Ad Widget .

ಶಿವಮೊಗ್ಗ ಗಲಭೆ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಶಿವಮೊಗ್ಗದ ಸೀಗೆಹಟ್ಟಿ ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ ಗಲಭೆ ಪ್ರಕರಣ ಸಂಬಂಧ ಪೊಲೀಸರು ಅಲರ್ಟ್ ಆಗಿದ್ದಾರೆ. ಸೋಮವಾರ ಗಲಾಟೆ ಮಾಡಿದ್ದ ಮೂವರನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಬಂಧಿತರನ್ನು 22 ವರ್ಷದ ಮಾರ್ಕೆಟ್ ಫೌಜಾನ್, 21 ವರ್ಷದ ಅಜ್ಹರ್ ಅಲಿಯಾಸ್ ಅಜ್ಜು, ಫರಾಜ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 2 ಬೈಕ್​ಗಳಲ್ಲಿ ಬಂದು ದಾಂಧಲೆ ಮಾಡಿದ್ದರು ಎನ್ನಲಾಗಿದೆ. ಈ ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲು ಆಗಿದ್ದವು.

Ad Widget . Ad Widget .

ಗಲಾಟೆಯಿಂದ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆ ಪೊಲೀಸರು ರೂಟ್ ಮಾರ್ಚ್ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ.

ಗಾಂಧಿ ಬಜಾರ್, ಬಿಎಚ್ ರಸ್ತೆ, ಸೀಗೆ ಹಟ್ಟಿ ಹಾಗೂ ಹಳೆ ಶಿವಮೊಗ್ಗ ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಲಾಗಿದೆ. ರಾಮಣ ಶೆಟ್ಟಿ ಪಾರ್ಕ್, ಗಾಂಧಿ ಬಜಾರ್ ಹಾಗೂ ಓಟಿ ರಸ್ತೆಯಲ್ಲಿ ಡಿಎಆರ್ ತುಕಡಿಗಳು ಹಾಗೂ ಕೆಎಸ್‌ಆರ್​​ಪಿ ತುಕಡಿಯ 1000ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *