Ad Widget .

ಕೂದಲೆಳೆಯಲ್ಲಿ ತಪ್ಪಿತು ಘೋರ ದುರಂತ| ಪೈಲಟ್ ನ ಸಮಯಪ್ರಜ್ಞೆ ಉಳಿಸಿತು ಪ್ರಯಾಣಿಕರ ಪ್ರಾಣ

ಸಮಗ್ರ ನ್ಯೂಸ್: ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ್ದು, ಇಂಡಿಗೋ ವಿಮಾನದ ಪೈಲಟ್ ನ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ.

Ad Widget . Ad Widget .

ದೆಹಲಿಯಿಂದ ಬೆಂಗಳೂರಿಗೆ ಹೊರಟ್ಟಿದ ಇಂಡಿಗೋ ವಿಮಾನದ ಇಂಜಿನ್​ನಲ್ಲಿ ದಿಢೀರ್​​ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಪೈಲೆಟ್​ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

Ad Widget . Ad Widget .

ಕಳೆದ ರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ 6E-2131 ನಂಬರಿನ ಇಂಡಿಗೋ ವಿಮಾನ ಟೇಕಾಫ್‌ ಆಗುತ್ತಿತ್ತು. ಆದರೆ ಟೇಕಾಫ್​​ ಆಗುತ್ತಿದ್ದಂತೆ ವಿಮಾನದ ಬಲಭಾಗದ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದಿಢೀರ್​​ ಬೆಂಕಿ ಕಾಣಿಸಿಕೊಳ್ತಿದ್ದಂತೆ ಪೈಲೆಟ್ ತಕ್ಷಣವೇ ವಿಮಾನವನ್ನ ದೆಹಲಿ ವಿಮಾನ ನಿಲ್ದಾಣದಲ್ಲೇ ಲ್ಯಾಂಡ್ ಮಾಡಿದ್ದಾರೆ.

ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಈ ಭಯಾನಕ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ವೀಡಿಯೋದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಎಂಜಿನ್‌ನಲ್ಲಿ ದಟ್ಟವಾದ ಬೆಂಕಿಯ ಕಿಡಿ ಚಿಮ್ಮುತ್ತಿರುವುದು ಕಂಡುಬಂದಿದೆ.

Leave a Comment

Your email address will not be published. Required fields are marked *