October 2022

ಡಿಪ್ಲೊಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 70 ರ ವೃದ್ಧ ರಾಜ್ಯಕ್ಕೆ ಪ್ರಥಮ!!

ಸಮಗ್ರ ನ್ಯೂಸ್: ಡಿಪ್ಲೋಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 70 ವರ್ಷದ ವೃದ್ಧರೊಬ್ಬರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಈ ಮೂಲಕ ಕಲಿಕೆಗೆ ವಯಸ್ಸಿನ ಯಾವುದೇ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಶಿರಸಿಯ ನಾರಾಯಣ ಎಸ್. ಭಟ್ ಎಂಬವರೇ ಈ ಸಾಧನೆ ಮಾಡಿದವರು. ಮೂಲತಃ ಶಿರಸಿ ತಾಲೂಕಿನ ಸುಗಾವಿ ಗ್ರಾಮದ ನಾರಾಯಣ ಭಟ್ 1973 ರಲ್ಲಿಯೇ ಮೆಕ್ಯಾನಿಕಲ್ ಡಿಪ್ಲೋಮಾ ಎಂಜಿನಿಯರಿಂಗ್ ಪದವಿ ಪಡೆದಿದ್ದು, ದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದರು. 2013ರಲ್ಲಿ ನಿವೃತ್ತಿಯಾದ ಬಳಿಕ ಶಿರಸಿಗೆ ಮರಳಿದ್ದ ಅವರಿಗೆ […]

ಡಿಪ್ಲೊಮಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ 70 ರ ವೃದ್ಧ ರಾಜ್ಯಕ್ಕೆ ಪ್ರಥಮ!! Read More »

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ನಟ, ನಿರ್ದೇಶಕ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ

ಸಮಗ್ರ ನ್ಯೂಸ್: ಅಮ್ಮ ನಾಗಮ್ಮ ಸೇರಿದಂತೆ ಹಲವು ಧಾರಾವಾಹಿಗಳ ನಿರ್ದೇಶಕ, ನಟ ಸಯ್ಯದ್ ಅಶ್ರಫ್ (42) ಸೋಮವಾರ(ಅ.31) ರ ಮುಂಜಾನೆ 3 ಗಂಟೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಯ್ಯದ್ ಕನ್ನಡ ಕಿರುತೆರೆಯಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಅಮ್ಮ ನಾಗಮ್ಮ, ನಾಗಮಣಿ, ಪಾಂಡುರಂಗ, ಚಕ್ರವಾಕ, ತಕಧಿಮಿತಾ, ಅಳುಗುಳಿಮನೆ ಸೇರಿದಂತೆ ಹಲವು ಧಾರಾವಾಹಿಗಳಿಗೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಯ್ಯದ್ ಅಶ್ರಫ್ ನಿಧನಕ್ಕೆ ಬಿ.ಸುರೇಶ, ಶೈಲಜಾ ನಾಗ್ ಹಾಗೂ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ. ಶಿವಕುಮಾರ್ ಸೇರಿದಂತೆ ಹಲವರು ಸಂತಾಪ

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ನಟ, ನಿರ್ದೇಶಕ ಸಯ್ಯದ್ ಅಶ್ರಫ್ ಹೃದಯಾಘಾತದಿಂದ ನಿಧನ Read More »

ಗುಜರಾತ್ ತೂಗು ಸೇತುವೆ ದುರಂತ| 150 ರ ಸನಿಹಕ್ಕೆ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಮಚು ನದಿಗೆ ಬ್ರಿಟಿಷರ ಕಾಲದ ಸೇತುವೆ ದುರಸ್ತಿಗೊಂಡ ವಾರಗಳಲ್ಲಿ ಕುಸಿದಿದ್ದು, ಮೃತರ ಸಂಖ್ಯೆ 137ಕ್ಕೆ ಏರಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಛತ್ ಪೂಜೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡಲು ಜನರು ಸಾಮೂಹಿಕವಾಗಿ ಸೇರಿದ್ದರು. ಅಪಘಾತದ ಸಮಯದಲ್ಲಿ ಸುಮಾರು 500 ಜನರು ಸೇತುವೆಯ ಮೇಲೆ ಇದ್ದರು ಎಂದು ವರದಿಯಾಗಿದೆ. ಸೋಮವಾರ ಬೆಳಗಿನ ಜಾವದವರೆಗೆ 137 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತಪಟ್ಟವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು

ಗುಜರಾತ್ ತೂಗು ಸೇತುವೆ ದುರಂತ| 150 ರ ಸನಿಹಕ್ಕೆ ಸಾವಿನ ಸಂಖ್ಯೆ Read More »

ಸುಳ್ಯ:ಹರಕೆ ಹೇಳಿ ದಿನದೊಳಗೆ ನಾಪತ್ತೆಯಾದ ಬಾಲಕಿ ಪತ್ತೆ| ಮತ್ತೊಂದು ಪವಾಡಕ್ಕೆ ಸಾಕ್ಷಿಯಾದ ಕೊರಗಜ್ಜ

ಸಮಗ್ರ ನ್ಯೂಸ್: ನಾಪತ್ತೆಯಾದ ಬಾಲಕಿಯ ಪತ್ತೆಗಾಗಿ ಕೊರಗಜ್ಜನಿಗೆ ಹರಕೆ ಹೇಳಿ ದಿನ ಕಳೆಯುವುದರ ಒಳಗೆ ಬಾಲಕಿ ಪತ್ತೆಯಾದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಕೊರಗಜ್ಜ‌ ಸಾನಿಧ್ಯದಲ್ಲಿ ನಡೆದಿದೆ. ಅ.17ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಜಗನ್ನಾಥ್ ಹಾಗೂ ರೇಖಾ ದಂಪತಿಯ ಪುತ್ರಿ ಭಾರ್ಗವಿ ನಾಪತ್ತೆಯಾಗಿದ್ದಳು. ಈ ವಿಚಾರ ಅವರ ಸಂಬಂಧಿಕರಾದ ಕುಕ್ಕೆ ಸುಬ್ರಹ್ಮಣ್ಯದ ನಿತಿನ್ ಭಟ್ ರವರಿಗೆ ತಿಳಿದು ಅವರು‌ ಅ.19ರಂದು ಉಜಿರಡ್ಕದ ಕೊರಗಜ್ಜನ ಸಾನಿಧ್ಯದಲ್ಲಿ ಪ್ರಾರ್ಥಿಸಿದ್ದರು. ಈ ವೇಳೆ ಅಲ್ಲಿನ

ಸುಳ್ಯ:ಹರಕೆ ಹೇಳಿ ದಿನದೊಳಗೆ ನಾಪತ್ತೆಯಾದ ಬಾಲಕಿ ಪತ್ತೆ| ಮತ್ತೊಂದು ಪವಾಡಕ್ಕೆ ಸಾಕ್ಷಿಯಾದ ಕೊರಗಜ್ಜ Read More »

ನಿವೇಶನ ಖರೀದಿಗೆ ಸಾಲ ಪಡೆದಿದ್ದು ತಪ್ಪಾ? – ಸಿದ್ದರಾಮಯ್ಯ

ಸಮಗ್ರ ನ್ಯೂಸ್: ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ, ಸಾಲ ಪಡೆಯುವುದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ. ನಿವೇಶನ ಖರೀದಿಗಾಗಿ ವಿವೇಕ್ ಎನ್ನುವ 40 ವರ್ಷಗಳ ಗೆಳೆಯನಿಂದ ರೂ.1.5 ಕೋಟಿ ಸಾಲ ಪಡೆದಿದ್ದು ನಿಜವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಆದರೆ, ಸಾಲ ಪಡೆಯುವುದು ಅಪರಾಧನಾ? ಎಂದು ಪ್ರಶ್ನಿಸಿದ್ದಾರೆ. ಈ ಸಂಬಂಧ ಬಿಜೆಪಿ ಆರೋಪ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ವಿವೇಕ್

ನಿವೇಶನ ಖರೀದಿಗೆ ಸಾಲ ಪಡೆದಿದ್ದು ತಪ್ಪಾ? – ಸಿದ್ದರಾಮಯ್ಯ Read More »

ಗ್ರಾಹಕರಿಗೆ ಬಿಗ್ ಶಾಕ್| ನಂದಿನಿ ಹಾಲಿನ ದರ ಶೀಘ್ರವೇ ₹3 ಹೆಚ್ಚಳ

ಸಮಗ್ರ ನ್ಯೂಸ್: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ನಂದಿನಿ ಹಾಲಿನ ದರವನ್ನು ಶೀಘ್ರವೇ ಲೀಟರ್ ಗೆ 3 ರೂ. ಹೆಚ್ಚಳ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್ ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶಿಥಲೀಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ನಂದಿನಿ ಹಾಲಿನ

ಗ್ರಾಹಕರಿಗೆ ಬಿಗ್ ಶಾಕ್| ನಂದಿನಿ ಹಾಲಿನ ದರ ಶೀಘ್ರವೇ ₹3 ಹೆಚ್ಚಳ Read More »

ನಾಟಕ ಅಭ್ಯಾಸದ ವೇಳೆ ನೇಣಿಗೆ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ.1ರಂದು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಲ್ಲಿ ಅಭ್ಯಾಸ ಮಾಡುವ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು 12 ವರ್ಷದ ಸಂಜಯ ಗೌಡ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ನಗರದ ಕೆಳಗೋಟೆ ನಿವಾಸಿಗಳಾದ ನಾಗರಾಜ್ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರ ಸಂಜಯ್ ಗೌಡ (12) ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ನವಂಬರ್ 1 ರಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಪಾತ್ರ ನಿರ್ವಹಿಸುವ

ನಾಟಕ ಅಭ್ಯಾಸದ ವೇಳೆ ನೇಣಿಗೆ ಸಿಲುಕಿ ಬಾಲಕ ಸಾವು Read More »

ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಗಾಲಿ‌ ಜನಾರ್ದನ ರೆಡ್ಡಿ| ಬಿಜೆಪಿ ಬಗ್ಗೆ ಅಷ್ಟೊಂದು ಅಸಮಾಧಾನವೇಕೆ?

ಸಮಗ್ರ ನ್ಯೂಸ್: ಬಳ್ಳಾರಿಯ ಗಣಿಧಣಿ ಎಂದೇ ಪ್ರಖ್ಯಾತರಾಗಿರುವ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ನನ್ನ ಮುಂದಿನ ರಾಜಕೀಯ ಜೀವನದ ಬಗ್ಗೆ ನನಗೆ ಗೊತ್ತಿಲ್ಲ, ಕಾಂಗ್ರೆಸ್ ಕೂಡ ನನಗೆ ಕಷ್ಟ ಕೊಟ್ಟಿದೆ. ಆದರೆ ಬಿಜೆಪಿಯವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಎಂದು ಗಾಲಿ ಜನಾರ್ಧನ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ. ನಾನು ನವೆಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವ ಹಾಗೆ ಇಲ್ಲ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನವೆಂಬರ್ 6ರ ಬಳಿಕ

ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಗಾಲಿ‌ ಜನಾರ್ದನ ರೆಡ್ಡಿ| ಬಿಜೆಪಿ ಬಗ್ಗೆ ಅಷ್ಟೊಂದು ಅಸಮಾಧಾನವೇಕೆ? Read More »

ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!!

ಸಮಗ್ರ ನ್ಯೂಸ್: ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು, ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ಸುಮಾರು 400ರಷ್ಟು ಜನರು ನದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ. ಸ್ಥಳೀಯ ಮಾಹಿತಿಗಳ‌ ಪ್ರಕಾರ, ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿತ್ತು. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತರ ಅದನ್ನ ಮತ್ತೆ ಸೇತುವೆಯನ್ನು ಜನರ ಉಪಯೋಗಕ್ಕೆ ತೆರೆಯಲಾಗಿತ್ತು. ಸದ್ಯ

ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!! Read More »

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 67 ಸಾಧಕರಿಗೆ ಗೌರವ

ಸಮಗ್ರ ನ್ಯೂಸ್: ಅರವತ್ತೇಳನೇ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಕ್ರೀಡಾ ಪಟುಗಳು ಸಮಾಜ ಸೇವಕರು ಸೇರಿದಂತೆ 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರ್ಕಾರ ಗುರುತಿಸಿದೆ. ಪದ್ಮ ಪ್ರಶಸ್ತಿ ಮಾದರಿಯಲ್ಲಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲೂ ಹೊಸತನವನ್ನು ಮೆರೆದಿದ್ದು, ಸಾಮಾನ್ಯರಾಗಿದ್ದುಕೊಂಡು ಅಸಾಮಾನ್ಯ ಕೆಲಸ ಮಾಡಿದವರು, ಸಮಾಜದ ನಾನಾ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ| 67 ಸಾಧಕರಿಗೆ ಗೌರವ Read More »