ಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ
ಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ.
94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ ನ ದಕ್ಷಿಣ ಪ್ರಾಂತ್ಯದ ದೇಜ್ ಗೆ ಗ್ರಾಮದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಫಾರ್ಸ್ನ ದಕ್ಷಿಣ ಪ್ರಾಂತ್ಯದ ದೇಜ್ಗ ಗ್ರಾಮದಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ತಿಂಗಳ ಹಿಂದೆ ಗ್ರಾಮಸ್ಥರು ಸ್ನಾನಗೃಹಕ್ಕೆ ಕರೆದೊಯ್ದು ಸ್ನಾನನ ಮಾಡಿಸಿದ್ದರು ಎಂದು ಇರ್ನಾ(ಐಆರ್ಎನ್ಎ)ಯಲ್ಲಿ ವರದಿಯಾಗಿತ್ತು. ಹಾಜಿಯ ಕುರಿತಾಗಿ 2013ರಲ್ಲಿ ‘ಅಮೌ ಹೌಜಿಯ ವಿಚಿತ್ರ ಬದುಕು ಎಂಬ ಸಾಕ್ಷ್ಯ ಚಿತ್ರನಿರ್ಮಿಸಲಾಗುತ್ತು.
ಏಕಾಂಗಿ ವಾಸಿ : ಹಾಜಿ ಬಾಲ್ಯದಲ್ಲೇ ಮನೆಯಲ್ಲಿ ಜಗಳ ಮಾಡಿ ಕಾಡಿಗೆ ತೆರಳಿದ್ದರು. ಬಳಿಕ ಅಲ್ಲೇ ಗುಹೆಯಲ್ಲಿ ವಾಸ ಮಾಡಲು ಪ್ರಾರಂಭಿಸಿದರು. ಅಂದಿನಿಂದಲೂ ಸ್ನಾನ ಮಾಡುವುದನ್ನು ಹಾಜಿ ಬಿಟ್ಟಿದ್ದರು. ಇವರು ಕೊಳೆತ ಆಹಾರ ಮತ್ತು ಮಾಂಸಾಹಾರವನ್ನೇ ಸೇವಿಸುತ್ತಿದ್ದರು. ತುಕ್ಕು ಹಿಡಿದ ದಬ್ಬಿಯ ನೀರು ಕುಡಿಯುತ್ತಿದ್ದರು. ಉದ್ದ ಬೆಳದ ಕೂದಲನ್ನು ಬೆಂಕಿಯಿಂದ ಟ್ರಮ್ ಮಾಡಿಕೊಳ್ಳುತ್ತಿದ್ದರು. ಪ್ರಾಣಿಗಳ ಮಲವನ್ನೇ ಸುಟ್ಟು ಸಿಗರೇಟ್ ರೀತಿ ಸೇದಿ ಆನಂದಿಸುತ್ತಿದ್ದರು. ಹೀಗಾಗಿ ಇವರಿಗೆ ಕೊಳಕು ಮಾನವ ಎಂದು ಕರೆಯಲಾಗುತ್ತಿತ್ತು.