Ad Widget .

ಗುಜರಾತ್ ತೂಗು ಸೇತುವೆ ದುರಂತ| 150 ರ ಸನಿಹಕ್ಕೆ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಮಚು ನದಿಗೆ ಬ್ರಿಟಿಷರ ಕಾಲದ ಸೇತುವೆ ದುರಸ್ತಿಗೊಂಡ ವಾರಗಳಲ್ಲಿ ಕುಸಿದಿದ್ದು, ಮೃತರ ಸಂಖ್ಯೆ 137ಕ್ಕೆ ಏರಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಛತ್ ಪೂಜೆಗೆ ಸಂಬಂಧಿಸಿದ ಕೆಲವು ಆಚರಣೆಗಳನ್ನು ಮಾಡಲು ಜನರು ಸಾಮೂಹಿಕವಾಗಿ ಸೇರಿದ್ದರು.

Ad Widget . Ad Widget .

ಅಪಘಾತದ ಸಮಯದಲ್ಲಿ ಸುಮಾರು 500 ಜನರು ಸೇತುವೆಯ ಮೇಲೆ ಇದ್ದರು ಎಂದು ವರದಿಯಾಗಿದೆ. ಸೋಮವಾರ ಬೆಳಗಿನ ಜಾವದವರೆಗೆ 137 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಮೃತಪಟ್ಟವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳೇ ಸೇರಿದ್ದಾರೆ.

Ad Widget . Ad Widget .

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ಎನ್‌ಡಿಆರ್‌ಎಫ್‌ನ ಐದು ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿವೆ. ಸೇನೆ, ನೌಕಾಪಡೆ ಮತ್ತು ವಾಯುಸೇನೆ ಕೂಡ ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ರಕ್ಷಣಾ ಕಾರ್ಯಾಚರಣೆ ತಡರಾತ್ರಿಯವರೆಗೂ ಮುಂದುವರಿದರೂ ಬೆಳಕಿನ ಕೊರತೆಯಿಂದ ಅಡಚಣೆಯಾಯಿತು. ಸೋಮವಾರ ಬೆಳಗಿನ ಜಾವದಿಂದ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಆದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.

ಮೊರ್ಬಿಯಲ್ಲಿರುವ ಕೇಬಲ್ ಸೇತುವೆ ಸುಮಾರು 150 ವರ್ಷಗಳಷ್ಟು ಹಳೆಯದು. ಜನಪ್ರಿಯ ಪ್ರವಾಸಿ ತಾಣ ಕೂಡಾ ಹೌದು. ಏಳು ತಿಂಗಳು ಮುಚ್ಚಲಾಗಿದ್ದ ಸೇತುವೆಯನ್ನು ದುರಸ್ತಿಯ ನಂತರ ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ಮತ್ತೆ ತೆರೆಯಲಾಯಿತು. ಮತ್ತೊಂದೆಡೆ ಘಟನೆಯ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ಸೇತುವೆಯನ್ನು ತೆರೆಯಲು ಕಂಪನಿ ಫಿಟ್ನೆಸ್ ಪ್ರಮಾಣಪತ್ರ ನೀಡಲಾಗಿಲ್ಲ ಎಂದು ಕೆಲವು ಮೂಲಗಳು ವರದಿ ಮಾಡಿವೆ. ಸೇತುವೆ ದುರಸ್ತಿ ಕಾರ್ಯಕ್ಕೆ ಕಂಪನಿಯು ಯಾವ ರೀತಿಯ ವಸ್ತುಗಳನ್ನು ಬಳಸಿದೆ ಎಂಬ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಸೇತುವೆ ದುರಸ್ತಿ ಕೈಗೊಂಡ ಕಂಪನಿ ವಿರುದ್ಧ ಐಪಿಸಿ ಸೆಕ್ಷನ್ 304, 308 ಮತ್ತು 114ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಗುಜರಾತ್ ಗೃಹ ಸಚಿವರು ತಿಳಿಸಿದ್ದಾರೆ.

ಕುಸಿತದಿಂದಾಗಿ ಇನ್ನೂ 100ಕ್ಕೂ ಹೆಚ್ಚು ಮಂದಿ ನೀರುಪಾಲಾಗಿದ್ದಾರೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.

Leave a Comment

Your email address will not be published. Required fields are marked *