October 2022

ಪರೇಶ್ ಮೇಸ್ತಾ ಕೊಲೆ ಪ್ರಕರಣ| ಮರು ತನಿಖೆಗೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ

ಸಮಗ್ರ‌ ನ್ಯೂಸ್: ಹೊನ್ನಾವರದ ಪರೇಶ್ ಮೇಸ್ತಾ ಕೊಲೆಯಾಗಿಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ವರದಿ ಬೆನ್ನಲ್ಲೇ ಇದೀಗ ಪರೇಶ್ ಮೆಸ್ತಾ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ರಾಜ್ಯ ಸರ್ಕಾರಕ್ಕೆ ಒತ್ತಡ ಹೆಚ್ಚಾಗಿದೆ. ಸಿಬಿಐ ವರದಿಗೆ ಪರೇಶ್ ಮೆಸ್ತಾ ತಂದೆ ಕಮಲಾಕರ ಮೇಸ್ತಾ ಕೂಡಾ ಅಸಮಾಧಾನ ವ್ಯಕ್ತಪಡಿಸಿ, ಕೇಸ್‍ನ ಮರು ತನಿಖೆಗೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಬಿಐ ವರದಿ ಬಂದು ಈಗಾಗಲೇ ಎರಡು ವಾರಕ್ಕೂ ಹೆಚ್ಚು ಕಾಲವಾಗಿದ್ದು, ಮರು ತನಿಖೆ ಆದೇಶ ಮಾಡಬೇಕೆಂದು ಒತ್ತಡ ಜೋರಾಗಿದೆ. ಹೊನ್ನಾವರದಲ್ಲಿ […]

ಪರೇಶ್ ಮೇಸ್ತಾ ಕೊಲೆ ಪ್ರಕರಣ| ಮರು ತನಿಖೆಗೆ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ Read More »

ಮಡಿಕೇರಿ: ಇಂದು ತಲಕಾವೇರಿಯಲ್ಲಿ ”ಕಾವೇರಿ ತೀರ್ಥೋಧ್ಬವ”| ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ ಕಾವೇರಿಮಾತೆ

ಸಮಗ್ರ ನ್ಯೂಸ್: ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್, 17 ರ ಇಂದು ರಾತ್ರಿ 7 ಗಂಟೆ 21 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಲಿದೆ. ಅ.17ರ ರಾತ್ರಿ(ಸೋಮವಾರ) 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವಕ್ಕೆ

ಮಡಿಕೇರಿ: ಇಂದು ತಲಕಾವೇರಿಯಲ್ಲಿ ”ಕಾವೇರಿ ತೀರ್ಥೋಧ್ಬವ”| ತೀರ್ಥ ಸ್ವರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ ಕಾವೇರಿಮಾತೆ Read More »

ಇಂದು(ಅ.17) ಕಿಸಾನ್ ಸಮ್ಮಾನ್ 12ನೇ ಕಂತು ಬಿಡುಗಡೆ| ‘ಒಂದು ದೇಶ – ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ

ಸಮಗ್ರ ನ್ಯೂಸ್: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ಇಂದು ವರ್ಗಾವಣೆ ಮಾಡಲಾಗುವುದು. 16,000 ಕೋಟಿ ರೂ.ಗಳನ್ನು ಸುಮಾರು ಎರಡು ಕೋಟಿ ರೈತರ ಖಾತೆಗೆ ಜಮಾ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆಯಲಿರುವ ಕೃಷಿ ಸಮ್ಮೇಳನ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಒಂದು ದೇಶ -ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ ನೀಡಲಿದ್ದು, ಎಲ್ಲಾ ರಸಗೊಬ್ಬರ ಕಂಪನಿಗಳು

ಇಂದು(ಅ.17) ಕಿಸಾನ್ ಸಮ್ಮಾನ್ 12ನೇ ಕಂತು ಬಿಡುಗಡೆ| ‘ಒಂದು ದೇಶ – ಒಂದು ರಸಗೊಬ್ಬರ’ ಯೋಜನೆಗೆ ಚಾಲನೆ Read More »

ಬಿಗ್ ಬಾಸ್ ಮನೆಯಲ್ಲಿ ಮೈಮರೆತು ರೋಮ್ಯಾನ್ಸ್ ನಲ್ಲಿ ಮುಳುಗಿದ ಸಾನ್ಯಾ-ರೂಪೇಶ್| ಈ ಮನೆ ಅದಕ್ಕಲ್ಲ ಎಂದ ಸುದೀಪ್

ಸಮಗ್ರ ನ್ಯೂಸ್: ಬಿಗ್ ಬಾಸ್ ಕನ್ನಡ ಸೀಸನ್​ 9’ರಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಸಖತ್ ಕ್ಲೋಸ್ ಆಗಿದ್ದಾರೆ. ಇಬ್ಬರೂ ದೊಡ್ಮನೆಯಲ್ಲಿ ಸುತ್ತಾಡಿಕೊಂಡು ಹಾಯಾಗಿದ್ದಾರೆ. ರಾತ್ರಿ ಲೈಟ್ ಆಫ್​ ಆದ ನಂತರವೂ ಇವರು ಹಗ್ ಮಾಡಿಕೊಂಡು ಮಾತನಾಡಿಕೊಂಡಿರುತ್ತಾರೆ. ಈಗ ಈ ಜೋಡಿಯ ರೊಮ್ಯಾನ್ಸ್ ಮಿತಿ ಮೀರಿದೆ. ಇದಕ್ಕೆ ಕಿಚ್ಚ ಸುದೀಪ್ ಅವರು ಗಟ್ಟಿಯಾಗೇ ಕ್ಲಾಸ್​ ತೆಗೆದುಕೊಂಡಿದ್ದಾರೆ. ಸುದೀಪ್ ಆಡಿದ ಮಾತಿಗೆ ಗಳಗಳನೆ ಅತ್ತಿದ್ದಾರೆ ರೂಪೇಶ್. ಇತ್ತೀಚೆಗೆ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್ ಹಾಗೂ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಮನೆಯಲ್ಲಿ ಮೈಮರೆತು ರೋಮ್ಯಾನ್ಸ್ ನಲ್ಲಿ ಮುಳುಗಿದ ಸಾನ್ಯಾ-ರೂಪೇಶ್| ಈ ಮನೆ ಅದಕ್ಕಲ್ಲ ಎಂದ ಸುದೀಪ್ Read More »

ಕುಕ್ಕೆ ಸುಬ್ರಹ್ಮಣ್ಯ: ಸೂರ್ಯಗ್ರಹಣ ಹಿನ್ನೆಲೆ| ಅ.25ರಂದು ದೇವಸ್ಥಾನದಲ್ಲಿ ಸೇವಾ ಕಾರ್ಯಗಳಿಗೆ ಬ್ರೇಕ್

ಸಮಗ್ರ ನ್ಯೂಸ್: ಸೂರ್ಯಗ್ರಹಣ ಸಂಭವಿಸುವ ಹಿನ್ನಲೆಯಲ್ಲಿ ಅ.25ರಂದು ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಲ್ಲಾ ಸೇವೆಗಳನ್ನು ರದ್ದುಪಡಿಸಲಾಗಿದೆ. ದೇವಾಲಯದಲ್ಲಿ ಯಾವುದೇ ಸೇವೆಗಳು ಇರುವುದಿಲ್ಲ. ಭೋಜನ ಪ್ರಸಾದ ವ್ಯವಸ್ಥೆಯು ಕೂಡ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅ.26ರ ಬುಧವಾರದಂದು ಶ್ರೀ ದೇವರ ನಿತ್ಯದ ಪೂಜಾ ಸಮಯದಲ್ಲಿ ವ್ಯತ್ಯಯವಾಗುವುದರಿಂದ ಭಕ್ತಾದಿಗಳಿಗೆ ಬೆಳಿಗ್ಗೆ 9 ರಿಂದ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ: ಸೂರ್ಯಗ್ರಹಣ ಹಿನ್ನೆಲೆ| ಅ.25ರಂದು ದೇವಸ್ಥಾನದಲ್ಲಿ ಸೇವಾ ಕಾರ್ಯಗಳಿಗೆ ಬ್ರೇಕ್ Read More »

ಪುತ್ತೂರು: ರೈಲಿನಡಿಗೆ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ರೈಲಿನಡಿ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಅ.16 ರಂದು ಸಂಜೆ ಮಿತ್ತೂರಿನಲ್ಲಿ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಕಬಕ-ಪುತ್ತೂರು ರೈಲ್ವೆ ನಿಲ್ದಾಣಕ್ಕೆ ತರಲಾಗಿದ್ದು, ರೈಲಿನಡಿ ಬಿದ್ದಿದ್ದರಿಂದ ಮೃತದೇಹವು ಛಿದ್ರಗೊಂಡಿದೆ. ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ರೈಲಿನ ಪೈಲೆಟ್ ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ಅದೇ ರೈಲಿನಲ್ಲಿ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಕರೆ ತಂದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಘಟನೆ ನಡೆದ ಸಂದರ್ಭ ರೈಲ್ವೇ

ಪುತ್ತೂರು: ರೈಲಿನಡಿಗೆ ಬಿದ್ದು ಯುವಕ ಸಾವು Read More »

ಪ್ರೋ ಕಬಡ್ಡಿ‌ ಕೋರ್ಟ್ ನಲ್ಲಿ ‘ಕಾಂತಾರ’ ಟೀಂ| ರಾಷ್ಟ್ರಗೀತೆಗೆ ಧ್ವನಿಯಾದ ರಿಷಬ್ ಶೆಟ್ಟಿ

ಸಮಗ್ರ ನ್ಯೂಸ್: ಕನ್ನಡದಲ್ಲಿ ಬಿಡುಗಡೆಗೊಂಡ ಬಳಿಕ, ದೇಶದ ಇತರ ಭಾಷೆಗಳಿಗೆ ಡಬ್‌ ಆಗಿ ಅಬ್ಬರಿಸುತ್ತಿರುವ “ಕಾಂತಾರ” ಚಿತ್ರ ಬಹುದೊಡ್ಡ ಯಶಸ್ಸು ಸಂಪಾದಿಸಿದೆ. ಅದರ ನಡುವೆ ಭಾನುವಾರ ಚಿತ್ರದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದರು. ದೇಶೀಯ ಮಣ್ಣಿನ ಸೊಗಡಿನ ಇನ್ನೊಂದು ಕ್ರೀಡೆ ಕಬಡ್ಡಿಯ ಭಾನುವಾರದ ಪಂದ್ಯಗಳಿಗೆ ಚಾಲನೆ ನೀಡಲು ಬಂದಿದ್ದರು. ಕಂಬಳ ಕ್ರೀಡೆ ಹಾಗೂ ಕರಾವಳಿ ಸಂಸ್ಕೃತಿಯನ್ನು ದೇಶ ಮಟ್ಟದಲ್ಲಿ ಪಸರಿಸಲು ಕಾಂತಾರ ಒಂದು ರೀತಿಯಲ್ಲಿ ಕಾರಣವಾಗಿದ್ದರೆ, ಸ್ಥಳೀಯವಾಗಿಯೇ ಉಳಿದುಕೊಂಡಿದ್ದ ಕಬಡ್ಡಿಗೆ ಬೂಸ್ಟ್‌ನೀಡಿದ್ದು

ಪ್ರೋ ಕಬಡ್ಡಿ‌ ಕೋರ್ಟ್ ನಲ್ಲಿ ‘ಕಾಂತಾರ’ ಟೀಂ| ರಾಷ್ಟ್ರಗೀತೆಗೆ ಧ್ವನಿಯಾದ ರಿಷಬ್ ಶೆಟ್ಟಿ Read More »

“ನಾನೇನು ಉಗ್ರಗಾಮಿಯಲ್ಲ, ಸಾಮಾಜಿಕ ಕಾರ್ಯಕರ್ತೆಯಷ್ಟೇ” | ಪೊಲೀಸರ ಕಾರ್ಯವೈಖರಿಗೆ ಪ್ರತಿಭಾ ಕುಳಾಯಿ ಗರಂ

ಸಮಗ್ರ ನ್ಯೂಸ್: ಸುರತ್ಕಲ್ ಟೋಲ್ ಗೇಟ್ ಹೋರಾಟಗಾರರ ಮನೆಗೆ ಮಧ್ಯರಾತ್ರಿ ಮನೆಗೆ ನುಗ್ಗಿ ನೊಟೀಸ್ ನೀಡಿದ ಪೊಲೀಸ್ ಇಲಾಖೆ ವಿರುದ್ದ ಇದೀಗ ಆಕ್ರೋಶ ವ್ಯಕ್ತವಾಗಿದ್ದು, ಮಾಜಿ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ತಟ್ಟಬಹುದೇ? ಇದೆಂತಾ ಪ್ರಜಾಪ್ರಭುತ್ವ? ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆ ವಿರುದ್ದ ಕಿಡಿಕಾರಿರುವ ಅವರು ಅಕ್ಟೋಬರ್ 18ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ

“ನಾನೇನು ಉಗ್ರಗಾಮಿಯಲ್ಲ, ಸಾಮಾಜಿಕ ಕಾರ್ಯಕರ್ತೆಯಷ್ಟೇ” | ಪೊಲೀಸರ ಕಾರ್ಯವೈಖರಿಗೆ ಪ್ರತಿಭಾ ಕುಳಾಯಿ ಗರಂ Read More »

ಈ ಬಾರಿ ಹೊಸ ಮುಖಗಳಿಗೆ ಟಿಕೆಟ್- ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಕ್ಷೇತ್ರದ ಜನರೊಂದಿಗೆ ಇರುವ ಸಂಪರ್ಕ, ಪಕ್ಷದ ನಿಷ್ಠೆ, ಪಾದಯಾತ್ರೆಯಲ್ಲಿ ಅವರು ಕೈಗೊಂಡ ಸೇವೆ ಸೇರಿದಂತೆ ಎಲ್ಲವನ್ನೂ ಪರಿಗಣಿಸಿ ಟಿಕೇಟ್ ನೀಡಲಾಗುವುದು, ಈ ಬಾರಿ ಹೊಸ ಮುಖಗಳಿಗೂ ಟಿಕೇಟ್ ನಿಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಬಳ್ಳಾರಿಯ ಮೋಕಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರ್ವೆ ಮಾಡಿದ ವರದಿಗಳು ಕೈ ಸೇರಿದ್ದು, 150 ಜನರಿಗೆ ಟಿಕೇಟ್ ಮೊದಲೇ ಘೋಷಣೆ ಮಾಡುವ ಹಂತ ಪೂರ್ಣಗೊಂಡಿದೆ. ಯುವ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ

ಈ ಬಾರಿ ಹೊಸ ಮುಖಗಳಿಗೆ ಟಿಕೆಟ್- ಡಿ.ಕೆ ಶಿವಕುಮಾರ್ Read More »

ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ| ಮತ್ತೆ ಬೆಂಗಳೂರಿಗೆ ಮುಳುಗಡೆ ಭೀತಿ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಸಂಜೆ ( Oct 16) ಧಾರಾಕಾರ ಮಳೆಯಾಗಿದ್ದು, ಗುಡುಗು-ಸಿಡಿಲಿನ ಅಬ್ಬರಕ್ಕೆ ಸಿಲಿಕಾನ್ ಸಿಟಿ ಮಂದಿ ಬೆಚ್ಚಿ ಬಿದ್ದಿದ್ದಾರೆ. ನಗರದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಹರಸಾಹಸ ಪಡುತ್ತಿದ್ದರು. ಬೆಳಗ್ಗೆಯಿಂದಲೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಇಂದು ಸಂಜೆ ವೇಳೆಗೆ ಗುಡುಗು ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆ ಸುರಿಯುತ್ತಿದೆ. ಮತ್ತೆ ಮಂದುವರಿಯಲಿದೆ ಮಳೆ:-ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆಎಂದು ಹವಾಮಾನ ಇಲಾಖೆ

ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ| ಮತ್ತೆ ಬೆಂಗಳೂರಿಗೆ ಮುಳುಗಡೆ ಭೀತಿ Read More »