ಪ್ರಾರ್ಥನೆ ನಡೆಸುತ್ತಿದ್ದ ವೇಳೆ ಐಸಿಸ್ ಉಗ್ರರ ದಾಳಿ| ಮಸೀದಿಯಲ್ಲಿ 15 ಮಂದಿ ಸಾವು

ಸಮಗ್ರ ನ್ಯೂಸ್: ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ‌ ಐಸಿಸ್ ಉಗ್ರರು ದಾಳಿ ನಡೆಸಿದ್ದು, 15 ಮಂದಿ ಸಾವನ್ನಪ್ಪಿದ ಘಟನೆ ಇರಾನ್ ನಲ್ಲಿ ನಡೆದಿದೆ.

Ad Widget ... ..

ಇರಾನ್ ದಕ್ಷಿಣ ನಗರವಾದ ಶಿರಾಜ್‌ ನಲ್ಲಿರುವ ಶಿಯಾಗಳ ಪ್ರಮುಖ ಪವಿತ್ರ ಸ್ಥಳದಲ್ಲಿ ಬಂದೂಕುಧಾರಿ ಉಗ್ರರು ಗುಂಡಿನ ದಾಳಿ ನಡೆಸಿ ಕನಿಷ್ಠ 15 ಜನರನ್ನು ಕೊಂದಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

Ad Widget

ಇಬ್ಬರು ಬಂದೂಕುಧಾರಿಗಳನ್ನು ಬಂಧಿಸಲಾಗಿದೆ ಮತ್ತು ಮೂರನೆಯವರು ಪರಾರಿಯಾಗಿದ್ದಾರೆ. ಸುನ್ನಿ ಉಗ್ರಗಾಮಿಗಳು ಈ ಹಿಂದೆ ದೇಶದ ಶಿಯಾ ಬಹುಸಂಖ್ಯಾತರ ಪವಿತ್ರ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು. ಒಂದು ತಿಂಗಳಿನಿಂದ ಇರಾನ್ ಸರ್ಕಾರ ವಿರೋಧಿ ಪ್ರತಿಭಟನೆಗಳಿಂದ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

Leave a Comment

Your email address will not be published. Required fields are marked *