Ad Widget .

ಕೇತುಗ್ರಸ್ತ ಸೂರ್ಯಗ್ರಹಣ| ಎಲ್ಲೆಲ್ಲಿ ಹೇಗೆ ಸಂಭವಿಸುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ…

ಸಮಗ್ರ ನ್ಯೂಸ್: ದೀಪಾವಳಿ ಹೊತ್ತಲ್ಲೇ, ಇಂದು (ಅ.25) ಈ ವರ್ಷದ ಕೊನೆಯ ಹಾಗೂ 27 ವರ್ಷಗಳ ಬಳಿಕ ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇಪ್ಪತ್ತೇಳು ವರ್ಷಗಳ ಹಿಂದೆ ದೀಪಾವಳಿ ಹಬ್ಬದಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಇದೀಗ ಮತ್ತೆ ಆ ಸಮಯ ಬಂದಿದ್ದು, ಬಾನಂಗಳದಲ್ಲಿ ಸೂರ್ಯ ಬಳೆ ತೊಟ್ಟಂತೆ ಗೋಚರಿಸಲಿದ್ದಾನೆ. ಸೌರಮಂಡಲದ ವಿಸ್ಮಯಕಾರಿ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಜನ ಕಾತುರದಿಂದ ಕಾಯುತ್ತಿದ್ದಾರೆ.

Ad Widget . Ad Widget .

ಸೂರ್ಯ ಗ್ರಹಣ ಸಮಯ
ಗ್ರಹಣ ಸ್ಪರ್ಶಕಾಲ – ಮಧ್ಯಾಹ್ನ 2:15
ಗ್ರಹಣ ಮಧ್ಯಕಾಲ – ಮಧ್ಯಾಹ್ನ 4:18
ಗ್ರಹಣ ಮೋಕ್ಷಕಾಲ – ಸಂಜೆ 6:30

Ad Widget . Ad Widget .

ದೀಪಾವಳಿ ಅಮಾವಾಸ್ಯೆಯಾದ ಇಂದು ಮಧ್ಯಾಹ್ನ 2:15 ಕ್ಕೆ ಆರಂಭವಾಗುವ ಸೂರ್ಯಗ್ರಹಣ, 4 ಗಂಟೆ 18 ನಿಮಿಷಕ್ಕೆ ಬಹಳಷ್ಟು ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ಸಂಜೆ 6.30ಕ್ಕೆ ಗ್ರಹಣವು ಮುಕ್ತಾಯವಾಗುತ್ತದೆ.

ಸೂರ್ಯಗ್ರಹಣ ಎಲ್ಲೆಲ್ಲಿ ಗೋಚರಿಸುತ್ತೆ?
ಸೂರ್ಯಗ್ರಹಣ ದೆಹಲಿ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಉಜ್ಜಯಿನಿ, ವಾರಾಣಸಿ ಮತ್ತು ಮಥುರಾದಲ್ಲಿ ಗೋಚರವಾಗಲಿದೆ. ಬೆಂಗಳೂರಲ್ಲಿ ಸಂಜೆ 5.12 ರಿಂದ 5.55 ರವರೆಗೆ ಗ್ರಹಣ ಗೋಚರವಾಗಲಿದೆ. ಇನ್ನು, ಯುರೋಪ್, ಆಫ್ರಿಕಾ, ಏಷ್ಯಾ ಖಂಡದಲ್ಲಿ ಗ್ರಹಣ ಗೋಚರವಾಗುತ್ತದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರದ ವಿವರ
ಬೆಂಗಳೂರು 10.09% – ಸಂಜೆ 5:12 ಗಂಟೆಗೆ ಗ್ರಹಣ ಪ್ರಾರಂಭ
ಮೈಸೂರು 9.5%- ಸಂಜೆ 5:13 ಗಂಟೆಗೆ ಪ್ರಾರಂಭ
ಧಾರವಾಡ 16.09%- ಸಂಜೆ 5:01 ಗಂಟೆಗೆ ಪ್ರಾರಂಭ
ರಾಯಚೂರು 16.67%- ಸಂಜೆ 5:01 ಗಂಟೆಗೆ ಪ್ರಾರಂಭ
ಬಳ್ಳಾರಿ 14.64%- ಸಂಜೆ 5:04 ಗಂಟೆಗೆ ಪ್ರಾರಂಭ
ಬಾಗಲಕೋಟೆ 17.33%- ಸಂಜೆ 5:00 ಗಂಟೆಗೆ ಪ್ರಾರಂಭ
ಮಂಗಳೂರು 10.91%- ಸಂಜೆ 5:10 ಗಂಟೆಗೆ ಪ್ರಾರಂಭ
ಕಾರವಾರ 15.15%- ಸಂಜೆ 5:03 ಗಂಟೆಗೆ ಪ್ರಾರಂಭ.

ದೇಶದ ಇತರೆ ಭಾಗದಲ್ಲಿ ಗ್ರಹಣವು ಈ ಸಮಯದಲ್ಲಿ ಕಂಡುಬರುತ್ತದೆ.
ದೆಹಲಿ ಸಂಜೆ 4:29ಕ್ಕೆ
ಮುಂಬೈ ಸಂಜೆ 4:49ಕ್ಕೆ
ಕೋಲ್ಕತ್ತಾ ಸಂಜೆ 4:52ಕ್ಕೆ
ಚೆನ್ನೈ ಸಂಜೆ 5:14ಕ್ಕೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಕೇತುಗ್ರಸ್ತ ಸೂರ್ಯ ಗ್ರಹಣವು, ಸ್ವಾತಿ ನಕ್ಷತ್ರ ತುಲಾ ರಾಶಿಯಲ್ಲಿ ಸಂಭವಿಸುತ್ತಿದೆ. ಈ ಗ್ರಹಣದ ವೇಳೆ ಕೇತುವಿನ ಪ್ರಭಾವ ಸೂರ್ಯನ ಮೇಲೆ ಹೆಚ್ಚಾಗಿ ಬೀಳೋದ್ರಿಂದ ಇದನ್ನ ಕೇತುಗ್ರಸ್ತ ಸೂರ್ಯಗ್ರಹಣ ಅಂತಾ ಕರೆಯಲಾಗುತ್ತದೆ.

ಇನ್ನು, ವೈಜ್ಞಾನಿಕ ಲೋಕದ ಪ್ರಕಾರ, ಖಗೋಳ ಶಾಸ್ತ್ರಜ್ಞರ ಪ್ರಕಾರ ಇದು ಬಾನಲ್ಲಿ ನಡೆಯುವ ಒಂದು ಪ್ರಕ್ರಿಯೆ ಅಷ್ಟೆ. ಆದ್ರೆ ಇದು ಬಹಳಷ್ಟು ವಿಚಿತ್ರವಾದ, ಅಪಾಯಕಾರಿಯಾದ, ಪ್ರಮಾಧವನ್ನ ಸೃಷ್ಟಿಸುವಂತಹ ಸೂರ್ಯಗ್ರಹಣವೆಂಬ ಮಾತು ಇಡೀ ಜಗತ್ತಿನ ನಾನಾ ಧರ್ಮಗಳ ಜ್ಯೋತಿಷ್ಯ ವಲಯದ್ದಾಗಿದೆ.

ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳೇನು?
ಗ್ರಹಣ ಸ್ಪರ್ಶವಾದ ತಕ್ಷಣ ಸ್ನಾನ ಮಾಡಬೇಕು
ಗ್ರಹಣ ಸ್ಪರ್ಶವಾದಾಗಿನಿಂದ ಮುಗಿಯುವವರೆಗೂ ಏನನ್ನೂ ತಿನ್ನಬಾರದು
ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು, ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು.
ಪೂಜೆಯ ನಂತರ ಆಹಾರ ಸೇವಿಸಬೇಕು
ಸ್ನಾನ ಆದ ತಕ್ಷಣ ಏನನ್ನಾದರೂ ದಾನ ಮಾಡಬೇಕು, ದಾನ ಮಾಡಲು ಆಗದವರು ದೇವರ ಮಂತ್ರಗಳನ್ನ ಪಠಿಸಬೇಕು
ಗ್ರಹಣ ಕಾಲ ಆರಂಭದಿಂದ ಮಧ್ಯಕಾಲದವರೆಗೂ ಪಿತೃಗಳನ್ನು ನೆನೆದು ತರ್ಪಣ ನೀಡಬೇಕು
ಗ್ರಹಣ ಕಾಲದಲ್ಲಿ ನಿದ್ದೆ ಮಾಡಬಾರದು
ಗ್ರಹಣ ಸಂಭವಿಸುವ ಮುನ್ನಾ ಹಬ್ಬದಾಚರಣೆ ಮುಗಿಸಬೇಕು
ಅಮಾವಾಸ್ಯೆ ಗ್ರಹಣ ಕಾಲದಲ್ಲಿ ನದಿ ನೀರಿನಲ್ಲಿ ತಪಸ್ಸು ಸೂಕ್ತ
ಅಮಾವಾಸ್ಯೆ ಗ್ರಹಣ ಕಾಲದಲ್ಲಿ ಜಪ-ತಪ ಸೂಕ್ತ
ಗ್ರಹಣ ಸಮಯದಲ್ಲಿ ದೇವತಾ ಪಾರ್ಥನೆಯಿಂದ ಸಿದ್ಧಿ ಪ್ರಾಪ್ತಿ
ಗ್ರಹಣ ಕಾಲದಲ್ಲಿ ದೇವರ ನಾಮಸ್ಮರಣೆಯಿಂದ ಸಕಲ ದೋಷ ನಿವಾರಣೆ
ಗರ್ಭಿಣಿಯರು ಎಚ್ಚರದಿಂದಿರಬೇಕು
ಮಕ್ಕಳು-ವೃದ್ಧರು ಮನೆಯೊಳಗಿರುವುದು ಸೂಕ್ತ
ದೈವ ಸ್ಮರಣೆಯಿಂದ ಧನಾತ್ಮಕ ಶಕ್ತಿ ವೃದ್ಧಿ. ಹಬ್ಬದ ತಿನಿಸು ಪದಾರ್ಥಗಳ ಮೇಲೆ ದರ್ಬೆ ಹುಲ್ಲನ್ನು ಹಾಕುವುದು ಒಳ್ಳೆಯದು.
ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಒಳಿತಲ್ಲ.

Leave a Comment

Your email address will not be published. Required fields are marked *