ಸಮಗ್ರ ನ್ಯೂಸ್: ಫ್ಲಿಪ್‌ಕಾರ್ಟ್‌ನಿಂದ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಇದರ ಬದಲಾಗಿ ಅವರಿಗೆ ದೊಡ್ಡ ಕಲ್ಲು ಮತ್ತು ಇ-ತ್ಯಾಜ್ಯ ಬಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ತಮಗೆ ಮೋಸವಾಗಿರುವ ವಿಚಾರವನ್ನು ಮಂಗಳೂರಿನ ಚಿನ್ಮಯ ರಮಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ನಾನು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದೆ ಬದಲಾಗಿ ದೊಡ್ಡ ಕಲ್ಲು ಮತ್ತು ಇ-ತ್ಯಾಜ್ಯವನ್ನು ಸ್ವೀಕರಿಸಿದೆ! ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಮಾರಾಟದ ಸಮಯದಲ್ಲಿ!” ಎಂದು ಬರೆದಿದ್ದಾರೆ.
ಇನ್ನು ಬಾಕ್ಸ್ ತೆರೆಯುವ ವಿಡಿಯೋವನ್ನು ಕೂಡ ಅವರು ಪೋಸ್ಟ್ ಮಾಡಿದ್ದು, ಉತ್ಪನ್ನವು ತೆರೆದ ಬಾಕ್ಸ್ ವಿತರಣಾ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
Ordered for laptop and recived a big stone and E-waste ! During Diwali sale on Flipkart!@VicPranav @geekyranjit @ChinmayDhumal @GyanTherapy @Dhananjay_Tech @technolobeYT @AmreliaRuhez @munchyzmunch @naman_nan @C4ETech @r3dash @gizmoddict @KaroulSahil @yabhishekhd @C4EAsh pic.twitter.com/XKZVMVd4HK
— Chinmaya Ramana (@Chinmaya_ramana) October 23, 2022