Ad Widget .

ಫ್ಯಾನ್‍ಗೆ ನೇಣು ಹಾಕಿಕೊಳ್ಳುತ್ತಿದ್ದ ಪತ್ನಿಯ ವೀಡಿಯೋ ಮಾಡಿಕೊಂಡ ಪತಿ..!!!
ಮುಂದೇನಾಯಿತು?

ಲಕ್ನೋ: ಮಹಿಳೆಯೊಬ್ಬಳು ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಪತಿ ಆಕೆಯನ್ನು ಉಳಿಸುವ ಬದಲು ಅದನ್ನು ವೀಡಿಯೋ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

Ad Widget . Ad Widget .

ಉತ್ತರ ಪ್ರದೇಶದ ಗುಲ್ಮೊಹರ್ ನಗರದಲ್ಲಿ ಈ ಘಟನೆ ನಡೆದಿದೆ. ಶೋಭಿತಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಹಾಗೂ ಸಂಜೀವ್ ಗುಪ್ತಾ ವೀಡಿಯೋ ಮಾಡಿದ ಆಕೆ ಪತಿ. ಶೋಭೀತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ ಆಕೆಯನ್ನು ಉಳಿಸುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಬದಲಿಗೆ ವೀಡಿಯೋ ಮಾಡುತ್ತಾ ನಿಂತಿದ್ದ. ಈ ವೇಳೆ ಶೋಭಿತಾ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ ಎರಡನೇ ಪ್ರಯತ್ನದಲ್ಲಿ ನೇಣು ಹಾಕಿಕೊಳ್ಳುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ.

Ad Widget . Ad Widget .

ಶೋಭೀತಾ ನೇಣು ಬಿಗಿದುಕೊಂಡು ಎಷ್ಟೇ ಒದ್ದಾಡುತ್ತಿದ್ದರೂ ಇದನ್ನು ವೀಡಿಯೋ ಮಾಡಿಕೊಳ್ಳುತ್ತಿದ್ದ ಸಂಜೀವ್ ಗುಪ್ತಾ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರಲಿಲ್ಲ. ಅದಾದ ಬಳಿಕ ಸಂಜೀವ್ ಗುಪ್ತಾ ಘಟನೆಗೆ ಸಂಬಂಧಿಸಿ ಶೋಭಿತಾಳ ತಂದೆ ರಾಜ್ ಕಿಶೋರ್ ಗುಪ್ತಾಗೆ ಕರೆ ಮಾಡಿ, ಶೋಭೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ.

ಈ ಹಿನ್ನೆಲೆಯಲ್ಲಿ ಕಿಶೋರ್ ಗುಪ್ತಾ ಗುಲ್ಮೊಹರ್ ನಗರದಲ್ಲಿರುವ ಶೋಭಿತಾಳ ಮನೆಗೆ ಹೋಗಿದ್ದಾರೆ. ಈ ವೇಳೆ ಹಾಸಿಗೆಯ ಮೇಲೆ ಆಕೆಯ ಶವವನ್ನು ಕಂಡಿದ್ದಾರೆ. ಅಷ್ಟೇ ಅಲ್ಲದೇ ಸಂಜೀವ್ ಅವಳು ಬದುಕಿಸಲು ಪ್ರಯತ್ನಿಸುತ್ತಿದ್ದ. ಆದರೆ ಅದಾಗಲೇ ಶೋಭಿತಾ ಶವವಾಗಿದ್ದಳು. ಘಟನೆಗೆ ಸಂಬಂಧಿಸಿ ರಾಜ್ ಕಿಶೋರ್ ಸಂಜೀವ್‍ನನ್ನು ವಿಚಾರಿಸಿದ್ದಾನೆ. ಆ ವೇಳೆ ಸಂಜೀವ್ ವೀಡಿಯೋವನ್ನು ರಾಜ್ ಕಿಶೋರ್‍ಗೆ ತೋರಿಸಿದ್ದಾನೆ.

ಶೋಭಿತಾಳ ಕುಟುಂಬದವರು ಘಟನೆಗೆ ಸಂಬಂಧಿಸಿ ಹನುಮಂತ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಜೀವ್ ಗುಪ್ತಾನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಜೋಡಿ 4 ವರ್ಷಗಳ ಹಿಂದೆ ಮದುವೆಯಾಗಿತ್ತು.

Leave a Comment

Your email address will not be published. Required fields are marked *