ವಿಜಯಪುರ: ಸಾಪ್ಟವೇರ್ ಇಂಜಿನಿಯರ್ ನ ಕೃಷಿ ಪ್ರೀತಿ| ಸೀಬೆ ಬೆಳೆಯಲ್ಲಿ ಯಶ ಕಂಡ ಶಿವಾನಂದ

ಸಮಗ್ರ ನ್ಯೂಸ್ : ಆತ ವೃತ್ತಿಯಲ್ಲಿ‌ ಸಾಪ್ಟ್ ವೇರ್ ಇಂಜಿನಿಯರ್. ಆದರೆ ಪ್ರವೃತ್ತಿಯಲ್ಲಿ ಕೃಷಿಕ. ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದ ಕಾಖಂಡಕಿ ಗ್ರಾಮದ ಶಿವಾನಂದ ಸುನಗಡ್ ಅವರ ತೋಟದಲ್ಲಿ ಪೇರು (ಸೀಬೆ) ಗಿಡಗಳಲ್ಲಿ ಸಾಕಷ್ಟು ಫಲ ದೊರೆಯುತ್ತಿದೆ.

Ad Widget ... ..

ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಅವರು ಪ್ರವೃತ್ತಿಯಲ್ಲಿ ಪೇರಳೆ ಹಣ್ಣು ಬೆಳೆಗಾರರಾಗಿ ಯಶಸ್ವಿಯಾಗುತ್ತಿದ್ದು, ಎಕರೆಯೊಂದಕ್ಕೆ ಸುಮಾರು ರೂ. 5 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.

Ad Widget

ವಿಜಯಪುರ ಜಿಲ್ಲೆಯ BLDE ಎಂಜಿನಿಯರಿಂಗ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿರುವ ಶಿವಾನಂದ್ ಅವರಿಗೆ ಶುಭವಾಗಲಿ, ನೀರಾವರಿ ಯೋಜನೆಗಳು ಈ ಭಾಗದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಕಾರಣ ವ್ಯವಸಾಯ, ಕೃಷಿ, ತೋಟಗಾರಿಕೆಯಲ್ಲಿ ಹಲವರಿಗೆ ಆಸಕ್ತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ ಸಂತಸ ವ್ಯಕ್ತಪಡಿಸಿದ್ದಾರೆ.

ಶಂಕರ್ ತೆಗ್ಗಿ, ಸಮಗ್ರ ನ್ಯೂಸ್ ವಿಜಯಪುರ

Leave a Comment

Your email address will not be published. Required fields are marked *