October 2022

“ನಾನೇ ನಾಗವಲ್ಲಿ, ಮೊನ್ನೆ ನೋಡಿದ್ದು ಕಾಂತಾರ ಪಾರ್ಟ್ 2 ಅಲ್ಲ 3”

ಸಮಗ್ರ ನ್ಯೂಸ್: “ನಾನೇ ಒರಿಜಿನಲ್ ನಾಗವಲ್ಲಿ, ಮೊನ್ನೆ ಸುರತ್ಕಲ್ ಟೋಲ್ ಗೇಟ್ ಬಳಿ ನೀವು ನೋಡಿದ್ದು ಕಾಂತಾರ ಚಿತ್ರದ ಎರಡನೇ ಭಾಗವಲ್ಲ ಮೂರನೇ ಭಾಗ” ಎಂದು ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ಹೇಳಿದರು. ಸುರತ್ಕಲ್ ಟೋಲ್ ವಿರೋಧಿ ಪ್ರತಿಭಟನೆ ಸಂದರ್ಭದ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಸಿನಿಮಾಗಳ ಟೈಟಲ್ ಕೊಟ್ಟು ಟ್ರೋಲ್ ಮಾಡಲಾಗುತ್ತಿದ್ದು ಈ ಕುರಿತು ಮಾತಾಡಿದ ಪ್ರತಿಭಾ ಅವರು, “ಟ್ರೋಲ್ ಒಳ್ಳೆಯದು, ಅದರಿಂದ ನಮ್ಮಂತ ಹೋರಾಟಗಾರರಿಗೆ ಸ್ಫೂರ್ತಿ ಸಿಗುತ್ತದೆ. ಆದರೆ ತಮ್ಮ […]

“ನಾನೇ ನಾಗವಲ್ಲಿ, ಮೊನ್ನೆ ನೋಡಿದ್ದು ಕಾಂತಾರ ಪಾರ್ಟ್ 2 ಅಲ್ಲ 3” Read More »

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ| ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಐಎಎಸ್ ಅಧಿಕಾರಿಗಳ ವರ್ಗಾವಣೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಬರೋಬ್ಬರಿ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪ್ರಕಟಿತ ವರ್ಗಾವಣೆ ಆದೇಶದಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ. ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ| ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಐಎಎಸ್ ಅಧಿಕಾರಿಗಳ ವರ್ಗಾವಣೆ Read More »

ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಂಗುಡೆ, ಬೂತಾಯಿ!! | ಏನಿದು ಸ್ಟೋರಿ ಗೊತ್ತಾ? ಇಲ್ಲಿದೆ ಮಾಹಿತಿ…

ಸಮಗ್ರ ನ್ಯೂಸ್: ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಯೋಜನೆಯನ್ನು ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿದೆ. ಸೀಗರ್ ಸೀಫುಡ್ ಲಾಜಿಸ್ಟಿಕ್ಸ್ ಸಂಸ್ಥೆಯು (Sheegr Seafood and Logistics Pvt.ltd ) ಈ ಯೋಜನೆಯ ಉಸ್ತುವಾರಿ ಹೊತ್ತುಕೊಂಡಿದೆ. ತಾಜಾ ಮೀನಿನ ಜೊತೆಗೆ ಮೀನಿನ ಉತ್ಪನ್ನಗಳನ್ನೂ ಶೀಘ್ರವಾಗಿ ಮನೆ ಬಾಗಿಲಿಗಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿದೆ. ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ತಾಜಾ ಮೀನನ್ನು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿಸಿ,

ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಂಗುಡೆ, ಬೂತಾಯಿ!! | ಏನಿದು ಸ್ಟೋರಿ ಗೊತ್ತಾ? ಇಲ್ಲಿದೆ ಮಾಹಿತಿ… Read More »

ಮಂಗಳೂರು ವಿವಿ ನ್ಯೂನತೆ ಸರಿಪಡಿಸುವಂತೆ ಎಬಿವಿಪಿ ಪ್ರತಿಭಟನೆ

ಸಮಗ್ರ ನ್ಯೂಸ್: ಮಂಗಳೂರು ವಿ.ವಿ ಯಿಂದ ಹಲವಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು,ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಕ್ಲಾಕ್ ಟವರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. UUCMS ತಂತ್ರಾಂಶದ ಲೋಪದೋಶದಿಂದ NEP ಯ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳು ಗೊಂದಲದಲ್ಲಿ ಶಿಕ್ಷಣವನ್ನು ಮುಂದುವರಿಸುವಂತೆ ಆಗಿದೆ . ವಿದ್ಯಾರ್ಥಿಗೆ ದೊರೆಯುವ ಎಲ್ಲಾ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುವಂತೆ ಹಾಗೂ ಬೇರೆ ಕಾಲೇಜಿಗೆ ವರ್ಗಾವಣೆಯನ್ನು ವಿದ್ಯಾರ್ಥಿ ಪಡೆಯದ ರೀತಿ

ಮಂಗಳೂರು ವಿವಿ ನ್ಯೂನತೆ ಸರಿಪಡಿಸುವಂತೆ ಎಬಿವಿಪಿ ಪ್ರತಿಭಟನೆ Read More »

ಜೇನುಗೂಡಿಗೆ ಕೈಹಾಕಿತೇ ರಾಜ್ಯ ಸರ್ಕಾರ? ಮುಸ್ಲಿಂ- ಕ್ರಿಶ್ಚಿಯನ್ ಮೀಸಲಾತಿ ರದ್ದು!?

ಸಮಗ್ರ ನ್ಯೂಸ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೀಸಲಾತಿ ರದ್ದುಪಡಿಸುವ ಲೆಕ್ಕಾಚಾರದಲ್ಲಿದೆ. ಈ ಮೂಲಕ ರಾಜ್ಯ ಸರ್ಕಾರ ಜೇನುಗೂಡಿಗೆ ಕೈಹಾಕುವ ಮಟ್ಟಿಗೆ ಆಲೋಚನೆ ಮಾಡಿದೆ ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ. ವಾಸ್ತವ ಹೀಗಿದ್ದೂ ರಾಜ್ಯ ಸರ್ಕಾರ ಎಸ್ಸಿಗೆ 15ರಿಂದ 17, ಎಸ್ಟಿಗೆ ಶೇ.3ರಿಂದ 7ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹೆಚ್ಚಿಸಲು

ಜೇನುಗೂಡಿಗೆ ಕೈಹಾಕಿತೇ ರಾಜ್ಯ ಸರ್ಕಾರ? ಮುಸ್ಲಿಂ- ಕ್ರಿಶ್ಚಿಯನ್ ಮೀಸಲಾತಿ ರದ್ದು!? Read More »

ಕಾಸರಗೋಡು: ಶಾಲಾ ಕಲೋತ್ಸವ ದಂದು ಕುಸಿದ ಚಪ್ಪರ/ಹಲವಾರು ವಿದ್ಯಾರ್ಥಿಗಳು, ಶಿಕ್ಷಕರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಶಾಲೆಯೊಂದರಲ್ಲಿ ಏರ್ಪಡಿಸಿದ್ದ ‘ಶಾಲಾ ಕಲೋತ್ಸವ ‘ ಕಾರ್ಯಕ್ರಮದ ವೇಳೆ ಚಪ್ಪರ ಕುಸಿದು ಹಲವಾರು ವಿದ್ಯಾರ್ಥಿಗಳು, ಶಿಕ್ಷಕರು ಗಂಭೀರವಾಗಿ ಗಾಯಗೊಂಡ ಘಟನೆ ಕಾಸರಗೋಡು ಜಿಲ್ಲೆಯಿಂದ ವರದಿಯಾಗಿದೆ. ಉಪ್ಪಳ ಸಮೀಪದ ಬೇಕೂರು ಶಾಲೆಯಲ್ಲಿ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ಮೂರು ದಿನಗಳ ಕಲೋತ್ಸವ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ 1.30 ರ ಸುಮಾರಿಗೆ ಈ ದುರಂತ ನಡೆದಿದೆ. ಈ ಸಂದರ್ಭ ಸುಮಾರು 200ಕ್ಕಿಂತಲೂ ಹೆಚ್ಚು ಶಾಲಾ ಮಕ್ಕಳು ಚಪ್ಪರದಡಿಯಲ್ಲಿ ಸಿಲುಕಿದ್ದರು ಎನ್ನಲಾಗಿದೆ. 40 ವಿದ್ಯಾರ್ಥಿಗಳಿಗೆ ಗಾಯವಾಗಿದೆ ಎಂಬ ಮಾಹಿತಿಯಿದೆ. 9ಶಾಲಾ

ಕಾಸರಗೋಡು: ಶಾಲಾ ಕಲೋತ್ಸವ ದಂದು ಕುಸಿದ ಚಪ್ಪರ/ಹಲವಾರು ವಿದ್ಯಾರ್ಥಿಗಳು, ಶಿಕ್ಷಕರು ಆಸ್ಪತ್ರೆಗೆ ದಾಖಲು Read More »

ಪುತ್ತೂರು: ‘ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ’ ಎಂದ ಯುವಕ| ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಗೂಸಾ

ಸಮಗ್ರ‌ ನ್ಯೂಸ್: ಯುವತಿಯೊರ್ವಳನ್ನು ‘‘ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ’’ ಎಂದು ಕೇಳಿ ಆರೋಪದ ಮೇರೆಗೆ ಸಾರ್ವಜನಿಕರು ಯುವಕನನ್ನು ಹಿಡಿದು ಹಿಗ್ಗಾಮುಗ್ಗಾ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ಬಲ್ನಾಡು ಗ್ರಾ.ಪಂ ವ್ಯಾಪ್ತಿಯ ಸಾಜ ಪನೆತ್ತಡ್ಕ ಎಂಬಲ್ಲಿಂದ ವರದಿಯಾಗಿದೆ. ಬುಳೇರಿಕಟ್ಟೆ ಸಾಜ ಕ್ರಾಸ್ ಬಳಿ ಅ.20ರಂದು ಸಂಜೆ ಬಸ್ಸಿನಿಂದ ಇಳಿದು ಮನೆಗೆ ತೆರಳುತ್ತಿದ್ದ ಯುವತಿಯೊರ್ವಳನ್ನು ಅದೇ ದಾರಿಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಾಜ ನಿವಾಸಿ ನಾಗರಾಜ್ ಎಂಬವರು ಬರ್ತೀಯಾ ಎಂದು ಕೇಳಿದ್ದಾರೆ ಎನ್ನಲಾಗಿದ್ದು ಈ ವಿಷಯವನ್ನು ಯುವತಿಯು ತನ್ನ ಮನೆಯಲ್ಲಿ

ಪುತ್ತೂರು: ‘ಬರ್ತೀಯಾ ಮನೆಗೆ ಡ್ರಾಪ್ ಕೊಡುತ್ತೇನೆ’ ಎಂದ ಯುವಕ| ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಗೂಸಾ Read More »

ಮೈಸೂರು: ಕುಸಿದು ಬಿದ್ದ ಮಹಾರಾಣಿ ಕಾಲೇಜು ಕಟ್ಟಡ| ಇಬ್ಬರು ಅಧ್ಯಾಪಕರು ಜಸ್ಟ್ ಮಿಸ್

ಸಮಗ್ರ ನ್ಯೂಸ್: ಭಾರೀ ಮಳೆಗೆ ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಇಬ್ಬರು ಅಧ್ಯಾಪಕರು ಪಾರಾಗಿದ್ದಾರೆ. ಮೈಸೂರಿನ ಮಹಾರಾಣಿ ಪದವಿ ಕಾಲೇಜು ಕಟ್ಟಡ ಕುಸಿದು ಬಿದ್ದಿದ್ದು, ಕಾಲೇಜಿನ ಮುಂಭಾಗದ ಎರಡು ಲ್ಯಾಬ್ ಧರಾಶಾಯಿ. ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರೀ ದುರಂತ ತಪ್ಪಿದೆ. ಕುಸಿದು ಬಿದ್ದ ಕಟ್ಟಡದ ಕೆಳಗೆ ಯಾರೂ ಇಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದಾರೆ. ಕಾಲೇಜಿನ ಇತರೆ ಕಟ್ಟಡ ಕೂಡ ಇದೇ ಪರಿಸ್ಥಿತಿ ಇದ್ದು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ

ಮೈಸೂರು: ಕುಸಿದು ಬಿದ್ದ ಮಹಾರಾಣಿ ಕಾಲೇಜು ಕಟ್ಟಡ| ಇಬ್ಬರು ಅಧ್ಯಾಪಕರು ಜಸ್ಟ್ ಮಿಸ್ Read More »

ಚಿಕ್ಕಮಗಳೂರು : ಶ್ರೀಗಂಧ ಕದಿಯಲು ಬಂದವನ ಹೊಡೆದು ಕೊಂದರಾ ಅರಣ್ಯ ಅಧಿಕಾರಿಗಳು? ಶಿಬಿರದ ಶೌಚಾಲಯದಲ್ಲಿತ್ತು‌ ಆತನ ಹೆಣ…!

ಸಮಗ್ರ ನ್ಯೂಸ್: ಶ್ರೀಗಂಧದ ಮರವನ್ನ ಕಡಿಯಲು ಬಂದಿದ್ದ ಗಂಧದ ಕಳ್ಳನನ್ನ ಅರಣ್ಯ ಅಧಿಕಾರಿಗಳು ಹೊಡೆದು ಕೊಂದರಾ ಎಂಬ ಅನುಮಾನ ವ್ಯಕ್ತವಾಗಿದೆ. ತಾಲೂಕಿನ ಹೊಸಪೇಟೆ ಸಮೀಪದ ಕೋಟೆ ಎಂಬ ಗ್ರಾಮದ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ಗಂಧದ ಕಳ್ಳನ ಮೃತದೇಹ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಊರಿಗೆ ಆಂಬುಲೆನ್ಸ್ ಬಂದಿದ್ದನ್ನ ಕಂಡ ಸ್ಥಳೀಯರು ಆನೆ ಶಿಬಿರದ ಶೌಚಾಲಯದಲ್ಲಿ ಬಂದು ನೋಡಿದಾಗ ವ್ಯಕ್ತಿಯ ಶವ ಪತ್ತೆಯಾಗಿದೆ. ಕೂಡಲೇ ಊರಿನ ಜನ ಸೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆತ

ಚಿಕ್ಕಮಗಳೂರು : ಶ್ರೀಗಂಧ ಕದಿಯಲು ಬಂದವನ ಹೊಡೆದು ಕೊಂದರಾ ಅರಣ್ಯ ಅಧಿಕಾರಿಗಳು? ಶಿಬಿರದ ಶೌಚಾಲಯದಲ್ಲಿತ್ತು‌ ಆತನ ಹೆಣ…! Read More »

ಕಡಬ: ಕಂಬಳಿ ಮಾರಲು ಬಂದವರಿಂದ ಒಂಟಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ| ಕಿರುಚಾಟಕ್ಕೆ ಪರಾರಿಯಾದವರ‌ ಕಾರು ಅಪಘಾತ

ಸಮಗ್ರ ನ್ಯೂಸ್: ಕಂಬಳಿ ಮಾರುವ ಸೋಗಿನಲ್ಲಿ ಬಂದ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ ಘಟನೆ ಕಡಬದ ಕಾಣಿಯೂರು ಸಮೀಪದ ದೋಳ್ಪಾಡಿ ಎಂಬಲ್ಲಿ ನಡೆದಿದೆ. ಮಹಿಳೆ ಕಿರುಚಾಡಿಕೊಂಡಾಗ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಳಲಿಯ ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮಿಯಾಸುದ್ದಿನ್ ಅಪಘಾತದಲ್ಲಿ ಗಾಯಗೊಂಡವರು. ಇವರ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಬಗ್ಗೆ ಮಹಿಳೆ ದೂರು ನೀಡಿದ್ದು, ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ: ಕಂಬಳಿ ಮಾರಲು ಬಂದವರಿಂದ ಒಂಟಿ ಮಹಿಳೆಯ ಅತ್ಯಾಚಾರಕ್ಕೆ ಯತ್ನ| ಕಿರುಚಾಟಕ್ಕೆ ಪರಾರಿಯಾದವರ‌ ಕಾರು ಅಪಘಾತ Read More »