October 2022

ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಮೂವರು ಸಾವು

ಸಮಗ್ರ ನ್ಯೂಸ್ : ಭಾರೀ ಮಳೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮನೆ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಭಾರೀ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಪರಮೇಶ್ (45), ಜಯಮ್ಮ (39) ಹಾಗೂ ಪುತ್ರ ಭರತ್ (5) ಸಾವನ್ನಪ್ಪಿದ ದುರ್ದೈವಿಗಳು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಮೂವರು ಸಾವು Read More »

ಮಂಗಳೂರು: ಕಾನ್ಸ್ ಟೇಬಲ್ ಗೆ ಡಿಕ್ಕಿ ಹೊಡೆದ ಕಾರು ಪರಾರಿ

ಸಮಗ್ರ ನ್ಯೂಸ್: ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಮಂಗಳೂರು ದಕ್ಷಿಣ ಸಂಚಾರಿ ಕಾನ್ಸ್​ಟೇಬಲ್​ಗೆ ಅಪರಿಚಿತ ಕಾರು ಡಿಕ್ಕಿ ಹೊಡೆದು, ಅವರು ತಲೆಗೆ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲಬೈಲ್ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ. ಶಿವಮೊಗ್ಗ ನಿವಾಸಿ ಲೋಕೇಶ್ (35) ಗಾಯಾಳು ಕಾನ್ಸ್​ಟೇಬಲ್. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಹೈವೇ ಪ್ಯಾಟ್ರಲ್ ವಾಹನದಲ್ಲಿ ಚಾಲಕನಾಗಿದ್ದ ಇವರು ಉಳ್ಳಾಲಬೈಲ್ ಬಳಿ ತಪಾಸಣೆಗೈಯ್ಯುತ್ತಿದ್ದ ವೇಳೆ ಘಟನೆ ನಡೆದಿದೆ. ತೊಕ್ಕೊಟ್ಟು ಕಡೆಯಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಬಿಳಿ ಬಣ್ಣದ ಸ್ವಿಫ್ಟ್

ಮಂಗಳೂರು: ಕಾನ್ಸ್ ಟೇಬಲ್ ಗೆ ಡಿಕ್ಕಿ ಹೊಡೆದ ಕಾರು ಪರಾರಿ Read More »

ಸಿಬ್ಬಂದಿಗೆ ಗುಡ್ ನ್ಯೂಸ್ ಕೊಟ್ಟ KSRTC| 65 ವರ್ಷದ ನೀತಿಗೆ ಗುಡ್ ಬೈ ಹೇಳಿದ ನಿಗಮ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 65 ವರ್ಷಗಳ ಇತಿಹಾಸದಲ್ಲೇ ಈ ದಿನ ಬಹಳ ವಿಶೇಷವಾದದ್ದು. ಅದರಲ್ಲೂ ಕೆಎಸ್​ಆರ್​​ಟಿಸಿ ಸಿಬ್ಬಂದಿ ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ. ಯಾಕಂದ್ರೆ 65 ವರ್ಷದ ಇತಿಹಾಸದಲ್ಲೇ ತಿಂಗಳ ಮೊದಲ ದಿನವೇ ನೌಕರರಿಗೆ ಸಂಬಳವನ್ನ ನೀಡಿರಲಿಲ್ಲ. ಆದರೆ ಈ ಬಾರಿ ಹಾಗಾಗಲಿಲ್ಲ. 7ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ಸಂಬಳ ಸೇರುತಿತ್ತು. ಆದರೆ ಇದೇ ಮೊದಲ ಬಾರಿಗೆ 1ನೇ ತಾರೀಖಿನಂದು ನೌಕರರಿಗೆ ಸಂಬಳ ಕೈ ಸೇರಿದೆ. ಇದಕ್ಕೆ ಕಾರಣ KSRTCಯ

ಸಿಬ್ಬಂದಿಗೆ ಗುಡ್ ನ್ಯೂಸ್ ಕೊಟ್ಟ KSRTC| 65 ವರ್ಷದ ನೀತಿಗೆ ಗುಡ್ ಬೈ ಹೇಳಿದ ನಿಗಮ Read More »

ಸಚಿವೆ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್| ಮಹಿಳೆಯರ ಜೊತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ

ಸಮಗ್ರ ನ್ಯೂಸ್: ನಿಪ್ಪಾಣಿಯಲ್ಲಿ‌ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ದಾಂಡಿಯಾ ನೃತ್ಯದಲ್ಲಿ ಮಹಿಳೆಯರೊಂದಿಗೆ ಭರ್ಜರಿ ಹೆಜ್ಜೆ ಹಾಕಿ ಎಂಜಾಯ್​ ಮಾಡಿದ್ದಾರೆ. ಈ ವೇಳೆ ಮಹಿಳೆಯರೊಂದಿಗೆ ಪಾರಂಪರಿಕ ದಾಂಡಿಯಾ ಹಾಗೂ ಗರ್ಭಾ ನೃತ್ಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಡ್ಯಾನ್ಸ್​ ಮಾಡಿದ್ದಾರೆ. ನಿಪ್ಪಾಣಿ ನಗರದ ಶಿವಶಂಕರ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜನೆ ಮಾಡಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು. ಸಚಿವೆ ಶಶಿಕಲಾ ಜೊಲ್ಲೆ ಕೂಡ ಮಹಿಳೆಯರ‌ ಜೊತೆ ನೃತ್ಯದಲ್ಲಿ ಬನಾಗವಹಿಸಿ ಕೆಲವೊಂದು ಸ್ಟೆಪ್ ಹಾಕಿದರು.

ಸಚಿವೆ ಶಶಿಕಲಾ ಜೊಲ್ಲೆ ಸಕತ್ ಸ್ಟೆಪ್| ಮಹಿಳೆಯರ ಜೊತೆ ದಾಂಡಿಯಾ ನೃತ್ಯಕ್ಕೆ ಹೆಜ್ಜೆ Read More »

ತಂಗಿಯ ಬೆತ್ತಲೆ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ| ಅವಳಣ್ಣ ಅವನನ್ನು ಮಾಡಿದ್ದೇನು?

ಸಮಗ್ರ ನ್ಯೂಸ್: ತಂಗಿಯ ಬೆತ್ತಲೆ ಫೋಟೋ ಇಟ್ಟುಕೊಂಡಿದ್ದ ಅಂತ ಬರ್ಬರವಾಗಿ ಕೊಂದ ಘಟನೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತನ್ನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋವನ್ನು ಹೊಂದಿದ್ದಕ್ಕೆ ಆಕ್ರೋಶಗೊಂಡಿದ್ದ ದರ್ಶನ್, ತನ್ನ ಸಹಚರ ಆಶ್ರಯ್ ಜೊತೆ ಸೇರಿ ದೊಡ್ಡಬಳ್ಳಾಪುರ ಮೂಲದ ನಂದಾ ಎಂಬಾತನಿಗೆ 50 ಬಾರಿ ಇರಿದು ಬರ್ಬರವಾಗಿ ಕೊಂದಿದ್ದಾನೆ. ದೊಡ್ಡಬಳ್ಳಾಫುರದ ನಂದಾ ಹಾರೋಬಂಡೆ ಗ್ರಾಮದ ದರ್ಶನ್ ಎಂಬ ಯುವಕನ ಸಹೋದರಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋ ಇಟ್ಟುಕೊಂಡಿದ್ದ. ಅದೇ ವಿಚಾರಕ್ಕೆ ಕೊಲೆ ನಡೆದಿದೆ.

ತಂಗಿಯ ಬೆತ್ತಲೆ ಫೋಟೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ| ಅವಳಣ್ಣ ಅವನನ್ನು ಮಾಡಿದ್ದೇನು? Read More »

ನಾಳೆ(ಅ.3) ಮೈಸೂರಿಗೆ ಸೋನಿಯಾ ಗಾಂಧಿ

ಸಮಗ್ರ ನ್ಯೂಸ್: ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ನಾಳೆ(ಅ.3) ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ‌ ನಿಲ್ದಾಣಕ್ಕೆ ಆಗಮಿಸುವ ಸೋನಿಯಾ ಗಾಂಧಿ, ಸುಮಾರು 2 ಗಂಟೆ ಕಾಲ ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಜತೆ ಹೆಜ್ಜೆ ಹಾಕಲಿದ್ದಾರೆ. ನಂತರ ಎರಡು ದಿನಗಳ ಕಾಲ ಕೊಡಗಿನ ಖಾಸಗಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಳೇ ಮೈಸೂರು ಭಾಗಕ್ಕೆ ಕಾಂಗ್ರೆಸ್​ ಹೆಚ್ಚು ಒತ್ತು ಕೊಡುತ್ತಿದ್ದು, ಅ.6ರಂದು ಪ್ರಿಯಾಂಕಾ ಗಾಂಧಿ ಕೂಡ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ನಾಳೆ(ಅ.3) ಮೈಸೂರಿಗೆ ಸೋನಿಯಾ ಗಾಂಧಿ Read More »

ರಾಜ್ಯದಲ್ಲಿ ಅಂತ್ಯಗೊಂಡ ನೈಋತ್ಯ ಮುಂಗಾರು| ಈ ಬಾರಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಸುರಿದ ಮಳೆ| ಅ.15ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತ್ಯಗೊಂಡಿದ್ದರೂ ಅ.15ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.10ರ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಲಿದೆ. ಜೂನ್ 1ರಿಂದ ಸೆ.30ರವರೆಗೆ ಇದ್ದ ನೈಋತ್ಯ ಮುಂಗಾರಿನಲ್ಲಿ ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇ.20ಕ್ಕಿಂತ ಅಧಿಕ ಮಳೆಯಾಗಿದೆ. ರಾಜ್ಯದ ವಾಡಿಕೆ ಪ್ರಮಾಣ 85.2 ಸೆ.ಮೀ, ಈ ಬಾರಿ 100.19 ಸೆ.ಮಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ವಾಡಿಕೆ 67.84ಸೆ.ಮೀ ಈ ಬಾರಿ 101.2 ಸೆ.ಮೀ. ಮಳೆಯಾಗಿದ್ದು ಶೇ.49

ರಾಜ್ಯದಲ್ಲಿ ಅಂತ್ಯಗೊಂಡ ನೈಋತ್ಯ ಮುಂಗಾರು| ಈ ಬಾರಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಸುರಿದ ಮಳೆ| ಅ.15ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ Read More »

ಮತ್ತೆ ಕಂಪಿಸಿದ ಭೂಮಿ; 2.5 ತೀವ್ರತೆ ದಾಖಲು

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದ್ದು, ಭಯಗೊಂಡ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಭೂಕಂಪದ ಅನುಭವವಾಗುತ್ತಿದ್ದು, ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಭಾರಿ ಸ್ಫೋಟದ ಸದ್ದಿನೊಂದಿಗೆ ಕೆಲ ಕಾಲ ಭೂಮಿ ನಡುಗಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ನೈಸರ್ಗಿಕ ವಿಕೋಪ ಕೇಂದ್ರ ಜಿಲ್ಲೆಯಲ್ಲಿ ಭೂಕಂಪವಾಗಿರುವುದನ್ನು ಖಚಿತಪಡಿಸಿದೆ. ವಿಜಯಪುರ ಹೊರವಲಯದಲ್ಲಿನ ಆಲಿಯಾಬಾದ್ ನಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. 2.5ರಷ್ಟು ತೀವ್ರತೆ ದಾಖಲಾಗಿದೆ. ಭೂಮಿಯ 8 ಕಿ.ಮೀ ಆಳದಲ್ಲಿ ಈ

ಮತ್ತೆ ಕಂಪಿಸಿದ ಭೂಮಿ; 2.5 ತೀವ್ರತೆ ದಾಖಲು Read More »

ಕೊಟ್ಟಿಗೆಹಾರ: ಪ್ರಕೃತಿ ಹೆಸರಲ್ಲಿ ಅರಣ್ಯಾಧಿಕಾರಿಗಳ ಹಗಲು ದರೋಡೆ….? ಅಧಿಕಾರಿಗಳ ವಿರುದ್ಧ ಬೀದಿಗಿಳಿದ ಜನ….!

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಪ್ರಕೃತಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡುವ ದಂಧೆಗೆ ಇಳಿದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದ್ದು, ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಜನ ಅರಣ್ಯ ಅಧಿಕಾರಿಗಳು ಜಿಲ್ಲೆ ಹಾಗೂ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣದಲ್ಲಿ ಅರಣ್ಯ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಬೀದಿಗಿಳಿದ ಹೋರಾಟ ನಡೆಸಿದ್ದಾರೆ. ಬಲ್ಲಾಳರಾಯನದುರ್ಗದ ಸುತ್ತಮುತ್ತಲಿನ ಪ್ರದೇಶದ ಸೌಂದರ್ಯ ನೋಡೋ ಕಣ್ಗಳಿಗೆ ಹೊಸದೊಂದು ಪ್ರಪಂಚವನ್ನೇ ಉಣಬಡಿಸುವಂತಿದೆ. ಕಣ್ಣಿನ ದೃಷ್ಠಿ ಮುಗಿದರು ಹಚ್ಚಹಸಿರಿನ ಬೆಟ್ಟಗುಡ್ಡಗಳ ಸಾಲಿಗೆ ಕೊನೆ

ಕೊಟ್ಟಿಗೆಹಾರ: ಪ್ರಕೃತಿ ಹೆಸರಲ್ಲಿ ಅರಣ್ಯಾಧಿಕಾರಿಗಳ ಹಗಲು ದರೋಡೆ….? ಅಧಿಕಾರಿಗಳ ವಿರುದ್ಧ ಬೀದಿಗಿಳಿದ ಜನ….! Read More »

ಇಂಡೋನೇಷ್ಯಾದಲ್ಲಿ ಪುಟ್ಬಾಲ್ ಪಂದ್ಯಾಟದ ವೇಳೆ ಹಿಂಸಾಚಾರ| ಇಬ್ಬರು ಪೊಲೀಸರು ಸೇರಿ ಕನಿಷ್ಠ 127 ಮಂದಿ ಸಾವು

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಜಕಾರ್ತದಲ್ಲಿ ಶನಿವಾರ ತಡರಾತ್ರಿ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರದಿಂದ ಕನಿಷ್ಠ 127 ಮಂದಿ ಸಾವಿಗೀಡಾಗಿದ್ದಾರೆ. ಪೂರ್ವ ಜಾವದ ಮಲಂಗ್‌ನಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡ ಗೆಲುವು ಸಾಧಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿ, ಇಬ್ಬರು ಪೊಲೀಸರ ಸಹಿತ ಕನಿಷ್ಠ 127 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇಂಡೋನೇಷ್ಯಾದ ಪ್ರಮುಖ ಲೀಗ್ ಬಿಆರ್‌ಐ ಲಿಗಾ 1ರ ಅರೆಮಾ ಎಫ್‌ಸಿ ಮತ್ತು ಪರ್ಸಬೆಯ ಸುರಬಯ ತಂಡದ ನಡುವೆ

ಇಂಡೋನೇಷ್ಯಾದಲ್ಲಿ ಪುಟ್ಬಾಲ್ ಪಂದ್ಯಾಟದ ವೇಳೆ ಹಿಂಸಾಚಾರ| ಇಬ್ಬರು ಪೊಲೀಸರು ಸೇರಿ ಕನಿಷ್ಠ 127 ಮಂದಿ ಸಾವು Read More »