ಮಂಡ್ಯ: ಪುಣ್ಯಸ್ಮರಣೆ ಮುಗಿಸಿ ಸಾವಿಗೆ ಶರಣಾದ ಅಪ್ಪು ಅಭಿಮಾನಿ!

ಸಮಗ್ರ ನ್ಯೂಸ್: ಪುನೀತ್​ ರಾಜ್​ಕುಮಾರ್ ಅವರ​ ಮೊದಲ ವರ್ಷದ ಪುಣ್ಯ ಸ್ಮರಣೆ ದಿನವೇ ಅಭಿಮಾನಿಯೊಬ್ಬ ಸಾವಿನ ಹಾದಿ ಹಿಡಿದಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದಿದೆ.

Ad Widget ... ..

ಕಿರಣ್ (22) ಮೃತ ಅಪ್ಪು ಅಭಿಮಾನಿ. ಈತ ನಿನ್ನೆ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಕಿರಣ್​ ಪಾಲ್ಗೊಂಡಿದ್ದ. ಬಳಿಕ ಅನ್ನಸಂತರ್ಪಣೆಯನ್ನು ಕೂಡ ನಡೆಸಿದ್ದ. ಆದರೆ, ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ಬಂದು ಕಿರಣ್​ ಸಾವಿಗೆ ಶರಣಾಗಿದ್ದಾರೆ.

Ad Widget

ನಿನ್ನೆ (ಅ. 30) ರಾತ್ರಿ 10 ಗಂಟೆ ಸಮಯದಲ್ಲಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಕಿರಣ್​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೆಆರ್​ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *