October 2022

ಬೈಕ್ ಸ್ಕಿಡ್ ಆಗಿ ಸವಾರ ದುರ್ಮರಣ

ಸಮಗ್ರ ನ್ಯೂಸ್: ಬೈಕ್ ಸವಾರ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್‌ಯಾಗಿರುವ ಪರಿಣಾಮ ಬೈಕ್ ಸವಾರ ಅಸುನೀಗಿರುವ ಘಟನೆ ವಿಜಯಪುರ ತಾಲ್ಲೂಕಿನ ಮದಬಾಬಿ ಕ್ರಾಸ್ ಬಳಿ ಬುಧವಾರ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿಯಾದ ಕಾಶಿನಾಥ ಮೃತಪಟ್ಟಿರುವ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಶಂಕರ್, ಸಮಗ್ರ ನ್ಯೂಸ್, ವಿಜಯಪುರ

ಬೈಕ್ ಸ್ಕಿಡ್ ಆಗಿ ಸವಾರ ದುರ್ಮರಣ Read More »

ಸುಳ್ಯ: ಪೈಟಿಂಗ್ ಮಾಡುತ್ತಿದ್ದ ಕಾರ್ಮಿಕ ಆಯತಪ್ಪಿ ಬಿದ್ದು ಸಾವು

ಸಮಗ್ರ ನ್ಯೂಸ್: ಕಟ್ಟಡವೊಂದಕ್ಕೆ ಪೈಂಟಿಂಗ್ ಮಾಡುತ್ತಿದ್ದಾಗ ಮೇಲಿನಿಂದ ಬಿದ್ದು ಬಿಹಾರ ಮೂಲದ ಯುವಕ ಮೃತಪಟ್ಟ ಘಟನೆ ದ.ಕ ಜಿಲ್ಲೆಯ ಸುಳ್ಯ ನಗರದ ಕುರುಂಜಿಭಾಗ್ ನಿಂದ ವರದಿಯಾಗಿದೆ. ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಹಿಂಬದಿಯ ಕಟ್ಟಡದಲ್ಲಿ ಬಿಹಾರ ಮೂಲದ ರಂಜಿತ್ (29) ಪೈಂಟ್ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಕೆಲಸ ಮುಗಿಸಿ ಮೇಲಿನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಕೆಳಕ್ಕೆ ಬಿದ್ದರು.‌ ಗಂಭೀರ ಗಾಯಗೊಂಡಿದ್ದ ಆತನನ್ನು ಜತೆಗಾರರು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೆ ಅವರು‌ ಮೃತ ಪಟ್ಟರೆಂದು ತಿಳಿದು

ಸುಳ್ಯ: ಪೈಟಿಂಗ್ ಮಾಡುತ್ತಿದ್ದ ಕಾರ್ಮಿಕ ಆಯತಪ್ಪಿ ಬಿದ್ದು ಸಾವು Read More »

ನಾಳೆ(ಅ13) ಹಿಜಾಬ್ ವಿವಾದ ಕುರಿತ ತೀರ್ಪು ಪ್ರಕಟ

ಸಮಗ್ರ ನ್ಯೂಸ್: ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಕುರಿತ ತೀರ್ಪು ನಾಳೆ(ಅ.13) ಪ್ರಕಟವಾಗಲಿದೆ. ಬೆಳಗ್ಗೆ 10.30ರ ಸುಮಾರಿಗೆ ಸುಪ್ರೀಂ ಕೋರ್ಟ್​ನಿಂದ ತೀರ್ಪು ಹೊರಬೀಳಲಿದೆ. ಸರ್ಕಾರ ಶಾಲಾ-ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ಬ್ಯಾನ್ ಮಾಡಿದ್ದು, ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತು. ಹೈಕೋರ್ಟ್​ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿ ತೀರ್ಪನ್ನು ಸುಪ್ರೀಂಕೋರ್ಟ್ ಪ್ರಕಟಿಸಲಿದೆ.

ನಾಳೆ(ಅ13) ಹಿಜಾಬ್ ವಿವಾದ ಕುರಿತ ತೀರ್ಪು ಪ್ರಕಟ Read More »

ಮಂಗಳೂರು: ಶಾರದೋತ್ಸವ ಬ್ಯಾನರ್ ಹರಿದ ಪ್ರಕರಣ| ಗುಳಿಗನ ಕಾರಣಿಕದಿಂದ ಸಿಕ್ಕಿಬಿದ್ದರಾ ಆರೋಪಿಗಳು? ಕುತೂಹಲ ಮೂಡಿಸಿದ ಗುಳಿಗನ ಹರಕೆ!!

ಸಮಗ್ರ‌ ನ್ಯೂಸ್: ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಘಕ್ಕೆ ಸಂಚು ರೂಪಿಸಲಾಗಿದ್ದು, ಶಾರದೋತ್ಸವದ ನಿಮಿತ್ತ ಹಾಕಲಾಗಿದ್ದ, ಬ್ಯಾನರ್‌ ಹರಿದು ಕೋಮುಗಲಭೆ ಸೃಷ್ಟಿಸಲು ಪ್ಲ್ಯಾನ್‌ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐದಾರು ಬ್ಯಾನರ್‌ ಹರಿದು ಸಂಘರ್ಷ ಸೃಷ್ಟಿಸಲು ಪ್ಲ್ಯಾನ್‌ ಮಾಡಿ ಅನ್ಯದರ್ಮಿಯರ ಮೇಲೆ ಅನುಮಾನ ಬರುವಂತೆ ಕೃತ್ಯ ಎಸಗಲಾಗಿತ್ತು. ಘಟನೆ ಸಂಬಂಧ ಇದೀಗ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದ್ದು, ದೈವರ ಮೊರೆಹೊಕ್ಕ ಬಳಿಕ ಕಿಡಿಕೇಡಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದರಿಂದ ಬೇಸತ್ತ

ಮಂಗಳೂರು: ಶಾರದೋತ್ಸವ ಬ್ಯಾನರ್ ಹರಿದ ಪ್ರಕರಣ| ಗುಳಿಗನ ಕಾರಣಿಕದಿಂದ ಸಿಕ್ಕಿಬಿದ್ದರಾ ಆರೋಪಿಗಳು? ಕುತೂಹಲ ಮೂಡಿಸಿದ ಗುಳಿಗನ ಹರಕೆ!! Read More »

ಮಂಗಳೂರು: ಸಲಿಂಗ ರತಿಗೆ ಬಳಸಿಕೊಂಡು ಹಣನೀಡದ ವೃದ್ಧ| ಕತ್ತು ಹಿಸುಕಿ ಕೊಲೆಗೈದ ಯುವಕ

ಸಮಗ್ರ ನ್ಯೂಸ್: ಲೈಂಗಿಕವಾಗಿ ಬಳಸಿಕೊಂಡು 300 ರೂಪಾಯಿ ಹಣ ನೀಡದೇ ನಿರಾಕರಿಸಿದ್ದಕ್ಕಾಗಿ ವೃದ್ಧನನ್ನು ಯುವಕನೊಬ್ಬ ಕತ್ತು ಹಿಸುಕಿ ಕೊಂದಿರುವ ಆಘಾತಕಾರಿ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ. ನಗರದ ಮಂದಾರಬೈಲು ಜಯಾನಂದ ಆಚಾರ್ಯ(65) ಮೃತ ವ್ಯಕ್ತಿ. ಕುಂಜತ್ ಬೈಲ್ ಪ್ರದೇಶದ ದೇವಿನಗರ ನಿವಾಸಿ ರಾಜೇಶ್ ಪೂಜಾರಿ(31) ಕೊಲೆ ಆರೋಪಿ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿನ ಕಿಯೋನಿಕ್ಸ್​ಗೆ ಸೇರಿದ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ. ಕೊಲೆಯಾದ ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದು, ದಸರಾ ಸಂದರ್ಭದಲ್ಲಿ ಹೆಣ್ಣು

ಮಂಗಳೂರು: ಸಲಿಂಗ ರತಿಗೆ ಬಳಸಿಕೊಂಡು ಹಣನೀಡದ ವೃದ್ಧ| ಕತ್ತು ಹಿಸುಕಿ ಕೊಲೆಗೈದ ಯುವಕ Read More »

ಕೇವಲ ₹80ಕ್ಕೆ‌ ಮಾರಾಟವಾಯ್ತು ‘ನಿಸಾನ್’ ಕಾರು ಕಂಪನಿ!!

ಸಮಗ್ರ ನ್ಯೂಸ್: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ ಮೂಲದ ನಿಸಾನ್‌ ಕಾರು ಕಂಪನಿ, ರಷ್ಯಾದ ತನ್ನ ಎಲ್ಲ ವಹಿವಾಟನ್ನು ಕೇವಲ 80 ರೂ.(1 ಯೂರೋ)ಗಳಿಗೆ ಮಾರಾಟ ಮಾಡಿದೆ. ಈ ಮೂಲಕ 56,485 ಕೋಟಿ ರೂ.(687 ದಶಲಕ್ಷ ಡಾಲರ್‌) ನಷ್ಟ ಮಾಡಿಕೊಂಡಿದೆ. ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ಎನ್‌ಎಎಂಐ ಎಂಬ ಸಂಸ್ಥೆಗೆ ಇದನ್ನು ಮಾರಿದೆ ಎಂದು ರಷ್ಯಾದ ಉದ್ಯಮ ಮತ್ತು ವ್ಯಾಪಾರ ಸಚಿವಾಲಯ ಹೇಳಿದೆ. ಆದರೆ, ಮುಂದಿನ ಆರು ವರ್ಷಗಳಲ್ಲಿ ಯಾವಾಗ ಬೇಕಾದರೂ, ನಿಸಾನ್‌ ಮೋಟಾರ್ಸ್‌

ಕೇವಲ ₹80ಕ್ಕೆ‌ ಮಾರಾಟವಾಯ್ತು ‘ನಿಸಾನ್’ ಕಾರು ಕಂಪನಿ!! Read More »

ಪಣಜಿ ಸಮುದ್ರದಲ್ಲಿ ಪತನಗೊಂಡ MiG29K ಯುದ್ದ ವಿಮಾನ|

ಸಮಗ್ರ ನ್ಯೂಸ್: MiG 29K ಯುದ್ಧ ವಿಮಾನವು ಗೋವಾ ಕರಾವಳಿಯ ಪಣಜಿ ಸಮುದ್ರದ ಮೇಲೆ ಪತನಗೊಂಡಿದೆ ಎಂದು ವರದಿಯಾಗಿದೆ. MiG 29K ವಿಮಾನವು ಅತ್ಯಾಧುನಿಕ, ವಾಯು ಪ್ರಾಬಲ್ಯದ ಫೈಟರ್ ಜೆಟ್ ಆಗಿದ್ದು, ಸುಮಾರು 2000 kmph ಗರಿಷ್ಠ ವೇಗವನ್ನು ಹೊಂದಿದೆ. ಇದು 65,000 ಅಡಿಗಿಂತಲೂ ಎತ್ತರಕ್ಕೆ ಏರುವ ಸಾಮರ್ಥ್ಯ ಹೊಂದಿದೆ. ಇಂದು ಬೆಳಗ್ಗೆ ವಾಡಿಕೆ ವಿಹಾರ ನಡೆಸುತ್ತಿದ್ದಾಗ ಯುದ್ಧ ವಿಮಾನ ಬೇಸ್‌ಗೆ ಹಿಂತಿರುಗುವಾಗ ತಾಂತ್ರಿಕ ದೋಷ ಕಂಡುಬಂದು ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ ಸುರಕ್ಷಿತವಾಗಿದ್ದು ಯಾವುದೇ ಸಾವು-ನೋವು ಸಂಭವಿಸಿಲ್ಲ.

ಪಣಜಿ ಸಮುದ್ರದಲ್ಲಿ ಪತನಗೊಂಡ MiG29K ಯುದ್ದ ವಿಮಾನ| Read More »

ಮಂಗಳೂರು: ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪಿಎಸ್ಐ

ಸಮಗ್ರ ನ್ಯೂಸ್: ಮಂಗಳೂರು ‌ನಗರದ‌ ಹೊರವಲಯ ಪಣಂಬೂರಿನ ಎನ್‌ಎಂಪಿಟಿ ಮುಖ್ಯ ಗೇಟ್ ನಲ್ಲಿ ಕರ್ತವ್ಯದಲ್ಲಿದ್ದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ (CISF) ಇದರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ವರದಿಯಾಗಿದೆ. ರಾಜಸ್ಥಾನದ ಭರತ್ ಪುರ ಜಿಲ್ಲೆಯ ಜ್ಯೋತಿ ಬಾಯಿ (33) ಆತ್ಮಹತ್ಯೆಗೆ ಯತ್ನಿಸಿದ ಸಿಐಎಸ್ಎಫ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಂದು ತಿಳಿದುಬಂದಿದೆ. ಘಟನೆ ಬುಧವಾರ ಬೆಳಗ್ಗೆ 6 ರಿಂದ 6.15ರ ನಡುವೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ಜ್ಯೋತಿ ಅವರನ್ನು

ಮಂಗಳೂರು: ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮಹಿಳಾ ಪಿಎಸ್ಐ Read More »

ಸುಳ್ಯ- ಮಡಿಕೇರಿ ಗಡಿಭಾಗದಲ್ಲಿ ಅಕ್ರಮ ಮರಳು ದಂಧೆ! | ಗೊತ್ತಿದ್ದೂ ನಿದ್ದೆಗೆ ಜಾರಿದರಾ ಅಧಿಕಾರಿಗಳು!

ಸಮಗ್ರ ನ್ಯೂಸ್: ನದಿಪಾತ್ರಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ಪೀಠ ಸ್ಪಷ್ಟ ಆದೇಶ ನೀಡಿದ್ದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ರಾಜಾರೋಷವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುದೆ. ದ.ಕ ಜಿಲ್ಲೆಯ ಗಡಿಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗೆ ಸ್ಥಳೀಯ ಜನಪ್ರತಿನಿಧಿಗಳ ಕೃಪೆಯಿದ್ದು ಪೊಲೀಸ್ ಅಧಿಕಾರಿಗಳಿಂದ ಹಿಡಿದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳವರೆಗೆ ಎಲ್ಲರೂ ಕೈ ಬಿಸಿ ಮಾಡಿಕೊಳ್ಳುತ್ತಿದ್ದು ಸಂಜೆಯಾಗುತ್ತಿದ್ದಂತೆ ನೂರಾರು ಲೋಡ್ ಮರಳು ಸಾಗಾಟವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಸುಳ್ಯ ತಾಲೂಕಿನ ಅರಂತೋಡು, ಕಡಬ

ಸುಳ್ಯ- ಮಡಿಕೇರಿ ಗಡಿಭಾಗದಲ್ಲಿ ಅಕ್ರಮ ಮರಳು ದಂಧೆ! | ಗೊತ್ತಿದ್ದೂ ನಿದ್ದೆಗೆ ಜಾರಿದರಾ ಅಧಿಕಾರಿಗಳು! Read More »

ಧರ್ಮಸ್ಥಳ: ಪಾದಾಚಾರಿಗೆ ಡಿಕ್ಕಿ ಹೊಡೆದು ವಾಹನ ಪರಾರಿ; ವೃದ್ದ ಸಾವು

ಸಮಗ್ರ ನ್ಯೂಸ್: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವೃದ್ಧರೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ಘಟನೆ ಧರ್ಮಸ್ಥಳದ ಶಾಂತಿವನದ ಸಮೀಪ ನಡೆದಿದೆ. ಡಿಕ್ಕಿಯ ರಭಸಕ್ಕೆ ವೃದ್ಧನಿಗೆ ಗಂಭೀರ ಗಾಯವಾಗಿ ರಸ್ತೆ ಬದಿಯಲ್ಲಿ ಬಿದ್ದಿದ್ದು ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತ ಅಪರಿಚಿತ ವ್ಯಕ್ತಿ ವಯಸ್ಸು 50ರಿಂದ 60 ವರ್ಷ ಎಂದು ಅಂದಾಜಿಸಲಾಗಿದೆ. ಅವರ ವಿಳಾಸದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ .ಡಿಕ್ಕಿ ಹೊಡೆದ ವಾಹನ

ಧರ್ಮಸ್ಥಳ: ಪಾದಾಚಾರಿಗೆ ಡಿಕ್ಕಿ ಹೊಡೆದು ವಾಹನ ಪರಾರಿ; ವೃದ್ದ ಸಾವು Read More »