ಭೀಕರ ಅಪಘಾತಕ್ಕೆ ದಂಪತಿ ಬಲಿ; 9 ಮಂದಿ ಜಖಂ

ಸಮಗ್ರ ನ್ಯೂಸ್: ಕಬ್ಬುಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಗೆ ಹಿಂಬದಿಯಿಂದ ಕ್ರೂಸರ್‌ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಧೂಳಖೇಡ್ ಬಳಿ ಇಂದು(ಅ.27) ಮುಂಜಾನೆ ನಡೆದಿದೆ.

Ad Widget ... ..

ಘಟನೆಯಲ್ಲಿ ಬೆಳಗಾವಿ ಜಿಲ್ಲೆ ಅಥಣಿ ಮೂಲದ ದಂಪತಿ ಸಾವನ್ನಪ್ಪಿದ್ದಾರೆ. ಶಿವಪುತ್ರ ಶಿಂಧೆ (50) ಸುಮಿತ್ರಾ ಶಿಂಧೆ (45) ಮೃತಪಟ್ಟಿರುವ ದುರ್ದೈವಿಗಳು, ಅಪಘಾತದಲ್ಲಿ ಕ್ರೂಜರ್‌ನಲ್ಲಿದ್ದ 9 ಜನರಿಗೆ ಗಾಯಗಳಾಗಿದ್ದು,ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Ad Widget

ವರದಿ ಶಂಕರ್ ತೆಗ್ಗಿ ವಿಜಯಪುರ

Leave a Comment

Your email address will not be published. Required fields are marked *