ಸಮಗ್ರ ನ್ಯೂಸ್: ಮಾನಸಿಕ ಅಸ್ವಸ್ಥನೊಬ್ಬ ವಿದ್ಯುತ್ ಕಂಬದ ಮೇಲೆ ಹತ್ತಿ ಕೇಬಲ್ ಮೇಲೆ ನಡೆದಾಡಿದ ಘಟನೆ ಕಾಞಂಗಾಡು ಸಮೀಪದ ಮಾವುಂಗಲ್‌ನಲ್ಲಿ ಎಂಬಲ್ಲಿ ನಡೆದಿದೆ.
ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ವ್ಯಕ್ತಿ ಶನಿವಾರ ಮಧ್ಯಾಹ್ನ ವಿದ್ಯುತ್ ಕಂಬ ಹತ್ತಲು ಪ್ರಾರಂಭಿಸಿದ್ದಾನೆ. ಈ ವೇಳೆ ನೋಡಿ ಸ್ಥಳೀಯರು ಕೂಡಲೇ ವಿದ್ಯುತ್ ಮಂಡಳಿಗೆ ತಿಳಿಸಿದ್ದಾರೆ, ಈ ಹಿನ್ನಲೆ ಆ ಲೈನ್ ನಿಂದ ಪವರ್ ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥ ವಿದ್ಯುತ್ ಕಂಬ ಹತ್ತಿ ಬಳಿಕ ವಿದ್ಯುತ್ ಕೇಬಲ್ ಮೇಲೆ ನಡೆದುಕೊಂಡು ಸರ್ಕಸ್ ಮಾಡಿದ್ದಾನೆ. ಸ್ಥಳಕ್ಕ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಕೊನೆಗೂ ಆತನನ್ನು ಕೆಳಗೆ ಇಳಿಸಿದ್ದಾರೆ.
ಆತ ಬಿಹಾರ್ ಮೂಲದ ವ್ಯಕ್ತಿಯೆಂದು ತಿಳಿದು ಬಂದಿದ್ದು, ಈ ಮೊದಲು ಚೆರ್ವತ್ತೂರು ರೈಲ್ವೆ ನಿಲ್ದಾಣದಲ್ಲೂ ಇದೇ ರೀತಿ ಅವಾಂತರ ಮಾಡಿದ್ದು, ಆತನನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು, ಆದರೆ ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಈ ಅವಾಂತರ ಸೃಷ್ಠಿಸಿದ್ದಾನೆ.