ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ| ವಿಶಿಷ್ಟವಾಗಿ ಅಪ್ಪುಗೆ ಸಫೋರ್ಟ್ ಮಾಡಿದ ಕೆಎಂಎಫ್

ಸಮಗ್ರ ನ್ಯೂಸ್: ಗಂಧದಗುಡಿ ಸಿನಿಮಾಗೆ ಕೆಎಂಎಫ್ ತನ್ನ ಬೆಂಬಲ ನೀಡಿದೆ. ಈ ಮೂಲಕ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪುನೀತ್ ರಾಜ್​ಕುಮಾರ್ ಅವರಿಗೆ ಗೌರವ ಸಲ್ಲಿಸಿದೆ.

Ad Widget ... ..

ನಂದಿನಿ ಹಾಲಿನ ಪ್ಯಾಕೇಟ್ ನಲ್ಲಿ ಗಂಧದಗುಡಿ ಹೆಸರನ್ನು ಮುದ್ರಿಸಿದ್ದು, ಕೆಎಂಎಫ್ ವಿಭಿನ್ನವಾಗಿ ಗೌರವ ತೋರಿದೆ.

Ad Widget

ಮುಂದಿನ 15 ದಿನಗಳ ಕಾಲ ಹಾಲಿನ ಪ್ಯಾಕೆಟ್ ಮೇಲೆ ಗಂಧದಗುಡಿ ಹೆಸರನ್ನು ಮುದ್ರಿಸಲು KMF ನಿರ್ಧರಿಸಿದೆ. ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ರೀತಿ ಗೌರವಿಸಲು ಕೆಎಂಎಫ್ ನಿರ್ಧರಿಸಲಾಗಿದೆ.

ಪುನೀತ್ ರಾಜ್​ಕುಮಾರ್ ಈ ಹಿಂದೆ KMFನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಹೀಗೆ ತನ್ನ ಅಂಬಾಸಿಡರ್ ಆಗಿದ್ದ ಅಪ್ಪು ರೈತರ ಸಹಾಯಕ್ಕೂ ಕೈ ಜೋಡಿಸಿದ್ದರು. ಹೀಗಾಗಿ ಕೆಎಂಎಫ್ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಲು ಕೆಎಂಎಫ್ ಮುಂದಾಗಿದೆ.

ಈ ಬಗ್ಗೆ KMF MD ಸತೀಶ್ ಮಾಹಿತಿ ನೀಡಿ, ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡುತ್ತಿರುವ ಸಲುವಾಗಿಯೂ ಈ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಹಾಲಿನ ಪ್ಯಾಕೆಟ್ ನ ಮೇಲೆ ಗಂಧದ ಗುಡಿ ಹೆಸರನ್ನು ಪ್ರಿಂಟ್ ಮಾಡೋ ಮೂಲಕ ಅಪ್ಪುಗೆ ಗೌರವ ಸಲ್ಲಿಕೆ ಮಾಡಲಾಗಿದೆ.

Leave a Comment

Your email address will not be published. Required fields are marked *