Ad Widget .

ನಾಟಕ ಅಭ್ಯಾಸದ ವೇಳೆ ನೇಣಿಗೆ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನ.1ರಂದು ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಮನೆಯಲ್ಲಿ ಅಭ್ಯಾಸ ಮಾಡುವ ವೇಳೆ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು 12 ವರ್ಷದ ಸಂಜಯ ಗೌಡ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

Ad Widget . Ad Widget .

ನಗರದ ಕೆಳಗೋಟೆ ನಿವಾಸಿಗಳಾದ ನಾಗರಾಜ್ ಮತ್ತು ಭಾಗ್ಯಲಕ್ಷ್ಮಿ ದಂಪತಿಯ ಪುತ್ರ ಸಂಜಯ್ ಗೌಡ (12) ಖಾಸಗಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿದ್ದು, ಶಾಲೆಯಲ್ಲಿ ನವಂಬರ್ 1 ರಂದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಪಾತ್ರ ನಿರ್ವಹಿಸುವ ಸಲುವಾಗಿ ಶನಿವಾರ ರಾತ್ರಿ ಮನೆಯಲ್ಲಿ
ಪೋಷಕರು ಇಲ್ಲದೇ ಇರುವಾಗ ಮೊಬೈಲ್ ಯೂಟ್ಯೂಬ್ ನಲ್ಲಿ ನೋಡಿಕೊಂಡು ಭಗತ್ ಸಿಂಗ್ ಪಾತ್ರ ಅಭ್ಯಾಸ ಮಾಡುತ್ತಿದ್ದನು.

Ad Widget . Ad Widget .

ಮುಖಕ್ಕೆ ಉಲ್ಲನ್ ಟೋಪಿ ಹಾಕಿಕೊಂಡು, ಫ್ಯಾನಿನ ಹುಕ್ಕಿಗೆ ನೂಲಿನ ಹಗ್ಗದಿಂದ ನೇಣು ಹಾಕಿಕೊಳ್ಳುವ ಸನ್ನಿವೇಶ ಅಭ್ಯಾಸ ಮಾಡುವಾಗ
ಆಕಸ್ಮಿಕವಾಗಿ ಸ್ಟೂಲ್ ಜಾರಿ ನೇಣು ಬಿಗಿದುಕೊಂಡಿದೆ. ತಕ್ಷಣವೇ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಮಗ ಸಾವನ್ನಪ್ಪಿದ್ದಾನೆಂದು ವೈದ್ಯರು ದೃಢಪಡಿಸಿದರು ಎಂದು ಪೋಷಕರು
ಬಡಾವಣೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *