Ad Widget .

ಜಾಲತಾಣಗಳಲ್ಲಿ ತುಳುಭಾಷೆ, ದೈವಾರಾಧನೆಯ ಅಶ್ಲೀಲ ಪೋಸ್ಟ್| ವಿಕೃತರ ವಿರುದ್ದ ಕಾನೂನು ಹೋರಾಟಕ್ಕೆ ದೈವಾರಾಧನಾ ವೇದಿಕೆ ನಿರ್ಧಾರ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆ, ದೈವಾರಾಧನೆಯ ಕುರಿತು ಅಶ್ಲೀಲವಾಗಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಕಾನೂನು ಸಮರಕ್ಕೆ ಮುಂದಾಗಿದೆ.

Ad Widget . Ad Widget .

ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷಿಗರನ್ನು, ದೈವಾರಾಧನೆ, ತುಳು ಕಲಾವಿದರ ಕುರಿತು ಅಶ್ಲೀಲ ಪದ ಬಳಕೆ ಮಾಡಿರುವ ಕನ್ನಡಿಗ ಶಿವರಾಜ್ ಎಂಬವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಪ್ರಮುಖರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕ ಕಾಮತ್ ತಕ್ಷಣವೇ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.

Ad Widget . Ad Widget .

ಈ ಕುರಿತು ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ತುಳುವರ ನಂಬಿಕೆಗಳನ್ನು ಅಪಹಾಸ್ಯ ಮಾಡುವುದು, ದೈವಾರಾಧನೆಯ ಕುರಿತು ಅಶ್ಲೀಲವಾಗಿ ಬರೆಯುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಕುರಿತು ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರಗಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಬಳಿಕ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಅವರನ್ನು ಭೇಟಿಯಾಗಿರುವ ಯುವ ವೇದಿಕೆಯ ಪ್ರಮುಖರು ಸೂಕ್ತ ಕ್ರಮ ಕೈಗೊಳ್ಳುವಂತೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಈಗಾಗಲೇ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಶ್ರೀ ದಯಾನಂದ ಜಿ ಕತ್ತಲ್ಸರ್. ತುಳುನಾಡ ದೈವರಾದನೆ ಯುವ ವೇದಿಕೆ (ರಿ) ಸಂಚಾಲಕರಾದ ಭರತ್ ಬಲ್ಲಾಲ್ ಬಾಗ್, ರೋಶನ್ ರೆನೋಲ್ಡ್ , ಸಂತೋಷ್ ಕುಮಾರ್, ಚರಿತ್ ಪೂಜಾರಿ, ಮುಂಡಲ ಯುವ ವೇದಿಕೆ ಅಧ್ಯಕ್ಷ ಜಯಚಂದ್ರ‌ ಕೊಟ್ಟರ ಕ್ರಾಸ್, ಸಂಘಟನಾ ಕಾರ್ಯದರ್ಶಿ ರವಿ ಕುದುಮುಲ್ ಗಾರ್ಡನ್, ನಂದೀಶ್, ಪ್ರಕ್ಯತ್, ನಂದನ್ ಯುವರಾಜ್, ಅಭಿಷ್ ಪ್ರಿತೇಶ್, ಧನುಷ್, ಫ್ರಾನ್ಸಿಸ್ ಡಿಸೋಜಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *