Ad Widget .

ಮಂಗಳೂರು: ಕಾಂತಾರ ಸಿನಿಮಾ ನೋಡಿ ಪ್ರೇರಿತಗೊಂಡ ಯುವತಿ|ಪಂಜುರ್ಲಿಯಂತೆ ವೇಷ ಧರಿಸಿದ ವೀಡಿಯೋ ವೈರಲ್

ಸಮಗ್ರ ನ್ಯೂಸ್: ಕಾಂತಾರ ಸಿನೇಮಾ ನೋಡಿ ಪ್ರೇರಿತಗೊಂಡ ಯುವತಿಯೊಬ್ಬಳು ಚಿತ್ರದಲ್ಲಿರುವಂತೆ ಪಂಜುರ್ಲಿಯಂತೆ ವೇಷ ಧರಿಸಿ ವೀಡಿಯೋ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಕಾಂತಾರ ಸಿನಿಮಾವನ್ನು ನೋಡಿದ ಈ ಯುವತಿ ​ ಪಂಜುರ್ಲಿಯಂತೆ ವೇಷ ಧರಿಸಿ ಕುಣಿದು ಕುಪ್ಪಳಿಸಿ ರೀಲ್ಸ್​ ಮಾಡಿದ್ದಾಳೆ.

Ad Widget . Ad Widget .

ವೃತ್ತಿಯಲ್ಲಿ ಮೇಕಪ್​ ಆರ್ಟಿಸ್ಟ್​ ಆಗಿರುವ ಶ್ವೇತಾ ರೆಡ್ಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡ ಬಳಿಕ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ಯುವತಿ ಪಂಜುರ್ಲಿಯಂತೆ ವೇಷ ಧರಿಸಿ ಕುಣಿದಿದ್ದಾಳೆ. ಇದು ದೈವಾರಾಧನೆಯ ಅಣಕ ಎಂಬ ಆರೋಪ ಕೇಳಿಬಂದಿದೆ. ಯುವತಿ ವಿರುದ್ದ ಮಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ದೈವಾರಾಧಕರು ಸಿನಿಮಾ ನೋಡಿ ಹುಡುಗಿ ಬಣ್ಣ ಹಚ್ಚಿ ಕಿರೀಟ ಕಟ್ಟಿ ಹುಚ್ಚಾಟ ನಡೆಸಿ ದೈವಾರಾಧನೆಯ ಪಾವಿತ್ರ್ಯಕ್ಕೆ ಧಕ್ಕೆ ತಂದಿದ್ದಾಳೆ ಎಂದು ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ವಿರುದ್ದ ದೂರು ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ. ಈ ರೀತಿ ಮಾಡಿದ್ದಕ್ಕೆ ತಕ್ಕ ಶಾಸ್ತಿಯಾಗುತ್ತದೆ ಎಂಬ ಕಮೆಂಟ್‌ಗಳನ್ನು ನೆಟ್ಟಿಗರು ಹಾಕಿದ್ದಾರೆ. ಆಕ್ರೋಶ ಹೆಚ್ಚಾದಂತೆ ಎಚ್ಚೆತ್ತುಕೊಂಡ ಯುವತಿ ಇನ್ಸ್ಟಾಗ್ರಾಮ್ ಖಾತೆಯಲ್ಲಿದ್ದ ವೀಡಿಯೊವನ್ನು ಕಿತ್ತುಹಾಕಿದ್ದಾಳೆ. ಆದರೆ ಈ ವೀಡಿಯೊ ಈಗಾಗಲೇ ವೈರಲ್ ಆಗಿದೆ.

Leave a Comment

Your email address will not be published. Required fields are marked *