Ad Widget .

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ

ಸಮಗ್ರ ನ್ಯೂಸ್: ಫ್ರೆಂಚ್ ಓಪನ್ ಸೂಪರ್ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ನೇರ ಗೇಮ್‌ಗಳ ಜಯದೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Ad Widget . Ad Widget .

48 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ವಿಶ್ವದ ಎಂಟನೇ ಶ್ರೇಯಾಂಕದ ಜೋಡಿ 25ನೇ ಶ್ರೇಯಾಂಕದ ಲು ಮತ್ತು ಯಾಂಗ್‌ರನ್ನು 21-13, 21-19 ಅಂತರದಿಂದ ಮಣಿಸಿದರು.

Ad Widget . Ad Widget .

2019ರ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ ತಮ್ಮ ಕನಸಿನ ಓಟವನ್ನು ಮುಂದುವರೆಸಿ ಇಂಡಿಯನ್ ಓಪನ್ ಸೂಪರ್ 500, ಕಾಮನ್‌ವೆಲ್ತ್ ಗೇಮ್ಸ್ ಚಿನ್ನ, ಥಾಮಸ್ ಕಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚು ಗೆದ್ದಿದ್ದಾರೆ.

ಭಾರತೀಯ ಜೋಡಿಗೆ, ಫ್ರೆಂಚ್ ಓಪನ್ 2019 ಥೈಲ್ಯಾಂಡ್ ಓಪನ್ ಮತ್ತು 2022 ಇಂಡಿಯನ್ ಓಪನ್ ನಂತರ ಅವರ ಮೂರನೇ ವಿಶ್ವ ಪ್ರವಾಸ ಪ್ರಶಸ್ತಿಯಾಗಿದೆ.

Leave a Comment

Your email address will not be published. Required fields are marked *