ಗುಜರಾತ್ ನಲ್ಲೊಂದು ಘೋರ ದುರಂತ| ಕೇಬಲ್ ಸೇತುವೆ ಕುಸಿದು 400 ಮಂದಿ ನದಿಪಾಲು!!

ಸಮಗ್ರ ನ್ಯೂಸ್: ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ದೊಡ್ಡ ದುರಂತವೊಂದು ಸಂಭವಿಸಿದ್ದು, ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ಸುಮಾರು 400ರಷ್ಟು ಜನರು ನದಿಗೆ ಬಿದ್ದಿರುವ ಬಗ್ಗೆ ವರದಿಯಾಗಿದೆ.

Ad Widget ... ..

ಸ್ಥಳೀಯ ಮಾಹಿತಿಗಳ‌ ಪ್ರಕಾರ, ಮಚ್ಚು ನದಿಗೆ ನಿರ್ಮಿಸಲಾದ ಈ ಕೇಬಲ್ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಇದನ್ನು ಪಾರಂಪರಿಕ ಸೇತುವೆಯಲ್ಲಿ ಸೇರಿಸಲಾಗಿತ್ತು. ದೀಪಾವಳಿಯ ನಂತರ, ಗುಜರಾತಿ ಹೊಸ ವರ್ಷದಂದು ರಿಪೇರಿ ಮಾಡಿದ ನಂತರ ಅದನ್ನ ಮತ್ತೆ ಸೇತುವೆಯನ್ನು ಜನರ ಉಪಯೋಗಕ್ಕೆ ತೆರೆಯಲಾಗಿತ್ತು. ಸದ್ಯ ಈ ಸೇತುವೆ ಕುಸಿತ ಕಂಡಿದ್ದು, ಹಲವಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Ad Widget

ಸದ್ಯದ ಮಾಹಿತಿಗಳ ಪ್ರಕಾರ 100ಕ್ಕೂ‌ ಹೆಚ್ಚು ಮಂದಿಯನ್ನು ಪತ್ತೆಹಚ್ಚಲಾಗಿದ್ದು, ಕಾರ್ಯಾಚರಣೆ ಭರದಲ್ಲಿ ಸಾಗುತ್ತಿದೆ.

Leave a Comment

Your email address will not be published. Required fields are marked *