ಸಮಗ್ರ ನ್ಯೂಸ್: ದಾಂಪತ್ಯದಲ್ಲಿನ ಸಣ್ಣ ಸಣ್ಣ ಜಗಳಗಳು, ಸಂಶಯಗಳು, ಮುಂದೆ ಅನಾಹುತಕ್ಕೆ ಕಾರಣವಾಗುತ್ತದೆ. ಹೀಗೆ ಅನುಮಾನದ ಮೇಲೆ ಅಥವಾ ಆಕ್ರೋಶದ ವೇಳೆ ಪತಿಯನ್ನು ಕುಡುಕ ಅಥವಾ ಅಕ್ರಮ ಸಂಬಂಧ ಹೊಂದಿದವ ಎಂದು ಕರೆಯುವುದು ಕ್ರೌರ್ಯಕ್ಕೆ ಸಮ. ಇದು ಶಿಕ್ಷೆಗೆ ಅರ್ಹ ಎಂದು ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಒಂದುವೇಳೆ ಸಂಶಯದ ಮೇಲೆ ಏನೋ ಕರೆದು ಎಡವಟ್ಟು ಮಾಡಿಕೊಂಡರೆ, ಪತ್ನಿ ತಾನು ಮಾಡಿರುವ ಆರೋವನ್ನು ಸಾಬೀತುಪಡಿಸಲು ಸಾಧ್ಯವಾಗದೇ ಹೋದರೆ ಶಿಕ್ಷೆಗೆ ಗುರಿಯಾಗುತ್ತಾಳೆ. ಇದೀಗ ಗಂಡನ ವಿರುದ್ಧ ಸಿಟ್ಟಿನ ಭರದಲ್ಲಿ ಏನೋ ಹೇಳಿ ಸಂಕಷ್ಟಕ್ಕೆ ಸಿಲುಕಬೇಡಿ.
ಪುಣೆ ದಂಪತಿಗಳ ವಿಚ್ಚೇದನ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿದೆ. ಜಸ್ಟೀಸ್ ನಿತಿನ್ ಜಮ್ದಾರ್ ಹಾಗೂ ಜಸ್ಟೀಸ್ ಶರ್ಮಿಳಾ ದೇಶಮುಖ್ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಪತ್ನಿಯಿಂದ ವಿಚ್ಚೇದನ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಪುಣೆ ಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ 50 ವರ್ಷದ ಮಹಿಳೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿ, ಮಹಿಳೆ ಛೀಮಾರಿ ಹಾಕಿದೆ.
ಪತಿ ನಿವೃತ್ತಿ ಸೇನಾಧಿಕಾರಿ. ನನ್ನ ಪತಿ ಹಲವು ಅಕ್ರಮ ಸಂಬಂಧ ಹೊಂದಿದ್ದಾರೆ. ಜೊತೆಗೆ ಮದ್ಯವ್ಯಸನಿಯಾಗಿದ್ದಾರೆ. ಇದು ಸ್ತ್ರೀಯ ದಾಂಪತ್ಯ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಅರ್ಜಿಯಲ್ಲಿ ಕೋರಿದ್ದರು. ಬಾಂಬೆ ಹೈಕೋರ್ಟ್‌ನಲ್ಲಿ ಕಳೆದ ಕೆಲ ವರ್ಷದಿಂದ ವಿಚಾರಣೆ ನಡೆಯುತ್ತಿತ್ತು. ಮಹಿಳೆಯ ಅರ್ಜಿ ತಿರಸ್ಕರಿಸಿದ ಬಾಂಬೇ ಹೈಕೋರ್ಟ್, ಪತಿಯ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಕೌರ್ಯಕ್ಕೆ ಸಮವಾಗಿದೆ ಎಂದಿದೆ.
ಪತಿಯ ಚಾರಿತ್ರ್ಯದ ವಿರುದ್ಧ ಸುಳ್ಳು ಆರೋಪದಿಂದ ಆತನಿಗೆ ಸಮಾಜದಲ್ಲಿರುವ ಘನತೆ ಹಾಗೂ ಪ್ರತಿಷ್ಠೆಗೆ ಧಕ್ಕೆಯಾಗುತ್ತದೆ. ಅನಗತ್ಯ ಹಾಗೂ ಮಾನಹಾನಿ ಆರೋಪಗಳಿಂದ ಪತಿ ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಪತಿಯ ಮೇಲೆ ಮಾಡಿರುವ ಆರೋಪಗಳಿಗೆ ಪತ್ನಿ ಯಾವುದೇ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಮಹಿಳೆಯ ವಾದವನ್ನು ಬಾಂಬೆ ಹೈಕೋರ್ಟ್ ತಿರಿಸ್ಕರಿಸಿತು.