Ad Widget .

ಶಾಂಪೂ, ಕ್ರೀಮ್ ಗಳಲ್ಲಿ ಕ್ಯಾನ್ಸರ್ ಕಾರಕಗಳು ಪತ್ತೆ| ಹಲವು ಉತ್ಪನ್ನಗಳನ್ನು ಹಿಂಪಡೆದ ಯೂನಿಲಿವರ್

ಸಮಗ್ರ ನ್ಯೂಸ್: ಶಾಂಪೂವಿನಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿಯು ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.

Ad Widget . Ad Widget .

ಶಾಂಪೂವಿನಲ್ಲಿ ಕ್ಯಾನ್ಸರ್​ ಕಾರಕಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಯೂನಿಲಿವರ್ ಪಿಎಲ್​ಸಿಯು ಕಂಪನಿಯು ಡವ್ ಸೇರಿದಂತೆ ಏರೋಸಾಲ್ ಡ್ರೈ ಶಾಂಪೂಗಳ ಜನಪ್ರಿಯ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿದೆ.

Ad Widget . Ad Widget .

ಈ ಶಾಂಪೂಗಳಲ್ಲಿ ಬೆಂಜೀನ್ ಎನ್ನುವ ಕ್ಯಾನ್ಸರ್​ಕಾರಕ ಅಂಶವಿದ್ದು, ಇದು ಮಾನವನ ದೇಹವನ್ನು ಹಲವು ರೀತಿಯಲ್ಲಿ ಪ್ರವೇಶಿಸುವ ಅಪಾಯವಿದೆ ಎಂದು ಹೇಳಲಾಗಿದೆ.

ಮೂಗಿನ ಮೂಲಕ, ಬಾಯಿಯ ಮೂಲಕ ಮತ್ತು ಚರ್ಮದ ಮೂಲಕ ದೇಹವನ್ನು ಪ್ರವೇಶಿಸಬಹುದು. ಇದು ರಕ್ತದ ಕ್ಯಾನ್ಸರ್​ಗೆ ಕಾರಣವಾಗಬಹುದು. ಜನರು ಅಂತಹ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ತಮ್ಮ ಹಣವನ್ನು ಮರಳಿ ಪಡೆಯಲು UnileverRecall.com ನ ವೆಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು FDA ಹೇಳಿದೆ.. ಯೂನಿಲಿವರ್ ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಯೂನಿಲಿವರ್ Nexxus, Suave, Tresemme ಹಾಗೂ Tigiತಹ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಹಲವು ಸನ್​ಸ್ಕ್ರೀನ್ ಲೋಷನ್​ಗಳನ್ನು ಹಿಂಪಡೆಯಲಾಗಿದೆ. ಉದಾಹರಣೆಗೆ ಜಾನ್ಸನ್ ಮತ್ತು ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್ ಪರ್ಸನಲ್ ಕೇರ್ ಕಂ.ನ ಬನಾನಾ ಬೋಟ್ ಮತ್ತು ಬೈರ್ಸ್‌ಡಾರ್ಫ್ ಎಜಿಯ ಕಾಪರ್‌ಟೋನ್ ಜೊತೆಗೆ ಸ್ಪ್ರೇ-ಆನ್ ಆಂಟಿಪೆರ್ಸ್‌ಪಿರಂಟ್‌ಗಳಾದ ಪ್ರಾಕ್ಟರ್ ಹಾಗೂ ಗ್ಯಾಂಬಲ್ ಕೋಸ್ ಸೀಕ್ರೆಟ್ ಮತ್ತು ಓಲ್ಡ್ ಸ್ಪೈಸ್ ಮತ್ತು ಯೂನಿಲಿವರ್ಸ್ ಸುವೇವ್ ಮುಂತಾದವುಗಳನ್ನು ಹಿಂಪಡೆಯಲಾಗಿದೆ.

Leave a Comment

Your email address will not be published. Required fields are marked *