ್ಣ Read More »

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಪಿಎಫ್‌ಐ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಕಲೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಮುಸ್ಲಿಂ ಯುವಕರಿಗೆ ಪಿಎಫ್‌ಐನಿಂದ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಇದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ‌ವಿವಿಧ ಕಡೆಗಳಲ್ಲಿ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರು ಸಮೀಪದ ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು Read More »

ಇಂದಿನಿಂದ(ಅ.1) 9 ದಿನ ರಾಜ್ಯಾದ್ಯಂತ ಪದವಿ ಕಾಲೇಜುಗಳಿಗೆ ದಸರಾ ರಜೆ

ಸಮಗ್ರ ನ್ಯೂಸ್: ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಅಧ್ಯಾಪಕರಿಗೆ ಅಕ್ಟೋಬರ್‌ 1ರಿಂದ 9ರ ವರೆಗೆ ದಸರಾ ರಜೆ ಘೋಷಿಸಿ ಉನ್ನತ ಶಿಕ್ಷಣ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಈ ಮೊದಲು ಸರ್ಕಾರಿ ಪದವಿ ಕಾಲೇಜು ಅಧ್ಯಾಪಕರಿಗೆ ಮಾತ್ರ ರಜೆ ಘೋಷಿಸಲಾಗಿತ್ತು.ಖಾಸಗಿ ಮತ್ತು ಅನುದಾನಿತ ಕಾಲೇಜುಗಳವರು ಸರ್ಕಾರಕ್ಕೆ ಪತ್ರ ಬರೆದು ತಮಗೂ ರಜೆ ನೀಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕೋರಿಕೆ ಪರಿಗಣಿಸಿ ರಜೆ ನೀಡಿರುವುದಾಗಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನಿಂದ(ಅ.1) 9 ದಿನ ರಾಜ್ಯಾದ್ಯಂತ ಪದವಿ ಕಾಲೇಜುಗಳಿಗೆ ದಸರಾ ರಜೆ Read More »