October 2022

ಸೀರಿಯಲ್ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ

ಸಮಗ್ರ ನ್ಯೂಸ್: ಜನಪ್ರಿಯ ಟಿವಿ ಸೀರಿಯಲ್ ನಟಿ ವೈಶಾಲಿ ಟಕ್ಕರ್ ಇಂದೋರ್’ನ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಹಿಂದಿಯ ʼಸಸುರಾಲ್ ಸಿಮರ್ ಕಾʼ, ʼಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ಧಾರಾವಾಹಿಯಲ್ಲಿ ನಟಿಸಿ, ಬಳಿಕ ಬಿಗ್‌ ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ವೈಶಾಲಿ ಕಳೆದ ವರ್ಷದಿಂದ ಇಂದೋರ್‌ ನಲ್ಲಿರುವ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ […]

ಸೀರಿಯಲ್ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ Read More »

ನಾಳೆಯಿಂದ ಶಾಲೆಗಳು ಪುನರಾರಂಭ| ಸಂಕಲನಾತ್ಮಕ ಪರೀಕ್ಷೆಗಳು ನ. 3ಕ್ಕೆ ಮುಂದೂಡಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲು ಶಾಲೆಗಳಿಗೆ ನೀಡಲಾಗಿದ್ದ ದಸರಾ‌ ರಜೆ ಅ.16ಕ್ಕೆ ಮುಕ್ತಾಯವಾಗಿದ್ದು, ನಾಳೆ(ಅ.17)ಯಿಂದ ರಾಜ್ಯಾದ್ಯಂತ 1ರಿಂದ 10ರವರೆಗಿನ‌ ತರಗತಿಗಳು ಆರಂಭವಾಗಲಿವೆ. ಅಕ್ಟೋಬರ್ 17 ರ ನಾಳೆಯಿಂದ ರಾಜ್ಯದ 1 ರಿಂದ 10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲು ಉದ್ದೇಶಿಸಲಾಗಿದ್ದ ಸಂಕಲನಾತ್ಮಕ ಪರೀಕ್ಷೆಯನ್ನು ನವೆಂಬರ್ 3 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದ್ದು, 1 ರಿಂದ 10 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಅಕ್ಟೋಬರ್ 17 ರಿಂದ ಅಕ್ಟೋಬರ್ 27

ನಾಳೆಯಿಂದ ಶಾಲೆಗಳು ಪುನರಾರಂಭ| ಸಂಕಲನಾತ್ಮಕ ಪರೀಕ್ಷೆಗಳು ನ. 3ಕ್ಕೆ ಮುಂದೂಡಿಕೆ Read More »

ಹಾಸನ: ಯಮಸ್ವರೂಪಿಯಾದ ಹಾಲಿನ ಟ್ಯಾಂಕರ್| ಮಕ್ಕಳ ಶವದ ಮುಂದೆ ಕುಟುಂಬಸ್ಥರ ಆಕ್ರಂದನ| ರಾಂಗ್ ರೂಟ್ ಡ್ರೈವಿಂಗ್ ನಿಂದಾಯಿತೇ ಅವಘಡ

ಸಮಗ್ರ ನ್ಯೂಸ್: ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಬಳಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟ ಪ್ರಕರಣದಲ್ಲಿ ರಾಂಗ್​ ರೂಟ್​ನಲ್ಲಿ ಬಂದ ಹಾಲಿನ ಲಾರಿಯೇ ಮುಖ್ಯ ದೋಷಿ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಲಾರಿ ಚಾಲಕ ಮಿಲ್ಕ್​ ಟ್ಯಾಂಕರ್ ಅನ್ನು ರಾಂಗ್​ ರೂಟ್​ನಲ್ಲಿ ತಂದಿದ್ದರಿಂದ ಟೆಂಪೊ ಹಾಲಿನ ಲಾರಿ, ಸರ್ಕಾರಿ ಬಸ್​ಗೆ ಡಿಕ್ಕಿ ಹೊಡೆಯಿತು. ಜಿಗ್​-ಜಾಗ್ ರೀತಿಯಲ್ಲಿ ಟೆಂಪೊದ ಹಿಂದೆ ಮತ್ತು ಮುಂದೆ ಹಾನಿಯಾಯಿತು. ಹೀಗಾಗಿಯೇ ಸಾವಿನ ಸಂಖ್ಯೆ ಹೆಚ್ಚಾಯಿತು. ಬಸ್​ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಹಾಗೂ ಟೆಂಪೊ

ಹಾಸನ: ಯಮಸ್ವರೂಪಿಯಾದ ಹಾಲಿನ ಟ್ಯಾಂಕರ್| ಮಕ್ಕಳ ಶವದ ಮುಂದೆ ಕುಟುಂಬಸ್ಥರ ಆಕ್ರಂದನ| ರಾಂಗ್ ರೂಟ್ ಡ್ರೈವಿಂಗ್ ನಿಂದಾಯಿತೇ ಅವಘಡ Read More »

ಮಡಿಕೇರಿ: ಪೆಟ್ರೋಲ್ ಬಾಂಬ್ ಬಳಸಿ ಹಿಂದೂಗಳ ಹತ್ಯೆಗೆ ಸಂಚು| ಆಡಿಯೋ ವೈರಲ್ ಬೆನ್ನಲ್ಲೇ ಜೆಡಿಎಸ್ ಮುಖಂಡ ಸೇರಿ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಪೆಟ್ರೋಲ್ ಬಾಂಬ್ ಬಳಸಿ ಹಿಂದೂಗಳ ಹತ್ಯೆಗೆ ಸಂಚು ರೂಪಿಸಿರುವ ಆರೋಪದಡಿ ಜೆಡಿಎಸ್ ಮುಖಂಡ ಸೇರಿದಂತೆ ಇಬ್ಬರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಗರಸಭಾ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಮುಸ್ತಾಫ ಅಲಿಯಾಸ್ ಮುಸ್ತು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲ್ಲಾ‌ ಬೆಟ್ಟಗೇರಿ ಎಂದು ಗುರುತಿಸಲಾಗಿದೆ. ಈ ಇಬ್ಬರು ಆರೋಪಿಗಳು ನಾಲ್ಕು ತಿಂಗಳ ಹಿಂದೆ ಮೊಬೈಲ್’ನಲ್ಲಿ ಮಲೆಯಾಳ ಭಾಷೆಯಲ್ಲಿ ಮೂರು ನಿಮಿಷಗಳ ಕಾಲ ನಡೆಸಿರುವ ಸಂಭಾಷಣೆ ಇದೀಗ ವೈರಲ್ ಆಗಿದ್ದು, ಮಡಿಕೇರಿ ನಗರದ ನಿವಾಸಿ

ಮಡಿಕೇರಿ: ಪೆಟ್ರೋಲ್ ಬಾಂಬ್ ಬಳಸಿ ಹಿಂದೂಗಳ ಹತ್ಯೆಗೆ ಸಂಚು| ಆಡಿಯೋ ವೈರಲ್ ಬೆನ್ನಲ್ಲೇ ಜೆಡಿಎಸ್ ಮುಖಂಡ ಸೇರಿ ಇಬ್ಬರು ಅರೆಸ್ಟ್ Read More »

ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್

ಸಮಗ್ರ ಡಿಜಿಟಲ್ ಡೆಸ್ಕ್: ವಾಟ್ಸ್‌ ಆ್ಯಪ್‌ನಲ್ಲಿ ಹೊಸ ಅಪ್‌ಡೇಟ್‌ ಬರಲು ಸಿದ್ಧವಾಗಿದೆ. ಈ ಅಪ್‌ಡೇಟ್‌ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಎಡಿಟ್‌ ಮಾಡುವುದಕ್ಕೆ ಆಯ್ಕೆಯಿರಲಿದೆ. ಟ್ವಿಟರ್‌ ಮೂರು ದೇಶಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಿರುವ ಬೆನ್ನಲ್ಲೇ ವಾಟ್ಸ್‌ಆ್ಯಪ್‌ ಕೂಡ ಇಂತಹ ಸೌಲಭ್ಯ ನೀಡಲು ಮುಂದಾಗಿದೆ. ಯಾವುದೇ ಸಂದೇಶವನ್ನು ಕಳುಹಿಸಿ 15 ನಿಮಿಷಗಳೊಳಗೆ ಅದನ್ನು ಎಡಿಟ್‌ ಮಾಡಬಹುದು. ಎಡಿಟ್‌ ಮಾಡಿದಂತಹ ಸಂದೇಶದ ಟಿಕ್‌ ಮಾರ್ಕ್‌ ಪಕ್ಕದಲ್ಲಿ “edited’ ಎಂದು ನಮೂದಾಗುತ್ತದೆ. ಈ ಅಪ್‌ಡೇಟ್‌ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರವೇ ಮೊಬೈಲ್‌ಗ‌ಳಿಗೆ ಬರಲಿದೆ

ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ. ಮೇಷ:ಈ ರಾಶಿಯವರು ಗ್ರಹಣ ಕಾಲವನ್ನು ಬಹಳ ಎಚ್ಚರವಾಗಿ ದಾಟುವ ಅವಶ್ಯಕತೆ ಇದೆ. ಗ್ರಹಣವೆಂಬುದು ಸೂರ್ಯ ಚಂದ್ರರ ಸುತ್ತ ರಾಹು ಕೇತುಗಳು ಬಂದಾಗ ಅದು ತನ್ನ ಪ್ರಭಾವವನ್ನು ತೋರಿ, ಅಂದರೆ ಸೂರ್ಯನಿಗೆ ಬೆಳಕನ್ನು ಅಡ್ಡಗಟ್ಟಿ ಕೆಲವೊಂದು ಅಣುಗಳು ಹೊರಬಂದು ಆರೋಗ್ಯದಲ್ಲಿ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಹಾಸನ: ಭೀಕರ ಅಪಘಾತಕ್ಕೆ 5 ಮಕ್ಕಳು ಸೇರಿ 9 ಮಂದಿ ದುರ್ಮರಣ|ಧರ್ಮಸ್ಥಳ ದರ್ಶನ ಮುಗಿಸಿ‌ ಮರಳುತ್ತಿದ್ದವರು ದೇವರ ಪಾದಕ್ಕೆ!!

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಬಾಣವಾರ ಹೋಬಳಿ ಗಾಂಧಿ ನಗರ ಗ್ರಾಮದ ಬಳಿ ತಡರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, 5 ಮಕ್ಕಳು ಸೇರಿದಂತೆ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಕೆಎಸ್​ಆರ್​ಟಿ ಬಸ್, ಟಿಟಿ ವಾಹನ ಹಾಗೂ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಟೆಂಪೋ ಟ್ರಾವೆಲರ್​ನಲ್ಲಿದ್ದ 5 ಮಕ್ಕಳು ಸೇರಿದಂತೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಟಿಟಿ ವಾಹನದಲ್ಲಿ 14 ಮಂದಿ ಧರ್ಮಸ್ಥಳಕ್ಕೆ ತೆರಳಿದ್ದರು.

ಹಾಸನ: ಭೀಕರ ಅಪಘಾತಕ್ಕೆ 5 ಮಕ್ಕಳು ಸೇರಿ 9 ಮಂದಿ ದುರ್ಮರಣ|ಧರ್ಮಸ್ಥಳ ದರ್ಶನ ಮುಗಿಸಿ‌ ಮರಳುತ್ತಿದ್ದವರು ದೇವರ ಪಾದಕ್ಕೆ!! Read More »

ಮುರುಘಾ ಮಠಕ್ಕೆ ಕಾನೂನು ಪ್ರಕಾರ ಪೀಠಾಧಿಪತಿ ನೇಮಕ – ಸಿಎಂ

ಸಮಗ್ರ ನ್ಯೂಸ್: ಮುರುಘಾ ಮಠಕ್ಕೆ ಕಾನೂನು ಪ್ರಕಾರ ನೂತನ ಪೀಠಾಧಿಪತಿ ನೇಮಕವನ್ನು ಮಾಡಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಠದ ಭಕ್ತರು, ಮಾಜಿ ಶಾಸಕರ ನಿಯೋಗ ನನ್ನನ್ನು ಭೇಟಿ ಮಾಡಿ ಮಾಡಿ ಆಡಳಿತ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನನಗೆ ತಿಳಿಸಿದ್ದು, ಟ್ರಸ್ಟ್‌ ಅನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕಾನೂನು ಪ್ರಕಾರ ಏನೆಲ್ಲ ಅವಕಾಶ ಇದೆ ಅದನ್ನ ಚರ್ಚೆ ಮಾಡಿದ ಬಳಿಕ, ಎಲ್ಲವನ್ನು ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಮುರುಘಾ ಮಠಕ್ಕೆ ಕಾನೂನು ಪ್ರಕಾರ ಪೀಠಾಧಿಪತಿ ನೇಮಕ – ಸಿಎಂ Read More »

ಬೆಳ್ತಂಗಡಿ: ಮೂರು ದಿನಗಳ ಹಿಂದೆ ದುಬೈನಲ್ಲಿ ಉದ್ಯೋಗಕ್ಕೆ ಸೇರಿದ್ದ ಯುವಕ ಅಪಘಾತದಲ್ಲಿ ಸಾವು

ಸಮಗ್ರ ನ್ಯೂಸ್: ಹೊರ ದೇಶವಾದ ದುಬೈನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೆಳ್ತಂಗಡಿಯ ಯುವಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ದುರ್ದೈವಿ ಕುವೆಟ್ಟು ನಿವಾಸಿ ಪ್ಲೇವಿನ್ ಅವಿನ್ ರೊಡ್ರಿಗಸ್ ಎಂದು ತಿಳಿದುಬಂದಿದೆ. ಕುವೆಟ್ಟು ಸರ್ಕಾರಿ ಶಾಲೆಯ ಬಳಿಯ ಸಿರಿಲ್ ರೊಡ್ರಿಗಸ್ ಮತ್ತು ಮೇರಿ ಮೊಂತೆರೋ ದಂಪತಿಯ ಪುತ್ರನಾಗಿರುವ ನಿವಾಸಿ ಕೇವನ್ ಅವಿನ್ ರೊಡ್ರಿಗಸ್ ಮಡಂತ್ಯಾರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ನಂತರ ನಿಟ್ಟೆ ಕಾಲೇಜಿನಲ್ಲಿ ಎಂ.ಬಿ.ಎ ಪದವಿ ಮುಗಿಸಿ ದುಬೈಗೆ ಹೋಗಿದ್ದರು. 3 ದಿನಗಳ ಹಿಂದೆಯಷ್ಟೆ ಇವರಿಗೆ

ಬೆಳ್ತಂಗಡಿ: ಮೂರು ದಿನಗಳ ಹಿಂದೆ ದುಬೈನಲ್ಲಿ ಉದ್ಯೋಗಕ್ಕೆ ಸೇರಿದ್ದ ಯುವಕ ಅಪಘಾತದಲ್ಲಿ ಸಾವು Read More »

ಕಾರವಾರ: ಪ್ರೀತಿಯಿಂದ ಸಾಕಿದ್ದ ಕೋತಿಮರಿಗೆ ಕಣ್ಣೀರ ವಿದಾಯ

ಸಮಗ್ರ ನ್ಯೂಸ್: ಕಳೆದ ಮೂರು ವರ್ಷದಿಂದ ಸಾಕಿ ಸಲುಹಿದ್ದ ಕೋತಿ ಮರಿಯೊಂದು ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಕ್ಕೆ ಮಕ್ಕಳು, ಮನೆ ಮಂದಿ ಹಾಗೂ ಗ್ರಾಮಸ್ಥರು ಕಣ್ಣೀರ ವಿದಾಯ ಹೇಳಿದ ಹಾಗೂ ಮನೆಯ ಸದಸ್ಯನನ್ನೆ ಕಳೆದುಕೊಂಡಂತೆ ಊಟ ತಿಂಡಿ ಬಿಟ್ಟು, ಮರಳಿ ಬಾ ಎಂದು ಭಾವುಕರಾಗಿ ಕರೆದ ಮನಕಲಕುವ ಘಟನೆ ವರದಿಯಾಗಿದೆ. ದಾಂಡೇಲಿ ಪಟ್ಟಣದ ಕಂಜರಪೇಟೆ ಗಲ್ಲಿಯ ರೆಹೋನೆತ್ ಎನ್ನುವವರ ಮನೆಯಲ್ಲಿ ಕೋತಿ ಮರಿಯೂ ವಾಸವಿರುತ್ತಿತ್ತು. ಕೋತಿಗೆ ರಾಮು ಎಂದು ಹೆಸರನ್ನೂ ಕೂಡ ಇಡಲಾಗಿತ್ತು. ಕಂಜರಪೇಟೆ ಗಲ್ಲಿಯಲ್ಲಿ ಓಡಾಡಿಕೊಂಡು, ಗ್ರಾಮಸ್ಥರೊಂದಿಗೆ ಅನ್ಯೋನ್ಯತೆಯಿಂದಿದ್ದ

ಕಾರವಾರ: ಪ್ರೀತಿಯಿಂದ ಸಾಕಿದ್ದ ಕೋತಿಮರಿಗೆ ಕಣ್ಣೀರ ವಿದಾಯ Read More »