Ad Widget .

ಹಬ್ಬಾಚರಣೆ ವೇಳೆ ನೂಕುನುಗ್ಗಲು| ಹಲವು ಮಂದಿಗೆ ಹೃದಯಸ್ತಂಭನ

ಸಮಗ್ರ ನ್ಯೂಸ್: ದಕ್ಷಿಣಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ಹ್ಯಾಲೋವೀನ್ ಹಬ್ಬದ ಸಮಯದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಕನಿಷ್ಠ 50 ಜನರು ಹೃದಯ ಸ್ತಂಭನಕ್ಕೊಳಗಾಗಿದ್ದಾರೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

ಇಟಾವೊನ್ವಿರಾಮ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಜನಸಂದಣಿ ಹೆಚ್ಚಾದಾಗ‌ ಸುಮಾರು 100 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಏಜೆನ್ಸಿಯ ಅಧಿಕಾರಿ ಚೋಯ್ಚೆಯೊನ್-ಸಿಕ್ ತಿಳಿಸಿದ್ದಾರೆ.

Ad Widget . Ad Widget .

ಹೃದಯ ಸ್ತಂಭನಕ್ಕೆ
ಚಿಕಿತ್ಸೆ ಪಡೆಯುತ್ತಿರುವ ನಿರ್ದಿಷ್ಟ ಸಂಖ್ಯೆಯ ಜನರ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. ಆದರೆ,ಅವರು ಡಜನ್ ಗಟ್ಟಲೆ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.

ಇಟಾವೊನ್ ನ ಬೀದಿಗಳಲ್ಲಿ‌ ಡಜನ್‍ಗಟ್ಟಲೆ ಹಲವು ಜನರಿಗೆ ಸಿಪಿಆರ್ ನೀಡಲಾಗುತ್ತಿದೆ ಮತ್ತು ಇನ್ನೂ ಅನೇಕರನ್ನು ಹತ್ತಿರದ ಆಸ್ಪತ್ರೆಗಳಿಗೆ ಕೊಂಡೊಯ್ಯಲಾಗುತ್ತಿದೆ.

ಈ ಕುರಿತು ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ಸುಕ್ಯೋಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಉತ್ಸವ‌‌ ಸ್ಥಳಗಳ ಸುರಕ್ಷತೆಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *