‘ವರಾಹ ರೂಪಂ’ ಹಾಡನ್ನು ಬಳಸಿಕೊಳ್ಳಬಹುದು, ಆದರೆ…

ಸಮಗ್ರ ನ್ಯೂಸ್: ಕಾಂತಾರ ಸಿನಿಮಾದ ಅಬ್ಬರ ಎಲ್ಲೆಡೆ ಮುಂದುವರೆದಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಸದ್ದು ಮುಂದುವರೆದಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ‘ವರಾಹ ರೂಪಂ’ ಹಾಡಿಗೆ ವಿವಾದ ಸುತ್ತಿಕೊಂಡಿತ್ತು. ಈ ಕುರಿತು ಕೇರಳದ ಕೋರ್ಟ್ ಹಾಡನ್ನು ಬಳಸದಂತೆ ತಡೆಯಾಜ್ಞೆ ನೀಡಿತ್ತು. ಆದರೆ ಇದೀಗ ಕೋರ್ಟ್ ಕದ ತಟ್ಟಿರುವ ‘ತೈಕುಡಂ ಬ್ರಿಡ್ಜ್’ ಬ್ಯಾಂಡ್ ತಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಇದು ಕಾಂತಾರ ತಂಡಕ್ಕೆ ಸ್ವಲ್ಪಮಟ್ಟಿಗೆ ನೆಮ್ಮದಿ ತರಿಸಿದೆ.

Ad Widget ... ..

‘ವರಾಹರೂಪಂ‌’ ಹಾಡನ್ನು ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಮಲಯಾಳಂ ಭಾಷೆಯ ‘ನವರಸಂ..’ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​’ ಚಿತ್ರತಂಡ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೇರಳದ ಕೋಝಿಕೋಡ್ ನ್ಯಾಯಾಲಯ ವರಾಹ ರೂಪಂ ಹಾಡಿಗೆ ತಡೆಯಾಜ್ಞೆ ನೀಡಿತ್ತು. ಇದೀಗ ವರಾಹ ರೂಪಂ ಹಾಡಿನ ವಿವಾದದ ಕುರಿತಂತೆ ಖುದ್ದು ಮಲಯಾಳಂನ ‘ತೈಕ್ಕುಡಂ ಬ್ರಿಡ್ಜ್​’ ತಂಡ ಪ್ರತಿಕ್ರಿಯೆ ನೀಡಿದೆ.

Ad Widget

ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿನ ವಿವಾದದ ಕುರಿತಂತೆ ತೈಕ್ಕುಡಂ ಬ್ರಿಡ್ಜ್​’ ತಂಡದ ವಿಯಾನ್ ಫರ್ನಾಂಡಿಸ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಿನಿಮಾದಲ್ಲಿ ನಮ್ಮ ಹಾಡಿಗೆ ಕ್ರೆಡಿಟ್ ಕೊಟ್ಟರೆ, ಈ ಹಾಡು ಬಳಸಲು ತೊಂದರೆಯಿಲ್ಲ ಎಂದಿದ್ದಾರೆ.

‘ಕೇರಳದ ಕೋಝಿಕೋಡ್‌ ಸೆಷನ್ಸ್‌ ಕೋರ್ಟ್​ನ ಆದೇಶದ ಪ್ರತಿ ಕೈ ಸೇರಿದ ನಂತರದಲ್ಲಿ ಕಾಂತಾರ ತಂಡದವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತುಂಬಾನೇ ಮುಖ್ಯ. ನಮಗೆ ಕ್ರೆಡಿಟ್ ಕೊಟ್ಟರೆ ಈ ಹಾಡನ್ನು ಅವರು ಪ್ಲೇ ಮಾಡಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ವಿಯಾನ್ ಫರ್ನಾಂಡಿಸ್ ಹೇಳಿದ್ದಾರೆ.

ಇನ್ನು ಕಾಂತಾರ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಅವರು ನಮ್ಮ ಬ್ಯಾಂಡ್​ನ ಸ್ಥಾಪಕರಲ್ಲೊಬ್ಬರಾದ ಗೋವಿಂದ್ ವಸಂತ್ ಅವರನ್ನು ಸಂಪರ್ಕಿಸಿದ್ದರು. ನಮ್ಮ ಮ್ಯಾನೇಜ್​ಮೆಂಟ್ ನವರು ಕಾಂತಾರ ತಂಡಕ್ಕೆ ಎಚ್ಚರಿಕೆ ನೀಡಿದೆ. ಈ ಚಿತ್ರ ರಿಲೀಸ್​ಗೂ ಮೊದಲು ಅವರು ನಮ್ಮ ಜತೆ ಮಾತನಾಡಿ, ಹಾಡಿನಲ್ಲಿ ನಮ್ಮ ಬ್ಯಾಂಡ್​ನ ಉಲ್ಲೇಖ ಮಾಡಿದ್ದರೆ ಸಮಸ್ಯೆಯೇ ಆಗುತ್ತಿರಲಿಲ್ಲ. ಅಲ್ಲದೇ ನಾವು ಕೋರ್ಟ್‌ ಕೇಸ್ ಸಹ ಹಾಕುತ್ತಿರಲಿಲ್ಲ ಎಂದಿದ್ದಾರೆ.

Leave a Comment

Your email address will not be published. Required fields are marked *