Ad Widget .

ಎಟಿಎಂ ಕಾರ್ಡ್ ನಲ್ಲಿ ವಿವಾಹದ ಕರೆಯೋಲೆ| ಜಾಲತಾಣಗಳಲ್ಲಿ ಫೋಟೋ ವೈರಲ್

ಇತ್ತೀಚೆಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ತರಹೇವಾರಿಯಲ್ಲಿ ಮುದ್ರಿಸಲಾಗುತ್ತಿದೆ. ಪಾಸ್‌ಪೋರ್ಟ್, ರೇಷನ್ ಕಾರ್ಡ್, ಆಧಾರ್​ ಕಾರ್ಡ್​ ಹೀಗೆ ಬೇರೆ ಮಾದರಿಗಳಲ್ಲಿ ತಯಾರಿಸಲಾಗುತ್ತಿದೆ. ಇದೀಗ ಎಟಿಎಂ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್​ ಆಗಿದೆ.

Ad Widget . Ad Widget .

ಎಟಿಎಂ ಕಾರ್ಡ್ ಮಾದರಿಯಲ್ಲಿ ಮುದ್ರಿಸಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬೊಮ್ಮನಹಳ್ಳಿ ಅನಿಲ್ ಕುಮಾರ್ ಮತ್ತು ನಳಿನಿ ರೈ ವೆಡ್ಡಿಂಗ್ ಎಂದು ಬರೆಯಲಾಗಿದೆ.

Ad Widget . Ad Widget .

ಕಾರ್ಡ್ ನ ಮುಂಭಾಗದಲ್ಲಿ “ವಿವಾಹ” ಎಂದು, ಮದುವೆ ದಿನಾಂಕವನ್ನು ಕಾರ್ಡ್ ನಂಬರ್ ರೀತಿಯಲ್ಲಿ ಬರೆಯಲಾಗಿದೆ.

ಕಾರ್ಡ್ ನ ಹಿಂಭಾಗದಲ್ಲಿ ಮದುವೆ ಮುಹೂರ್ತ ಹಾಗೂ ಆರತಕ್ಷತೆ ಸಮಯವನ್ನು ಹಾಗೂ ಸ್ಥಳವನ್ನು ಮುದ್ರಿಸಲಾಗಿದೆ. ಜೊತೆಗೆ ಕಾರ್ಡ್ ನ ಹಿಂದೆ ವಿಳಾಸ ಪತ್ತೆಗಾಗಿ ಗೂಗಲ್ ಮ್ಯಾಪ್ ಸ್ಕ್ಯಾನರ್ ಅನ್ನೂ ಹಾಕಲಾಗಿದೆ.

ಸದ್ಯ ಈ ಕಾರ್ಡ್ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನವ ದಂಪತಿಗಳಿಗೆ ಶುಭಕೋರಿದ್ದಾರೆ.

Leave a Comment

Your email address will not be published. Required fields are marked *