October 2022

ಬರ್ಬರವಾಗಿ ಕೊಲೆಯಾದ ಗ್ರಾ.ಪಂ ಪಿಡಿಒ| ಬೈಕ್ ತಡೆದು ಕಡಿದು ಕೊಂದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಒಬ್ಬರನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ‌ಲಿಂಗಸಗೂರು ತಾಲೂಕಿನ ಕೋಠಾ‌ ಗ್ರಾಮದಲ್ಲಿ ನಡೆದಿದೆ. ಪಿಡಿಓ ಗಜದಂಡಯ್ಯ ಸ್ವಾಮಿ ಅವರು ಬೈಕ್‌ನಲ್ಲಿ ಹೋಗಿದ್ದ ವೇಳೆ ತಡೆದು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ ಈ ಘಟನೆ ನಡೆದಿದ್ದು, ಹಂತಕರು ಬನ್ನಿ ಕೊಡುವ ನೆಪದಲ್ಲಿ ಗಜ ದಂಡಯ್ಯ ಸ್ವಾಮಿ ಅವರನ್ನು ನಿಲ್ಲಿಸಿ ಕೊಲೆ ಮಾಡಿರುವ ಶಂಕೆ ಇದೆ. ಗಜ ದಂಡಯ್ಯ ಅವರು ಬೈಕನ್ನು ರಸ್ತೆಯಲ್ಲಿ […]

ಬರ್ಬರವಾಗಿ ಕೊಲೆಯಾದ ಗ್ರಾ.ಪಂ ಪಿಡಿಒ| ಬೈಕ್ ತಡೆದು ಕಡಿದು ಕೊಂದ ದುಷ್ಕರ್ಮಿಗಳು Read More »

ಮತ್ತೆ ಆರಂಭಗೊಂಡ ಭಾರತ್ ಜೋಡೋ ‌ಪಾದಯಾತ್ರೆ| ರಾಗಾ ಜೊತೆ ‌ಹೆಜ್ಜೆ‌ ಹಾಕಿದ ಸೋನಿಯಾ ಗಾಂಧಿ

ಸಮಗ್ರ ನ್ಯೂಸ್: ಆಯುಧ ಪೂಜೆ ಮತ್ತು ವಿಜಯದಶಮಿ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸ್ಥಗಿತಗೊಂಡಿದ್ದ ಭಾರತ್​ ಜೋಡೋ ಯಾತ್ರೆ ಇಂದು ಮತ್ತೆ ಆರಂಭವಾಗಿದೆ. ಇಂದು ಬೆಳಗ್ಗೆ 6.30ಕ್ಕೆ ಮಂಡ್ಯ ಜಿಲ್ಲೆಯ ಪಾಂಡವಪುರದ ಬೆಳ್ಳಾಳೆಯಿಂದ ಪಾದಯಾತ್ರೆ ಆರಂಭವಾಯಿತು. ಇಂದಿನ ಪಾದಯಾತ್ರೆಯ ವಿಶೇಷತೆ ಏನೆಂದರೆ, ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಪುತ್ರ ರಾಹುಲ್​ ಗಾಂಧಿ ಜೊತೆ ಹೆಜ್ಜೆ ಹಾಕಿದರು. ಕೆಲ ದೂರ ಕಾರಿನಲ್ಲಿ ಬಂದ ಸೋನಿಯಾ ಗಾಂಧಿ ಅವರು ಜಕ್ಕನಹಳ್ಳಿ ಬಳಿ ಪಾದಯಾತ್ರೆ ಸೇರಿಕೊಂಡರು. ಅವರ ಎಡ

ಮತ್ತೆ ಆರಂಭಗೊಂಡ ಭಾರತ್ ಜೋಡೋ ‌ಪಾದಯಾತ್ರೆ| ರಾಗಾ ಜೊತೆ ‌ಹೆಜ್ಜೆ‌ ಹಾಕಿದ ಸೋನಿಯಾ ಗಾಂಧಿ Read More »

ಪಿಲಿಕುಳ: ಇರುವೆ ಕಾಟದಿಂದ‌ ಒದ್ದಾಡಿದ ಹಾವು| ಸಿಬ್ಬಂದಿ ನಿರ್ಲಕ್ಷಕ್ಕೆ‌ ಆಕ್ರೋಶ

ಸಮಗ್ರ ನ್ಯೂಸ್: ಮಂಗಳೂರು ನಗರದ‌ ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಇರುವೆ ಕಾಟದಿಂದ ಹಾವು ಒದ್ದಾಡಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಪಿಲಿಕುಳ‌ ಜೈವಿಕ ಉದ್ಯಾನವನದಲ್ಲಿ ಪಟ್ಟೆ ಶೀಘ್ರಗಾಮಿ ಹಾವು ಇರುವೆ ಹಿಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಪರದಾಡಿದೆ. ಇರುವೆ ದಾಳಿಯಿಂದ ಹಾವು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಉದ್ಯಾನವನಕ್ಕೆ ಭೇಟಿ ನೀಡಿದ ಪ್ರವಾಸಿಗರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು ಉದ್ಯಾನವನದ ಸಿಬ್ಬಂದಿಯ ನಿರ್ಲಕ್ಷ್ಯ ದ ಬಗ್ಗೆ ಜನರ ಆಕ್ರೋಶ

ಪಿಲಿಕುಳ: ಇರುವೆ ಕಾಟದಿಂದ‌ ಒದ್ದಾಡಿದ ಹಾವು| ಸಿಬ್ಬಂದಿ ನಿರ್ಲಕ್ಷಕ್ಕೆ‌ ಆಕ್ರೋಶ Read More »

84 ಲಕ್ಷ ವಂಚಿಸಿ ಮ್ಯಾನೇಜರ್ ಎಸ್ಕೇಪ್; ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕ್ಯಾಶಿಯರ್ ಆತ್ಮಹತ್ಯೆ!!

ಸಮಗ್ರ ನ್ಯೂಸ್: ಕರ್ನಾಟಕ ಗ್ರಾಮೀಣ ಬ್ಯಾಂಕ್​ನ ಕ್ಯಾಷಿಯರ್ ಕಲ್ಲೂಡಿ ಗ್ರಾಮದ ಸುನಿಲ್ ಕುಮಾರ್ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ವಾಟದಹೊಸಳ್ಳಿಯ ಕೆರೆ ಬಳಿ ನಡೆದಿದೆ. ಕಲ್ಲೂಡಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ನಡೆದ ವಂಚನೆ ಪ್ರಕರಣದಲ್ಲಿ ಬಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಂಕ್​ ಮ್ಯಾನೇಜರ್ 84 ಲಕ್ಷ ರೂಪಾಯಿ ವಂಚಿಸಿ ಎಸ್ಕೇಪ್ ಆಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಎಸ್ಕೇಪ್ ಆಗಿರುವ ಮ್ಯಾನೇಜರ್ ಜೊತೆ ಸುನಿಲ್ ಬಾಗಿಯಾಗಿರುವ ಶಂಕೆ ಶುರುವಾಗಿದೆ. ವಂಚನೆ ಪ್ರಕರಣ ತನ್ನ ಮೇಲೆ ಬರುತ್ತೆ ಅಂತ

84 ಲಕ್ಷ ವಂಚಿಸಿ ಮ್ಯಾನೇಜರ್ ಎಸ್ಕೇಪ್; ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಕ್ಯಾಶಿಯರ್ ಆತ್ಮಹತ್ಯೆ!! Read More »

ಮುಂದಿನ ಆರು ವರ್ಷದಲ್ಲಿ ಕಲಿಯುಗ ಅಂತ್ಯ| ಭಯಾನಕ ಭವಿಷ್ಯ ಆ ಜ್ಯೋತಿಷಿ!!

ಸಮಗ್ರ ನ್ಯೂಸ್: ಮುಂದಿನ 6 ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಚಿಕ್ಕಮಗಳೂರಿನಲ್ಲಿ ಬ್ರಹ್ಮಾಂಡ ಗುರೂಜಿ ಭಯಂಕರ ಭವಿಷ್ಯ ನುಡಿದಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಜನಜಾಗೃತಿ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಮನುಷ್ಯ ಸಾಯುತ್ತಾನೆ ಎಂದರ್ಥವಲ್ಲ. ಸಂಧಿಕಾಲದಲ್ಲಿ ಸತ್ಯಯುಗ ಆರಂಭಗೊಳ್ಳಲಿದೆ ಎಂದಿದ್ದಾರೆ. ದೇಶಕ್ಕೆ ಇಬ್ಬರು ಪ್ರದಾನಿ, ರಾಷ್ಟ್ರಪತಿಗಳು ಇರಲಿದ್ದಾರೆ ಎಂದರು. ಶಾಸನದ ಪ್ರಕಾರ ಇನ್ನು ಆರು ವರ್ಷದಲ್ಲಿ ಕಲಿಯುಗ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರಿಂದ ಜನರಿಗೆ ನಿಟ್ಟುಸಿರುಬಿಟ್ಟ ಹಾಗೆ ಆಗಿದೆ. ಸಂಧಿಕಾಲ ಅನ್ನೋದು 25 ವರ್ಷ ಇರುತ್ತದೆ. ಸತ್ಯಯುಗ ಶುರುವಾಗತ್ತದೆ.

ಮುಂದಿನ ಆರು ವರ್ಷದಲ್ಲಿ ಕಲಿಯುಗ ಅಂತ್ಯ| ಭಯಾನಕ ಭವಿಷ್ಯ ಆ ಜ್ಯೋತಿಷಿ!! Read More »

ಪಾಲಕ್ಕಾಡ್: ಭೀಕರ ಅಪಘಾತಕ್ಕೆ 9 ಮಂದಿ ಬಲಿ| ಹಲವರು ಗಂಭೀರ

ಸಮಗ್ರ ನ್ಯೂಸ್: ಪಾಲಕ್ಕಾಡ್‌ನ ವಡಕ್ಕೆಂಚೇರಿ ಬಳಿಯ ಮಂಗಳಂ ಎಂಬಲ್ಲಿ ಬುಧವಾರ ರಾತ್ರಿ ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ಸೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಟೂರಿಸ್ಟ್ ಬಸ್‌ನಲ್ಲಿ ಒಟ್ಟು 42 ವಿದ್ಯಾರ್ಥಿಗಳಿದ್ದರು ಮತ್ತು ಕೆಎಸ್‌ಆ​ರ್​ಟಿಸಿ ಬಸ್​ನಲ್ಲಿ 49 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಶಾಲಾ ಶಿಕ್ಷಕಿ ವಿಷ್ಣು ವಿಕೆ ಮತ್ತು ವಿದ್ಯಾರ್ಥಿಗಳಾದ ಅಂಜನಾ ಅಜಿತ್, ಇಮ್ಯಾನುಯೆಲ್ ಸಿಎಸ್, ದಿಯಾ ರಾಜೇಶ್, ಕ್ರಿಸ್

ಪಾಲಕ್ಕಾಡ್: ಭೀಕರ ಅಪಘಾತಕ್ಕೆ 9 ಮಂದಿ ಬಲಿ| ಹಲವರು ಗಂಭೀರ Read More »

ಸುಳ್ಯ: ನೆಹರೂ, ಕಾರಂತರ ಕಾರು ಚಾಲಕರಾಗಿದ್ದ ಮೋನಪ್ಪ ಗೌಡ ಕೊರಂಬಡ್ಕ ಇನ್ನಿಲ್ಲ

ಸಮಗ್ರ ನ್ಯೂಸ್: ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಸಾಹಿತಿ ಶಿವರಾಮ ಕಾರಂತರ ಕಾರು ಚಾಲಕರಾಗಿದ್ದ ಶತಾಯುಷಿ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ (102) ಅವರು ವಯೋಸಹಜ ಅಸೌಖ್ಯದಿಂದಾಗಿ ಇಂದು(ಅ.6) ಮುಂಜಾನೆ ನಿಧನರಾಗಿದ್ದಾರೆ. ಭಾರತದ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದು, ನೆಹರೂ ಅವರ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪುತ್ರ, ಮೂವರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುಳ್ಯ: ನೆಹರೂ, ಕಾರಂತರ ಕಾರು ಚಾಲಕರಾಗಿದ್ದ ಮೋನಪ್ಪ ಗೌಡ ಕೊರಂಬಡ್ಕ ಇನ್ನಿಲ್ಲ Read More »

ರಾಜ್ಯದಲ್ಲಿ ಮತ್ತೆ ಮಳೆ; ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಕೆಲದಿನಗಳಿಂದ ಕೊಂಚ ಕಡಿಮೆಯಾಗಿದ್ದ ಮಳೆ‌ ಮತ್ತೆ ಭಾರತೀಯ ಬಿರುಸು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂಬುದಾಗಿ ಮಾಹಿತಿ ನೀಡಿದೆ. ರಾಜ್ಯದ ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಮಳೆ ನಿಧಾನವಾಗಲಿದೆ ಎಂದು ಐಎಂಡಿ ಹೇಳಿದೆ. ಮಳೆಯ

ರಾಜ್ಯದಲ್ಲಿ ಮತ್ತೆ ಮಳೆ; ಹಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ Read More »

ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ| ಹಲವು ಭಕ್ತರು‌ ನಾಪತ್ತೆ

ಸಮಗ್ರ ನ್ಯೂಸ್: ದುರ್ಗಾ ವಿಸರ್ಜನೆ ವೇಳೆ ದಿಢೀರ್ ಸೃಷ್ಟಿಯಾದ ಪ್ರವಾಹದಿಂದ ಹಲವು ಭಕ್ತರು ಕೊಚ್ಚಿ ಹೋದ ಘಟನೆ ಪ.ಬಂಗಾಳದಲ್ಲಿ ನಡೆದಿದೆ. ಇಲ್ಲಿನ ಜಲ್‌ಪೈಗುರಿ ಜಿಲ್ಲೆಯ ನಿಯೋರಾ ನದಿ ದಂಡೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ಅವಘಡ ಸಂಭವಿಸಿದ್ದು ಹಲವರು ನಾಪತ್ತೆಯಾಗಿದ್ದಾರೆ. ಕಳೆದೆರಡು ದಿನದಿಂದ ಸತತ ಮಳೆಯಾಗುತ್ತಿದ್ದ ಕಾರಣ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ ಸೃಷ್ಟಿಯಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಭಕ್ತರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 7 ಮಂದಿ ಮೃತದೇಹ ಹೊರಕ್ಕೆ

ದುರ್ಗಾ ವಿಸರ್ಜನೆ ವೇಳೆ ದಿಢೀರ್ ಪ್ರವಾಹ| ಹಲವು ಭಕ್ತರು‌ ನಾಪತ್ತೆ Read More »

ನಾಡಹಬ್ಬ ದಸರಾ ಜಂಬೂ ಸವಾರಿ‌ ನೇರಪ್ರಸಾರ

ಸಮಗ್ರ ನ್ಯೂಸ್: ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಜಂಬೂಸವಾರಿ ನೇರಪ್ರಸಾರ ಕೃಪೆ: ಡಿಡಿ ಚಂದನ… ಕೆಳಗಿನ ಲಿಂಕ್ ಕ್ಲಿಕ್ ಮಾಡಿ…

ನಾಡಹಬ್ಬ ದಸರಾ ಜಂಬೂ ಸವಾರಿ‌ ನೇರಪ್ರಸಾರ Read More »