October 2022

ರಾಜ್ಯದಲ್ಲಿ ವರುಣಾರ್ಭಟಕ್ಕೆ 13 ಮಂದಿ ಬಲಿ| ಅಪಾರ ಹಾನಿ, ಆಸ್ತಿಪಾಸ್ತಿ ನಷ್ಟ| ಅ 15ರ ವರೆಗೆ ಭಾರೀ ಮಳೆ ಸಂಭವ

ಸಮಗ್ರ ನ್ಯೂಸ್ : ಈ ವರ್ಷ ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಈ ತಿಂಗಳ ಆರಂಭದಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಿಂದ 13 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದ ಜಾನುವಾರುಗಳು ಮತ್ತು ಆಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಜಿಲ್ಲಾಧಿಕಾರಿಗಳಿಗೆ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ. ಅಕ್ಟೋಬರ್ 1ರಿಂದ ಮಳೆಯಿಂದಾಗಿ ಕರ್ನಾಟಕದಲ್ಲಿ 28 ಜಾನುವಾರುಗಳು ಸಾವನ್ನಪ್ಪಿವೆ, 3,309 ಮನೆಗಳಿಗೆ ಹಾನಿಯಾಗಿದೆ, ಸುಮಾರು 6,279 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ. […]

ರಾಜ್ಯದಲ್ಲಿ ವರುಣಾರ್ಭಟಕ್ಕೆ 13 ಮಂದಿ ಬಲಿ| ಅಪಾರ ಹಾನಿ, ಆಸ್ತಿಪಾಸ್ತಿ ನಷ್ಟ| ಅ 15ರ ವರೆಗೆ ಭಾರೀ ಮಳೆ ಸಂಭವ Read More »

ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ| ಮುರುಘಾ ಶರಣರ ವಿರುದ್ದ ಮತ್ತೊಂದು ಎಫ್ಐಆರ್ ದಾಖಲು

ಸಮಗ್ರ ನ್ಯೂಸ್: ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇದೀಗ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರಿಗೆ ಅಂತಹದ್ದೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಮಠದಲ್ಲಿ‌ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಶ್ರೀಗಳ ವಿರುದ್ಧ ನಿನ್ನೆ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದರಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು, ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು. ಸದ್ಯ

ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ| ಮುರುಘಾ ಶರಣರ ವಿರುದ್ದ ಮತ್ತೊಂದು ಎಫ್ಐಆರ್ ದಾಖಲು Read More »

ಕಲ್ಲಡ್ಕ: ನಿರ್ಮಾಣ ಹಂತದ ಪ್ಲೈಓವರ್ ಕುಸಿತ

ಸಮಗ್ರ ನ್ಯೂಸ್: ಮಂಗಳೂರು ಬೆಂಗಳೂರು ರಾ.ಹೆದ್ದಾರಿಯ ಬಂಟ್ವಾಳದಿಂದ ಶಿರಾಡಿವರೆಗಿನ ಚತುಷ್ಪಥ ಹೆದ್ದಾರಿ ನಿರ್ಮಾಣದ ಕಾಮಗಾರಿ ವೇಳೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿಯ ನಿರ್ಮಾಣ ಹಂತದ ಪಿಲ್ಲರ್ ಹಠಾತ್ ಕುಸಿತಗೊಂಡ ಘಟನೆ ಅ.13 ರಂದು ಮಧ್ಯಾಹ್ನ ನಡೆದಿದೆ. ಕಲ್ಲಡ್ಕ ಪೇಟೆಯಲ್ಲಿ ಕಳೆದ ಕೆಲ ತಿಂಗಳಿನಿಂದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಇದೀಗ ನಿರ್ಮಾಣ ಹಂತದ ಪಿಲ್ಲರ್ ಕಾಮಗಾರಿ ಕುಸಿದಿದ್ದು, ಈ ಘಟನೆಯ ನಂತರ

ಕಲ್ಲಡ್ಕ: ನಿರ್ಮಾಣ ಹಂತದ ಪ್ಲೈಓವರ್ ಕುಸಿತ Read More »

ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ್​ ಸಿಂಹರ ಕೊಡುಗೆ ಶೂನ್ಯ – ತನ್ವೀರ್ ಸೇಠ್

ಸಮಗ್ರ ನ್ಯೂಸ್: ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ ಸಿಂಹರ ಕೊಡುಗೆ ಶೂನ್ಯ, ಇತಿಹಾಸ ತಿಳಿದು ಮಾತನಾಡಲಿ‌ ಎಂದು ಶಾಸಕ ತನ್ವೀರ್ ಸೇಠ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು. ಟಿಪ್ಪು ಎಕ್ಸ್​ಪ್ರೆಸ್​ ಹೆಸರನ್ನು ಒಡೆಯರ್ ಎಕ್ಸ್​ಪ್ರೆಸ್ ಎಂದು ನಾನು ಉದ್ದೇಶ ಪೂರ್ವಕವಾಗಿಯೇ ಬದಲಾಯಿಸಿದ್ದೇನೆ ಎಂಬ ಸಂಸದ ಪ್ರತಾಪಸಿಂಹ ಹೇಳಿಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಠ್, ಯಾರು ಕೊಡುಗೆ ಏನಿದೆ ಅಂತ ನಾನು ಚರ್ಚೆಗೆ ಹೋಗಲ್ಲ. ಟಿಪ್ಪು ಸುಲ್ತಾನ್ ಮೈಸೂರು ಸಾಮ್ರಾಜ್ಯಕ್ಕೆ ರಕ್ಷಣೆ ಕೊಟ್ಟಿದ್ದಾರೆ

ಟಿಪ್ಪು ಸುಲ್ತಾನ್ ಕೊಡುಗೆ ಮುಂದೆ, ಸಂಸದ ಪ್ರತಾಪ್​ ಸಿಂಹರ ಕೊಡುಗೆ ಶೂನ್ಯ – ತನ್ವೀರ್ ಸೇಠ್ Read More »

ಮುಂದಿನ ವರ್ಷ ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ…

ಸಮಗ್ರ ನ್ಯೂಸ್: ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು ಶಾಲೆಗೆ ಸೇರುವ ಪೋಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದನೇ ತರಗತಿಗೆ ಮಗು ಸೇರಿಸಲು ಆರು ವರ್ಷ ಪೂರ್ಣಗೊಂಡಿರಬೇಕು. ಈ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಒಂದನೇ ತರಗತಿ ಅಥವಾ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು 6 ವರ್ಷ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಶಿಕ್ಷಣ ತಜ್ಞರ ಸಲಹೆ

ಮುಂದಿನ ವರ್ಷ ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ… Read More »

ಟೀಚರ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿ ಸಾವಿಗೆ ಶರಣು| ಆತನ ಆತ್ಮಹತ್ಯೆಗೆ ಕಾರಣವೇನು ಗೊತ್ತಾ?

ಸಮಗ್ರ ನ್ಯೂಸ್: ಶಿಕ್ಷಕಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾದ ಬಳಿಕ ಶಿಕ್ಷಕಿಯನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಶಿಕ್ಷಕಿ 18 ವರ್ಷದ ವಿದ್ಯಾರ್ಥಿ ಜತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ ಈತ ಸಾವಿಗೆ ಶರಣಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಚೆನ್ನೈನ ಅಂಬತ್ತೂರ್ ನಲ್ಲಿನ ಅನುದಾನಿತ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈಕೆ, ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗೆ ಶಿಕ್ಷಕಿಯಾಗಿದ್ದಳು. ಕೆಲವು ಬಾರಿ ವಿದ್ಯಾರ್ಥಿ ಈಕೆಯ ಮನೆಗೂ ಭೇಟಿ ನೀಡುತ್ತಿದ್ದ ಎಂದು ವರದಿ ತಿಳಿಸಿದೆ. ಶಿಕ್ಷಕಿಗೆ ನಿಶ್ಚಿತಾರ್ಥವಾದ

ಟೀಚರ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿ ಸಾವಿಗೆ ಶರಣು| ಆತನ ಆತ್ಮಹತ್ಯೆಗೆ ಕಾರಣವೇನು ಗೊತ್ತಾ? Read More »

ರಾಜ್ಯಾದ್ಯಂತ ಮೂರು ದಿನ‌ ಗುಡುಗು‌ ಸಹಿತ‌ ಮಳೆ ಸಂಭವ| ಹವಾಮಾನ ಇಲಾಖೆಯಿಂದ ಮಾಹಿತಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 2 ದಿನಗಳಿಂದ ಮಳೆಯಾಗುತ್ತಿದೆ. ಇಂದಿನಿಂದ 3 ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇಂದು ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಬೆಂಗಳೂರು, ಚಿತ್ರದುರ್ಗ, ಹಾಸನ ಹವಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಮುಂದಿನ 3 ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು

ರಾಜ್ಯಾದ್ಯಂತ ಮೂರು ದಿನ‌ ಗುಡುಗು‌ ಸಹಿತ‌ ಮಳೆ ಸಂಭವ| ಹವಾಮಾನ ಇಲಾಖೆಯಿಂದ ಮಾಹಿತಿ Read More »

ಸಕಲೇಶಪುರ : ನಗರದೊಳಗೆ ಗಜರಾಜನ ಪಟ್ಟಣ ಸವಾರಿ; ಆತಂಕದಲ್ಲಿ ಜನತೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಸದಾಶಿವ ನಗರದಲ್ಲಿ ಕಾಡಾನೆಯೊಂದು ಓಡಾಟ ನಡೆಸಿರುವ ಘಟನೆ ಇಂದು ನಡೆದಿದೆ. ಅ. ೧೨ರ ರಾತ್ರಿ 8:45 ರಲ್ಲಿ ಕಾಡಾನೆಯು ರಾಜಾರೋಷವಾಗಿ ರಸ್ತೆಯಲ್ಲಿ ತಿರುಗಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಓಡಾಡಲು ಆತಂಕಪಡುತ್ತಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಇತ್ತೀಚಿಗೆ ಗೌಡಳ್ಳಿ ಮಳಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಬೆಳೆ ಹಾನಿ ಜೊತೆಗೆ ಸಾರ್ವಜನಿಕರು ನಿರ್ಭೀತಿಯಿಂದ ತಿರುಗಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಸಾರ್ವಜನಿಕ ಒತ್ತಾಯಿಸಿದ್ದಾರೆ.

ಸಕಲೇಶಪುರ : ನಗರದೊಳಗೆ ಗಜರಾಜನ ಪಟ್ಟಣ ಸವಾರಿ; ಆತಂಕದಲ್ಲಿ ಜನತೆ Read More »

ಬೈಕ್ ನಿಂದ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ದಂಪತಿ; ಗರ್ಭಿಣಿ ಮಹಿಳೆ ಸಾವು, ಪತಿ ಗಂಭೀರ

ಸಮಗ್ರ ನ್ಯೂಸ್: ಬೈಕ್ ಸವಾರನ ನಿಯಂತ್ರಣ ತಪ್ಪಿ ಕೆರೆ ಬಿದ್ದ ದಂಪತಿಗಳು ಹಿಂಬದಿಯಲ್ಲಿ ಕುಳಿತ್ತಿದ್ದ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯಮುನಾ ಮೃತ ಗರ್ಭಿಣಿ ಮಹಿಳೆ. 28 ವರ್ಷದ ದಕ್ಷಿಣಾಮೂರ್ತಿ ಅಲಿಯಾಸ್ ನವೀನ್ ಗಂಭೀರ ಗಾಯಗೊಂಡಿದ್ದಾರೆ. ದೇವನೂರು ಗ್ರಾಮದ ದಕ್ಷಿಣಾಮೂರ್ತಿ ತನ್ನ ಹೆಂಡತಿ ಯಮುನಾ ಜೊತೆ ಬೈಕ್ ನಲ್ಲಿ ನಂಜನಗೂಡು ಮಾರ್ಗವಾಗಿ ಸಿದ್ದಯ್ಯನಹುಂಡಿ ಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಗಂಡ

ಬೈಕ್ ನಿಂದ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ದಂಪತಿ; ಗರ್ಭಿಣಿ ಮಹಿಳೆ ಸಾವು, ಪತಿ ಗಂಭೀರ Read More »

ನಾಳೆ(ಅ. 14) ‘ಕಾಂತಾರ’ ಹಿಂದಿಯಲ್ಲಿ ರಿಲೀಸ್| 2500 ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ದತೆ| ಬೆಚ್ಚಿದ ಬಿಟೌನ್

ಸಮಗ್ರ ನ್ಯೂಸ್: ಕನ್ನಡದ ಕಾಂತಾರ ಸಿನಿಮಾ ನಾಳೆಯಿಂದ ಹಿಂದಿಯಲ್ಲಿ 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್, ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಕೆಜಿಎಫ್ ಬಳಿಕ ಮತ್ತೊಂದು ದಾಖಲೆ‌ ಬರೆಯಲು ಹೊಂಬಾಳೆ ಪಿಲಮ್ಸ್ ಸಜ್ಜಾಗಿದೆ. ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್

ನಾಳೆ(ಅ. 14) ‘ಕಾಂತಾರ’ ಹಿಂದಿಯಲ್ಲಿ ರಿಲೀಸ್| 2500 ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ದತೆ| ಬೆಚ್ಚಿದ ಬಿಟೌನ್ Read More »