ವಿಜಯಪುರ :‌ಗ್ರಹಣ ಕಾಲದಲ್ಲಿ ನಡೆಯಿತು ವಿಸ್ಮಯ| ನೀರು ತುಂಬಿದ ತಟ್ಟೆಯಲ್ಲಿ ಆಧಾರವಿಲ್ಲದೆ‌ ನಿಂತ ಒನಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಬಸವೇಶ್ವರ ನಗರದಲ್ಲಿ ಮಂಗಳವಾರ ಸಂಭವಿಸಿದ ಗ್ರಹಣ ಕಾಲದಲ್ಲಿ ವಿಸ್ಮಯ ನಡೆದಿದೆ.

Ad Widget ... ..

ಶಂಕಪ್ಪ ಮನ್ಮಥನಾಥ ಎಂಬುವವರ ಮನೆಯಲ್ಲಿ ಗ್ರಹಣ ವೇಳೆಯಲ್ಲಿ ನೀರು ತುಂಬಿದ್ದ ತಟ್ಟೆಯಲ್ಲಿ ಯಾವುದೇ ಆಧಾರವಿಲ್ಲದೆ ಒನಕೆ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು. ಈ ವಿಸ್ಮಯ ನೋಡಲು ಬಸವೇಶ್ವರ ನಗರದ ನಿವಾಸಿಗಳು ಆಗಮಿಸಿದ್ದರು.

Ad Widget

ಹಿಂದಿಕಾಲದಲ್ಲಿ ಗ್ರಹಣ ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ ಎಂದು ತಿಳಿಯಲು ತಲತಲಾಂತರದಿಂದ ಈ ಪದ್ದತಿಯನ್ನು ಅನುಸರಿಸಲಾಗುತ್ತಿದೆ ಎಂದು ಮನೆಯವರು ತಿಳಿಸಿದ್ದಾರೆ.

ಇನ್ನೂ ಕೆಲವೆಡೆ , ದೇವಸ್ಥಾನದ ಮುಂಭಾಗದಲ್ಲೂ ಇದೆ ರೀತಿ ಒನಕೆ ನಿಂತ ಬಗ್ಗೆ ವರದಿಯಾಗಿದೆ. ಗ್ರಹಣ ಆರಂಭವಾದಾಗ ಏಕಾಏಕಿ ಒನಕೆ ನಿಲ್ಲುತ್ತದೆ ಮತ್ತು ಮುಕ್ತಾಯವಾದಾಗ ಬೀಳುತ್ತದೆ ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *