Ad Widget .

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ| ಸಿಎಂ ಬೊಮ್ಮಾಯಿಗೆ ಸವಿವರ ಪತ್ರ ಬರೆದ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ| ಖಾವಂದರ ಪತ್ರದ ಒಕ್ಕಣೆ ಏನ್ಗೊತ್ತಾ?

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಟ್ಟಗಳ ರಸ್ತೆಯಲ್ಲಿ ಸುಗಮ ಸಾರಿಗೆ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಸುವ ಕುರಿತಂತೆ ಸಿಎಂ ಬೊಮ್ಮಾಯಿಗೆ ರಾಜ್ಯ ಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ಪತ್ರ ಬರೆದಿದ್ದಾರೆ.

Ad Widget . Ad Widget .

ಪತ್ರದಲ್ಲಿ ಶಿರಾಡಿ ಘಾಟ್ ಕುರಿತಂತೆ ಸವಿವರವಾದ ಪತ್ರ ಬರೆದು ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಪೂಜ್ಯ ಖಾವಂದರ ಪತ್ರದಲ್ಲೇನಿದೆ? ಓದಿ…

Ad Widget . Ad Widget .

“ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ಈ ದಿನ ದಕ್ಷಿಣಕನ್ನಡ ಟ್ರಕ್ ಮಾಲೀಕರ ಅಸೋಸಿಯೇಶನ್(ರಿ)ನಿಂದ ಒಂದು ಮನವಿ ಪತ್ರ ಬಂದಿದ್ದು, ಆ ಪತ್ರದಲ್ಲಿ ಅವರು ಕಳೆದ 2-3 ದಶಕಗಳಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಟ್ಟಗಳ ರಸ್ತೆಯಲ್ಲಿ ಅತಿವೃಷ್ಟಿ, ಭೂಕುಸಿತ, ರಸ್ತೆ ಕಾಮಗಾರಿ ಸೇರಿದಂತೆ ಇತರ ಕಾರಣಾಂತರಗಳಿಂದ ಸರಕಾರ ಘನ ವಾಹನಗಳಿಗೆ ಈ ರಸ್ತೆಯಲ್ಲಿ ಸಂಚರಿಸಲು ನಿರ್ಭಂಧ ವಿಧಿಸಿರುವುದರಿಂದ ಘನ ವಾಹನಗಳ ಮಾಲಕರು ಹಾಗೂ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಸುಗಮ ಸಾರಿಗೆ ವ್ಯವಸ್ಥೆಗೆ, ರಸ್ತೆ ಸಂಚಾರಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಸಲು ಸರಕಾರದ ಗಮನಸೆಳೆಯುವಂತೆ ಮನವಿ ಮಾಡಿಕೊಂಡಿರುತ್ತಾರೆ. ಅವರ ಪತ್ರದ ಸಾರಾಂಶ ಹೀಗಿದೆ.

“ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಸಂಪರ್ಕಿಸುವ ಮುಖ್ಯ ರಸ್ತೆಯಾಗಿದ್ದು, ಈ ಮಾರ್ಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಹಾಗೂ ಹಲವಾರು ಪ್ರಸಿದ್ಧ ಸ್ಥಳಗಳನ್ನು ಸಂಪರ್ಕಿಸಬಹುದಾಗಿದೆ. ಅತೀ ಮುಖ್ಯವಾಗಿ ಕರ್ನಾಟಕದ ಮಂಗಳೂರು ವ್ಯಾಪ್ತಿಯಲ್ಲಿ ಬರುವ ನವ ಮಂಗಳೂರು ಆರ್ಥಿಕತೆಯ ಹೆಬ್ಬಾಗಿಲಾದ ಬಂದರು, ಎಂ.ಸಿ.ಎಫ್, ಸಣ್ಣ/ಮಧ್ಯಮ/ಬೃಹತ್ ಕೈಗಾರಿಕೆಗಳ ಸರಕು ಸಾಗಾಟ ಅಂದರೆ ಖನಿಜ, ಕಲ್ಲಿದ್ದಲು, ರಸಗೊಬ್ಬರ, ಗ್ಯಾಸ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳಂತಹ ಹಾಗೂ ಸಿದ್ಧಪಡಿಸಿದ ಯಂತ್ರೋಪಕರಣ, ಆಹಾರ ಸಾಮಾಗ್ರಿಗಳಲ್ಲದೆ ಕೈಗಾರಿಕಾ ಘಟಕಗಳ ಉತ್ಪಾದನಾ ಕಚ್ಚಾವಸ್ತುಗಳ ಸಾಗಾಟಕ್ಕೆ ರಹ ದಾರಿಯಾಗಿರುತ್ತದೆ.

ಈ ರಾಷ್ಟ್ರೀಯ ಹೆದ್ದಾರಿಯು ಲಕ್ಷಾಂತರ ಜನರಿಗೆ ಮತ್ತು ಮಾಲಿಕರ ಕುಟುಂಬ ನಿರ್ವಹಣಿಗೆ ಆಶ್ರಯ ನೀಡಿದೆ. ಈ ರಾಷ್ಟ್ರೀಯ ಹೆದ್ದಾರಿಯನ್ನು ನಂಬಿ ಭಾರಿ ವಾಹನ, ಟ್ಯಾಂಕರ್, ಗ್ಯಾಸ್ ಬ್ಯಾಂಕ‌, ಕಂಟೈನಸ್, ಆಹಾರ ಸಾಮಾಗ್ರಿ ಸಾಗಾಟದ ವಾಹನ ಮಾಲೀಕರು ಮತ್ತು ಸಿಬ್ಬಂದಿಗಳು ಬದುಕು ಸೃಷ್ಟಿಸಿಕೊಂಡಿದ್ದಾರೆ.

ಈ ವ್ಯವಸ್ಥೆಗಾಗಿ ಅನೇಕ ಮಾಲಿಕರು ತಮ್ಮ ಆಸ್ತಿ, ಕುಟುಂಬದ ಒಡವೆ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಆಧಾರವಾಗಿಟ್ಟು ಸಾಲ ಪಡೆದು ಜೀವನ ಸಾಗಿಸಲು ಅವಲಂಬಿತರಾಗಿದ್ದು, ಪ್ರಸಕ್ತ ಹೆದ್ದಾರಿ ಇಲಾಖೆಯ ಅಸಡ್ಡೆಯಿಂದಾಗಿ ಈ ವರ್ಗದವರು ಪಡೆದ ಸಾಲದ ಮರುಪಾವತಿ ಮತ್ತು ಜೀವನ ನಿರ್ವಹಣಿಗೆ ತೀರಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯನ್ನು ತಿಂಗಳುಗಟ್ಟಲೆ ಬಂದ್ ಮಾಡಿ ಸಾಗಾಟವನ್ನು ನಿಷೇಧಿಸಿರುವುದರ ಪರಿಣಾಮ ಅಪಾರ ಬಂಡವಾಳ ಹೂಡಿದ ಮತ್ತು ಸಾಲ ಪಡೆದ ಭಾರಿ ವಾಹನ ಟ್ಯಾಂಕರ್, ಗ್ಯಾಸ್ ಟ್ಯಾಂಕರ್ ಇತರೆ ಅನೇಕರಿಗೆ ಜೀವನ ಸಾಗಿಸಲು ತೀರ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ಇಲಾಖೆ, ಎರಡು ಜಿಲ್ಲೆಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಜಂಟಿಸಭೆ ನಡೆಸಿ ತಕ್ಷಣ ಹಾಗೂ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕೆಂದು ವಿನಂತಿಸಿರುತ್ತಾರೆ.

ಮಂಗಳೂರಿನಿಂದ ಕಲ್ಲದ್ದಲು, ಖನಿಜ ಸಿದ್ಧಪಡಿಸುವ ಯಂತ್ರಗಳು, ಮೀನು ಮತ್ತು ಕಂಟೈನರ್‌ಗಳು, ಅಡುಗೆ ಅನಿಲ, ಗ್ಯಾಸ್ ಟ್ಯಾಂಕರ್‌ಗಳು, ಅನಿಲ ತುಂಬಿದ ವಾಹನಗಳು ಸೇರಿದಂತೆ ಕನಿಷ್ಠ ಸಾವಿರಕ್ಕೂ ಅಧಿಕ ವಾಹನಗಳು ಸಕಲೇಶಪುರ ಮಾರ್ಗದಲ್ಲಿ ಸಂಚರಿಸುತ್ತಿವೆ.

ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಸಕಲೇಶಪುರ ಮತ್ತು ಬಂಟ್ವಾಳ ಮಧ್ಯದಲ್ಲಿ ಟ್ರಕ್ ಟರ್‌ಮಿನಲ್ ವ್ಯವಸ್ಥೆಯಾಗಬೇಕು. ಇದರಿಂದ ವಾಹನಗಳ ಮತ್ತು ವಾಹನ ಸಿಬ್ಬಂದಿಗಳಿಗೆ ರಕ್ಷಣೆ ದೊರೆಯುತ್ತದೆ. ಆದುದರಿಂದ ಈ ರಾಷ್ಟ್ರೀಯ ಹೆದ್ದಾರಿಯನ್ನೇ ನಂಬಿರುವ ನಾಗರಿಕರ ಬದುಕಿಗೆ ಸ್ಥಿರತೆ ಮತ್ತು ಶಾಶ್ವತ ಪರಿಹಾರವನ್ನು ಕಲ್ಪಸುವ ಮೂಲಕ ನಮಗೆ ಆಶ್ರಯ ನೀಡಬೇಕು. ಅಂತೆಯೇ ಈ ಬಗ್ಗೆ ಜಂಟಿಸಭೆ ನಡೆಸಿ, ತಜ್ಞರ ಅಭಿಪ್ರಾಯ ಪಡೆದು ತುರ್ತಾಗಿ ಸುಗಮ ಸಂಚಾರಕ್ಕೆ ಶಾಸ್ವತ ವ್ಯವಸ್ಥೆಯನ್ನು ಕಲ್ಪಿಸಬೇಕು. ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಚುರುಕುಗೊಳಿಸುವ ಜೊತೆಗೆ ಘನವಾಹನ ಸಾಗಾಟಕ್ಕೆ ವ್ಯವಸ್ಥೆಯನ್ನು ಮಾಡಿಕೊಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿರುತ್ತಾರೆ. ವಿಧಿಸದೆ ತಾತ್ಕಾಲಿಕ

ಆದುದರಿಂದ ತಾವು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಟ್ಟಗಳ ರಸ್ತೆಯಲ್ಲಿ ಅತಿವೃಷ್ಟಿ, ಭೂಕುಸಿತ, ರಸ್ತೆ ಕಾಮಗಾರಿ ನಿರ್ವಹಣೆಯ ಸಂದರ್ಭದಲ್ಲಿ ಘನವಾಹನ ಸಂಚಾರಕ್ಕೆ ನಿರ್ಭಂಧ ವಿಧಿಸುವಾಗ ವಾಹನ ಮಾಲಕರು ಎದುರಿಸುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ದಕ್ಷಿಣಕನ್ನಡ ಟ್ರಕ್ ಮಾಲಕರ ಅಸೋಸಿಯೇಶನ್‌ರವರ ಆಶಯದಂತೆ ಸುಗಮ ರಸ್ತೆ ಸಂಚಾರಕ್ಕೆ ಶಾಶ್ವತ ಪರಿಹಾರವನ್ನು ಈ ಕೂಡಲೇ ಒದಗಿಸುವತ್ತ ಗಮನಹರಿಸುವಂತೆ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ.

Leave a Comment

Your email address will not be published. Required fields are marked *