Ad Widget .

ಸುಳ್ಯ:ಹರಕೆ ಹೇಳಿ ದಿನದೊಳಗೆ ನಾಪತ್ತೆಯಾದ ಬಾಲಕಿ ಪತ್ತೆ| ಮತ್ತೊಂದು ಪವಾಡಕ್ಕೆ ಸಾಕ್ಷಿಯಾದ ಕೊರಗಜ್ಜ

ಸಮಗ್ರ ನ್ಯೂಸ್: ನಾಪತ್ತೆಯಾದ ಬಾಲಕಿಯ ಪತ್ತೆಗಾಗಿ ಕೊರಗಜ್ಜನಿಗೆ ಹರಕೆ ಹೇಳಿ ದಿನ ಕಳೆಯುವುದರ ಒಳಗೆ ಬಾಲಕಿ ಪತ್ತೆಯಾದ ಘಟನೆ ದ.ಕ‌ ಜಿಲ್ಲೆಯ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಕೊರಗಜ್ಜ‌ ಸಾನಿಧ್ಯದಲ್ಲಿ ನಡೆದಿದೆ.

Ad Widget . Ad Widget .

ಅ.17ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಜಗನ್ನಾಥ್ ಹಾಗೂ ರೇಖಾ ದಂಪತಿಯ ಪುತ್ರಿ ಭಾರ್ಗವಿ ನಾಪತ್ತೆಯಾಗಿದ್ದಳು. ಈ ವಿಚಾರ ಅವರ ಸಂಬಂಧಿಕರಾದ ಕುಕ್ಕೆ ಸುಬ್ರಹ್ಮಣ್ಯದ ನಿತಿನ್ ಭಟ್ ರವರಿಗೆ ತಿಳಿದು ಅವರು‌ ಅ.19ರಂದು ಉಜಿರಡ್ಕದ ಕೊರಗಜ್ಜನ ಸಾನಿಧ್ಯದಲ್ಲಿ ಪ್ರಾರ್ಥಿಸಿದ್ದರು.

Ad Widget . Ad Widget .

ಈ ವೇಳೆ ಅಲ್ಲಿನ ಪೂಜಾರಿಗಳು ಅಭಯ ನೀಡಿದ್ದು, ಪ್ರಾರ್ಥನೆ ನಡೆಸಿ 24 ಗಂಟೆಗಳೊಳಗೆ ಬಾಲಕಿ ಪತ್ತೆಯಾಗುವುದಾಗಿ ಹೇಳಿದ್ದರು. ಅದರಂತೆ ಅದೇ ದಿನ ಸಂಜೆ ಬಾಲಕಿ ಗೋವಾದಲ್ಲಿ ಪತ್ತೆಯಾಗಿದ್ದು, ಬಳಿಕ ಅ.30ರಂದು ಬಾಲಕಿ ಸಮೇತ ಕುಟುಂಬಸ್ಥರು ಉಜಿರಡ್ಕದಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಕೊರಗಜ್ಜನ ಪವಾಡ ತಿಳಿದುಬಂದಿದೆ.

Leave a Comment

Your email address will not be published. Required fields are marked *