ಗೋಪೂಜೆ ದಿನವೇ ಅಕ್ರಮ ಗೋಮಾಂಸ ಸಾಗಾಣಿಕೆಗೆ ಯತ್ನ| ಇಬ್ಬರು ಆರೋಪಿಗಳು ಅರೆಸ್ಟ್

ಸಮಗ್ರ ನ್ಯೂಸ್: ದೀಪಾವಳಿಯ ಗೋ ಪೂಜಾ ದಿನವೇ ಅಕ್ರಮವಾಗಿ ಗೋ ಮಾಂಸ ಸಾಗಾಣಿಕೆಗೆ ಯತ್ನಿಸುತ್ತಿದ್ದ ಇಬ್ಬರನ್ನು ಪೋಲಿಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

Ad Widget ... ..

ತಾಲೂಕಿನ ಹಾಲೇಬೇಲೂರು ಕೊಪ್ಪಲು ಕಣಗಲ್ ಮನೆ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು ಗೋ ಮಾಂಸ ಮಾರಾಟ ಆರೋಪದ ಮೇಲೆ ಗ್ರಾಮಾಂತರ ಠಾಣೆ ಪೋಲಿಸರು ಚಂದ್ರು ಮತ್ತು ಲೋಕೇಶ್ ಎಂಬುವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Ad Widget

ಸುಮಾರು 100 ಕೆ.ಜಿ ಗೂ ಹೆಚ್ಚು ಗೋಮಾಂಸ ವಶ ಪಡೆದು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಾಂತರ ಠಾಣೆ ಪಿ.ಎಸ್.ಐ ಬಸವರಾಜ್, ನಗರ ಠಾಣ ಪಿ.ಎಸ್.ಐ ಶಿವಶಂಕರ್ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Leave a Comment

Your email address will not be published. Required fields are marked *