Ad Widget .

ಬೆಳ್ತಂಗಡಿ: ರಸ್ತೆ ಗುಂಡಿಗಳಲ್ಲಿ ದೀಪ ಬೆಳಗಿತು.!

ಸಮಗ್ರ ನ್ಯೂಸ್: ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡದ ಸರ್ಕಾರ, ಜನಪ್ರತಿನಿಧಿಗಳ ಕಾರ್ಯ ವೈಖರಿಯನ್ನು ಖಂಡಿಸಿ ದೀಪಾವಳಿ ಬಲಿಪಾಡ್ಯದ ಸಂಭ್ರಮದ ನಡುವೆಯೂ ಸಮಾನ ಮನಸ್ಕರ ಯುವಕರ ತಂಡ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ ಆಚರಣೆ ಮಾಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆಯಿತು.

Ad Widget . Ad Widget .

ಬುಧವಾರ ಸಂಜೆ ಬೆಳ್ತಂಗಡಿ ಸಮೀಪದ ಲಾಯಿಲ ಗ್ರಾಮದ ರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ದೀಪಾವಳಿ ಆಚರಣೆ ಮಾಡಲಾಯಿತು.

Ad Widget . Ad Widget .

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ , ಸಿಪಿಐ(ಎಂ) ನಾಯಕ ಶೇಖರ್ ಲಾಯಿಲ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿಯಲ್ಲಿರುವ ಗುಂಡಿಗಳಲ್ಲಿ ದಿನನಿತ್ಯ ಪ್ರಯಾಣಿಸುವ ಜನಪ್ರತಿನಿಧಿಗಳು , ಅಧಿಕಾರಿಗಳಿಗೆ ಕಣ್ಣು ಕಾಣದಿದ್ದು ದೀಪ ಹಚ್ಚಿ ಗುಂಡಿ ಕಾಣುವಂತೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾ ನಾಯಕ ಸಂದೀಪ್ ಎಸ್ ಅಳದಂಗಡಿ ಮಾತನಾಡಿ ನಮ್ಮ ತಾಲೂಕಿನ ಅವ್ಯವಸ್ಥೆ ಇಡೀ ರಾಜ್ಯದಲ್ಲಿಯೇ ಕುಖ್ಯಾತಿ ಪಡೆದಿದೆ. ರಾಜ್ಯ ಸಂಪುಟ ಸಚಿವ ಸುನೀಲ್ ಕುಮಾರ್ ಇತ್ತೀಚಿಗೆ ರಸ್ತೆ ಬದಲಿಸಿ ಪ್ರಯಾಣಿಸುವ ಮೂಲಕ ಶಾಸಕ , ಸಂಸದರಿಗೆ ನಾಚಿಕೆ ವಿಚಾರ ಎಂದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ , ಜಿಲ್ಲಾ ಯುವ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯದರ್ಶಿ ಪ್ರಜ್ವಲ್ ಜೈನ್ , ಯುವ ಇಂಟೆಕ್ ಅಧ್ಯಕ್ಷ ನವೀನ್ ಗೌಡ ಸವಣಾಲು , ಗಣೇಶ್ ಕಣಿಯೂರು , ಸಾಮಾಜಿಕ ಕಾರ್ಯಕರ್ತರಾದ ಅಲ್ತಪ್ , ಅಲ್ವಿನ್ , ನೌಷದ್ ಕೈಕಂಬ ಮತ್ತು ಇತರರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *