October 2022

ಪರೇಶ್ ಮೇಸ್ತಾ ಶೆಟ್ಟಿಹಳ್ಳಿ‌ ಕೆರೆಗೆ ಜಾರಿ ಬಿದ್ದು ಸತ್ತಿದ್ದು!| ಸಿಬಿಐ ತನಿಖಾ ವರದಿಯಲ್ಲಿ ಬಹಿರಂಗ

ಸಮಗ್ರ ನ್ಯೂಸ್: ಪರೇಶ್ ಮೇಸ್ತ ಸಾವಿಗೆ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಪರೇಶ್​​ ಮೇಸ್ತ ಗಲಭೆ ವೇಳೆ ಓಡುತ್ತಿದ್ದಾಗ ಶೆಟ್ಟಿಕೆರೆಯಲ್ಲಿ ಜಾರಿ ಬಿದ್ದು, ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಸಿಬಿಐ ತನಿಖಾ ವರದಿಯಲ್ಲಿ ಬಹಿರಂಗಗೊಂಡಿದೆ. ಸಿಬಿಐ ಅಧಿಕಾರಿಗಳು ಇಂದು ಹೊನ್ನಾವರದ ನ್ಯಾಯಾಲಯಕ್ಕೆ ಪ್ರಕರಣದ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ ಮೇಸ್ತನನ್ನು ಹತ್ಯೆ ಮಾಡಲಾಗಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆರೋಪಿಗಳನ್ನು ದೋಷ ಮುಕ್ತಗೊಳಿಸಬಹುದು ತಿಳಿಸಿದೆ. ಕಳೆದ ಐದು ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಆತನ ಸಾವಿಗೆ […]

ಪರೇಶ್ ಮೇಸ್ತಾ ಶೆಟ್ಟಿಹಳ್ಳಿ‌ ಕೆರೆಗೆ ಜಾರಿ ಬಿದ್ದು ಸತ್ತಿದ್ದು!| ಸಿಬಿಐ ತನಿಖಾ ವರದಿಯಲ್ಲಿ ಬಹಿರಂಗ Read More »

ಪ್ರಧಾನಿ ಮೋದಿ ಹತ್ಯೆಗೆ ಸಂಚು; ಗುಪ್ತಚರ ಇಲಾಖೆ ಮಾಹಿತಿ

ಸಮಗ್ರ ನ್ಯೂಸ್: ದೀಪಾವಳಿಗೆ ಸ್ವಲ್ಪ ಮೊದಲು ಪ್ರಧಾನಿ ನರೇಂದ್ರ ಮೋದಿ ಭದ್ರತೆಯ ಬಗ್ಗೆ ಗುಪ್ತಚರ ಸಂಸ್ಥೆಗಳು ದೊಡ್ಡ ಎಚ್ಚರಿಕೆಯನ್ನ ನೀಡಿವೆ. ಗುಪ್ತಚರ ಸಂಸ್ಥೆಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಗುರಿಯಾಗಿಸಿಕೊಂಡಿದ್ದು, ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಲು ಯೋಜಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳ ದಾಖಲೆಗಳು ಬಹಿರಂಗಪಡಿಸಿವೆ. ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಪ್ರಧಾನಿ ಮೋದಿ ವಿರುದ್ಧ ದಾಳಿ ನಡೆಸಲು ಲಷ್ಕರ್ -ಎ- ತೊಯ್ಬಾಗೆ ಈ ಕೆಲಸ ವಹಿಸಿದೆ ಎಂದು ಹೇಳಲಾಗುತ್ತಿದೆ. ಈ

ಪ್ರಧಾನಿ ಮೋದಿ ಹತ್ಯೆಗೆ ಸಂಚು; ಗುಪ್ತಚರ ಇಲಾಖೆ ಮಾಹಿತಿ Read More »

ಮಡಿಕೇರಿ: ಇಬ್ಬರು ಕಡವೆ ಬೇಟೆಗಾರರ ಬಂಧನ| ಮಾಂಸ, ಆಯುಧಗಳು ವಶಕ್ಕೆ

ಸಮಗ್ರ ನ್ಯೂಸ್ : ಮಡಿಕೇರಿ ಉಪ ಅರಣ್ಯ ವಿಭಾಗದ ಸಂಪಾಜೆ ದಬ್ಬಡ್ಕ ವಲಯದ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುವ ಸಂದರ್ಭದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಾಧಿಕಾರಿಗಳಾದ ಎ.ಟಿ.ಪೂವಯ್ಯ ಹಾಗೂ ಸಂಪಾಜೆ ವಲಯ ಅರಣ್ಯ ಅಧಿಕಾರಿ ಮಧುಸೂದನ್ ಎಂ.ಕೆ ರವರ ನೇತೃತ್ವದಲ್ಲಿ ಶಾಖೆಯ ಉಪ ಅರಣ್ಯ ಅಧಿಕಾರಿಗಳಾದ ನಿಸಾರ್ ಅಹಮದ್, ಅರಣ್ಯ ರಕ್ಷಕರಾದ ಕಾರ್ತಿಕ್, ಅರಣ್ಯ ವೀಕ್ಷಕರಾದ ಕೂಸಪ್ಪ ಮತ್ತು ಮನೋಜ್ ಕುಮಾರ್ ಅವರ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು

ಮಡಿಕೇರಿ: ಇಬ್ಬರು ಕಡವೆ ಬೇಟೆಗಾರರ ಬಂಧನ| ಮಾಂಸ, ಆಯುಧಗಳು ವಶಕ್ಕೆ Read More »

ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ| ಆರು ಮಂದಿ ಸಾವು

ಸಮಗ್ರ ನ್ಯೂಸ್: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನಗೊಂಡು 6 ಜನರು ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ ಕೇದಾರನಾಥದಲ್ಲಿ ಸಂಭವಿಸಿದೆ. ಕೇದಾರನಾಥದಿಂದ 2 ಕೀ.ಮೀ. ದೂರದಲ್ಲಿರುವ ಗರುಡಚಟ್ಟಿ ಬಳಿ ಹೆಲಿಕಾಪ್ಟರ್ ಪತನಗೊಂಡು ಈ ದುರಂತ ಸಂಭವಿಸಿದೆ. ಹೆಲಿಕಾಪ್ಟರ್ ನಲ್ಲಿದ್ದ 8 ಜನರ ಪೈಕಿ 6 ಜನರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಎಸ್ ಡಿ ಆರ್ ಎಫ್, ಪೊಲೀಸರು ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಹವಾಮಾನ ವೈಪರಿತ್ಯದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ| ಆರು ಮಂದಿ ಸಾವು Read More »

ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣ| ಆಚರಣೆ, ಫಲಾಫಲ, ಪರಿಣಾಮ ಏನು ಗೊತ್ತಾ?

ಸಮಗ್ರ ನ್ಯೂಸ್: ಈ ವರ್ಷದ ಸೂರ್ಯ ಗ್ರಹಣವು ದೀಪಾವಳಿ ಅಮವಾಸ್ಯೆ ದಿನ(ಅಕ್ಟೋಬರ್ 25) ರಂದು ಸಂಭವಿಸಲಿದೆ. 27 ವರ್ಷಗಳ ನಂತರ, ದೀಪಾವಳಿಯಂದು ಸೂರ್ಯ ಗ್ರಹಣ ಸಂಭವಿಸುತ್ತಿರುವುದು ವಿಶೇಷ. ದೀಪಾವಳಿಯನ್ನು ಕಾರ್ತಿಕ ಅಮಾವಾಸ್ಯೆಯಂದು ಆಚರಿಸಲಾಗುತ್ತೆ, ಈ ಬಾರಿ ಕಾರ್ತಿಕ ಅಮಾವಾಸ್ಯೆಯು ಅಕ್ಟೋಬರ್ 24 ಮತ್ತು 25 ರಂದು ಎರಡು ದಿನಗಳಲ್ಲಿದೆ. ಕಾರ್ತಿಕ ದೀಪಾವಳಿ ಅಮಾವಾಸ್ಯೆ ತಿಥಿ ಅಕ್ಟೋಬರ್ 24 ರಂದು ಸಂಜೆ 05:27 ಕ್ಕೆ ಪ್ರಾರಂಭವಾಗಲಿದ್ದು, ಅಕ್ಟೋಬರ್ 25 ರಂದು ಸಂಜೆ 04:18 ರವರೆಗೆ ಇರಲಿದೆ. ಸೂರ್ಯಗ್ರಹಣದ ಸೂತಕದ

ದೀಪಾವಳಿ ಅಮಾವಾಸ್ಯೆಯಂದು ಸೂರ್ಯಗ್ರಹಣ| ಆಚರಣೆ, ಫಲಾಫಲ, ಪರಿಣಾಮ ಏನು ಗೊತ್ತಾ? Read More »

ಮಂಗಳೂರು:ಸುರತ್ಕಲ್ ಟೋಲ್ ಗೇಟ್ ತೆರವಿಗೆ ಉಗ್ರ ಪ್ರತಿಭಟನೆ; ಹಲವರು ಅರೆಸ್ಟ್| ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ

ಸಮಗ್ರ ನ್ಯೂಸ್: ಮಂಗಳೂರು ಬಳಿಯ ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಟೋಲ್ ಗೇಟ್ ಕಿತ್ತುಹಾಕಲು ಸಾರ್ವಜನಿಕರು ಕರೆ ನೀಡಿರುವ ಹಿನ್ನೆಲೆಯಲ್ಲಿ ಟೋಲ್ ಗೇಟ್ ಗೆ ನುಗ್ಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯತೆಗೆ ಹೆದ್ದಾರಿ 66ರಲ್ಲಿರುವ ಈ ಟೋಲ್‌ ಅನಧಿಕೃತವಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಹೋರಾಟಗಾರರು ಒತ್ತಾಯಿಸುತ್ತಲೇ ಬಂದಿದ್ದು, ಸರ್ಕಾರ ತೆಗೆದುಕೊಂಡಿದ್ದ ಅವಧಿ ಮುಗಿದಿದ್ದರಿಂದ ಇದೇ 18ರಂದು ತಾವೇ ಟೋಲ್‌ಗೇಟ್‌ ತೆರವುಗೊಳಿಸುವುದಾಗಿ ಹೋರಾಟಗಾರರು ಬೆದರಿಕೆ ಹಾಕಿದ್ದರು. ಈ ನಡುವೆ, ಪೊಲೀಸರು ಹೋರಾಟಗಾರರಿಗೆ ರಾತ್ರಿ ನೋಟಿಸ್‌ ಜಾರಿ

ಮಂಗಳೂರು:ಸುರತ್ಕಲ್ ಟೋಲ್ ಗೇಟ್ ತೆರವಿಗೆ ಉಗ್ರ ಪ್ರತಿಭಟನೆ; ಹಲವರು ಅರೆಸ್ಟ್| ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ Read More »

ಆಪ್ತೆ ಶಶಿಕಲಾ ಅವರೇ ಜಯಲಲಿತಾ ಸಾವಿಗೆ ಕಾರಣ| ವರದಿ ಸಲ್ಲಿಸಿದ ತನಿಖಾ ಆಯೋಗ

ಸಮಗ್ರ ನ್ಯೂಸ್: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆಗೆ ಆಯೋಗ ಒಂದನ್ನು ತಮಿಳುನಾಡು ಸರ್ಕಾರ ರಚನೆ ಮಾಡಿತ್ತು. ಈಗ ಆಯೋಗ ವರದಿ ಸಿದ್ಧ ಮಾಡಿದ್ದು, ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಅದರಲ್ಲಿ ಜಯಲಲಿತಾ ಆಪ್ತೆ ಶಶಿಕಲಾ ಅವರೇ ಜಯಲಲಿತಾ ಸಾವಿಗೆ ಕಾರಣ ಎಂದು ನ್ಯಾ. ಆರುಮುಗಸ್ವಾಮಿ ಆಯೋಗ ಉಲ್ಲೇಖ ಮಾಡಿದೆ. ನ್ಯಾ. ಆರುಮುಗಸ್ವಾಮಿ ಆಯೋಗ ಸಲ್ಲಿಸಿದ 608 ಪುಟಗಳ ವರದಿಯನ್ನು ಇಂದು ತಮಿಳುನಾಡಿದ ವಿಧಾನಸಭೆಯಲ್ಲಿ ಮಂಡನೆ

ಆಪ್ತೆ ಶಶಿಕಲಾ ಅವರೇ ಜಯಲಲಿತಾ ಸಾವಿಗೆ ಕಾರಣ| ವರದಿ ಸಲ್ಲಿಸಿದ ತನಿಖಾ ಆಯೋಗ Read More »

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ತಡೆದ ಪ್ರಕರಣ| ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ

ಸಮಗ್ರ ನ್ಯೂಸ್: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಅವರ ಕಾರನ್ನು ಬೆನ್ನತ್ತಿ ಅಡ್ಡಗಟ್ಟಿ ಮಾರಕಾಯುಧ ತೋರಿಸಿ ಬೆದರಿಕೆಯೊಡ್ಡಿರುವ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಪ್ರಸ್ತುತ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ದೂರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ತನಿಖಾಧಿಕಾರಿಯಲ್ಲಿರುವ ದಾಖಲೆಗಳನ್ನು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸಿಐಡಿ ತನಿಖಾ ಕಚೇರಿಗೆ ಹಸ್ತಾಂತರಿಸಬೇಕು ಎಂದು ರಾಜ್ಯ ಡಿಜಿಪಿಯವರ ಪರವಾಗಿ ಆರ್‌. ಹಿತೇಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಹರೀಶ್‌ ಪೂಂಜಾ ಅವರು ಅ. 13ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರು ತಡೆದ ಪ್ರಕರಣ| ಸರ್ಕಾರದಿಂದ ಸಿಐಡಿ ತನಿಖೆಗೆ ಆದೇಶ Read More »

ಸುಳ್ಯ: ನದಿಗೆಸೆದ ಪೂಜಾ ಸಾಮಗ್ರಿ ಕಾದುಕುಳಿತ ಕಾಳಿಂಗ ಸರ್ಪ!?

ಸಮಗ್ರ ನ್ಯೂಸ್: ನದಿಯಲ್ಲಿ ಬಿಸಾಡಿದ್ದ ಪೂಜಾ ಸಾಮಾಗ್ರಿಯ ಪಕ್ಕದಲ್ಲಿ ಕಾಳಿಂಗ ಸರ್ಪವೊಂದು ಕಾದು ಕುಳಿತ ಪ್ರಸಂಗ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇಜಿನಡ್ಕದಲ್ಲಿ ನಡೆದಿದೆ. ಇದನ್ನು ಗಮನಿಸಿದ ಸ್ಥಳೀಯರು ಪೂಜಾ ಸಾಮಾಗ್ರಿಯನ್ನು ಎತ್ತಿ ಕೊಂಡೊಯ್ದ ಬಳಿಕ ಕಾಳಿಂಗ ಸರ್ಪವೂ ಅಲ್ಲಿಂದ ತೆರಳಿದೆ ಎನ್ನಲಾಗಿದೆ. ಕಾಲುದೀಪ, ಆರತಿ, ಗಂಟೆ, ಹರಿವಾಣ ಸಹಿತ ಹಳೆಯ ಪೂಜಾ ಸಾಮಾಗ್ರಿಗಳನ್ನು ಇಜಿನಡ್ಕ ಎಂಬಲ್ಲಿ ನದಿಯಲ್ಲಿ ಬಿಸಾಡಿರುವುದನ್ನು ಅದೇ ದಾರಿಯಲ್ಲಿ ಬಂದವರು ನೋಡಿದ್ದರು. ಈ ವೇಳೆ ಪೂಜಾ ಸಾಮಾಗ್ರಿ ಇದ್ದ ಜಾಗದ

ಸುಳ್ಯ: ನದಿಗೆಸೆದ ಪೂಜಾ ಸಾಮಗ್ರಿ ಕಾದುಕುಳಿತ ಕಾಳಿಂಗ ಸರ್ಪ!? Read More »

ಮಂಗಳೂರಿನ ಮಳಲಿಯಲ್ಲಿರುವುದು ಮಸೀದಿಯೋ? ಮಂದಿರವೋ? ನ.9 ರಂದು ಹೊರಬೀಳಲಿದೆ ತೀರ್ಪು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಸಮೀಪದ ಮಳಲಿಯಲ್ಲಿರುವ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ನವೆಂಬರ್ 9 ಕ್ಕೆ ಆದೇಶ ಪ್ರಕಟಿಸಲಿದೆ. ಮಳಲಿಯ ಅಸಯ್ಯಿದ್ ಅದ್ಬುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕಳೆದ ಏಪ್ರಿಲ್ 21 ರಂದು ದರ್ಗಾವನ್ನು ನವೀಕರಣಗೊಳಿಸಲು ದರ್ಗಾದ ಎದುರಿನ ಭಾಗವನ್ನು ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಾಲಯದ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿದ್ದವು. ಇದರಿಂದ ಇದು

ಮಂಗಳೂರಿನ ಮಳಲಿಯಲ್ಲಿರುವುದು ಮಸೀದಿಯೋ? ಮಂದಿರವೋ? ನ.9 ರಂದು ಹೊರಬೀಳಲಿದೆ ತೀರ್ಪು Read More »