ಪುತ್ತೂರು: ನಡುರಸ್ತೆಯಲ್ಲಿ ರಿಕ್ಷಾ ನಿಲ್ಲಿಸಿ ಮದ್ಯಪಾನ ಮಾಡಿ ನಿದ್ರಿಸಿದ ಚಾಲಕ.!

ಸಮಗ್ರ ನ್ಯೂಸ್: ಪುತ್ತೂರು-ದರ್ಬೆ ರಸ್ತೆಯ ಕಲ್ಲಾರೆ ಎಂಬಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ವಾಹನವನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಮದ್ಯಪಾನ ಮಾಡಿ ಮಲಗಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

Ad Widget ... ..

ಕಲ್ಲಾರೆ ಧನ್ವಂತ್ರಿ ಆಸ್ಪತ್ರೆ ಎದುರು ಆಟೋ ಚಾಲಕ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕುಡಿದು ಮಲಗಿದ್ದನ್ನು ಗಮನಿಸಿದ ಸಾರ್ವಜನಿಕರು ಪುತ್ತೂರು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಅಪಾಯ ತಪ್ಪಿಸಿದ್ದಾರೆ.

Ad Widget

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದಾಗ ಆಟೋ ಚಾಲಕ ಪಾನಮತ್ತನಾಗಿದ್ದ.

ಸಂಚಾರ ಪೊಲೀಸರು ಆಟೊ ಚಾಲಕನ ವಿರುದ್ಧ ಡ್ರಿಂಕ್ ಮತ್ತು ಡ್ರೈವ್ ಕೇಸ್ ದಾಖಲಿಸಿ ವಾಹನವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *